Advertisement

ಗಡಿಭಾಗದಲ್ಲಿ ಕಾವೇರಿದ ಪ್ರಚಾರ; ಮತದಾರ ಮೌನ

03:19 AM Apr 14, 2019 | Team Udayavani |

ಈಶ್ವರಮಂಗಲ: ಕರ್ನಾಟಕ -ಕೇರಳ ಗಡಿಭಾಗದ ಪ್ರದೇಶಗಳ ಮತದಾರರು – ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಎ.18 ಮತ್ತು ಎ.23 ಬಹಳ ವಿಶೇಷ ದಿನಗಳು.

Advertisement

ಮೊದಲಿಗೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ, ಅನಂತರ ಕಾಸರಗೋಡು ಕ್ಷೇತ್ರದಲ್ಲಿ ಚುನಾವಣೆ ನಡೆಯುವುದರಿಂದ ಈ ಭಾಗದ ಕಾರ್ಯಕರ್ತರು ಎರಡೂ ಕಡೆ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ರಾಜ್ಯಗಳ ಕಾರ್ಯಕರ್ತರು ಸಮ್ಮಿಲನಗೊಂಡು ಮತಯಾಚನೆ ಯಲ್ಲಿ ತೊಡಗಿದ್ದಾರೆ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿಭಾಗದಲ್ಲಿ ಪುತ್ತೂರು ತಾಲೂಕಿನ ನೆಟ್ಟಣಿಗೆಮುಟ್ನೂರು, ಬಡಗನ್ನೂರು ಮತ್ತು ಪಾಣಾಜೆ ಗ್ರಾಮಗಳಿವೆ. ನೆಟ್ಟಣಿಗೆಮುಟ್ನೂರು ಗ್ರಾ.ಪಂ.ನಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಇದ್ದರೆ ಬಡಗನ್ನೂರು ಮತ್ತು ಪಾಣಾಜೆ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ನಡೆಸುತ್ತಾರೆ. ನೆರೆಯ ಬೆಳ್ಳೂರು ಗ್ರಾ.ಪಂ. ಬಿಜೆಪಿ ಅಡಳಿತದಲ್ಲಿದ್ದರೆ, ದೇಲಂಪಾಡಿ ಗ್ರಾ.ಪಂ. ಸಿಪಿಎಂ ಬೆಂಬಲಿತರ ಹಿಡಿತದಲ್ಲಿದೆ.

ದಕ್ಷಿಣಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಕೆಲವು ವರ್ಷ ಗಳಿಂದ ಕೇರಳ ರಾಜ್ಯ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಬರಿಮಲೆ ವಿವಾದ ತಾರಕಕ್ಕೇರಿದ್ದಾಗ ಆ ಬಗ್ಗೆ ಕೇಂದ್ರದ ನಾಯಕರಿಗೆ ಪರಿಸ್ಥಿತಿಯ ವರದಿ ನೀಡಿದ್ದಾರೆ. ಈ ಬಾರಿ ಅವರು ದಕ್ಷಿಣಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಗಡಿಭಾಗದಲ್ಲಿ ನೆರೆಯ ಕ್ಷೇತ್ರದ ಕಾರ್ಯಕರ್ತರು ಅವರ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಗಡಿಭಾಗದ ಕಾರ್ಯಕರ್ತರ ಬೆಂಬಲದೊಂದಿಗೆ ರೋಡ್‌ ಶೋ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡುತ್ತ ಭರ್ಜರಿ ಪ್ರಚಾರದಲ್ಲಿದ್ದಾರೆ. ಯುವ ನೇತಾರನಾಗಿದ್ದು, ಹೊಸಮುಖ ವಾಗಿರುವುದರಿಂದ ಮತ್ತು ಜೆಡಿಎಸ್‌ ಬೆಂಬಲ ಇರುವುದರಿಂದ ಕಾರ್ಯ ಕರ್ತರು ಅವರ ಪರ ಹೊಸ ಹುಮ್ಮಸ್ಸಿ ನಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಸರಗೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ್‌ ತಂತ್ರಿ ಕಣದಲ್ಲಿದ್ದು, ಇವರ ಕುಂಬಳೆ ಸೀಮೆಗೆ ಚಿರಪರಿಚಿತರು. ಕುಂಬಳೆ ಧಾರ್ಮಿಕ ಸೀಮೆಯ ವ್ಯಾಪ್ತಿ ಪುತ್ತೂರು ತನಕವೂ ಇರುವುದರಿಂದ ಅವರ ಪರವಾಗಿ ಇಲ್ಲಿಯ ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಯುಡಿಎಫ್, ಎಲ್‌ಡಿಎಫ್ ಅಭ್ಯರ್ಥಿಗಳು ರವೀಶ್‌ ತಂತ್ರಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

Advertisement

ಮತದಾರ ಮೌನಕ್ಕೆ ಶರಣು
ಪ್ರಚಾರ ಭರಾಟೆಯಿದ್ದರೂ ಮತ ದಾರ ಮೌನವಾಗಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರ ಮನೆಗೆ ಭೇಟಿ ಸಂದರ್ಭ ಎಲ್ಲದಕ್ಕೂ ಸಮ್ಮತಿ ಸೂಚಿಸುತ್ತಿದ್ದಾನೆ. ಬರದ ಛಾಯೆಯಡಿ ಕೃಷಿ ಉಳಿಸಿ ಕೊಳ್ಳುವ- ಮಳೆಗಾಲದ ತಯಾರಿ ಯಲ್ಲಿ ಮುಳುಗಿದ್ದಾನೆ.

– ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next