Advertisement

ದ.ಕ. ಜಿಲ್ಲೆಯಲ್ಲಿ 38,051 ಮಂದಿಯ ತಪಾಸಣೆ

11:31 PM Mar 26, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಈವರೆಗೆ 38,051 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಪ್ರಸ್ತುತ 2,902 ಮಂದಿ ಗೃಹ ನಿಗಾವಣೆಯಲ್ಲಿದ್ದಾರೆ.

Advertisement

ತಪಾಸಣಾ ಕಾರ್ಯ ಮುಂದುವರಿಯುತ್ತಿದ್ದು, ಗುರುವಾರ 46 ಮಂದಿಯನ್ನು ತಪಾಸಣೆ ಮಾಡ ಲಾಗಿದೆ. 27 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 20 ಮಂದಿ ಈಗಾಗಲೇ 28 ದಿನಗಳ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 4 ಮಂದಿಯ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಗುರುವಾರ 9 ಮಂದಿಯ ವರದಿ ಬಂದಿದ್ದು, ಯಾರಲ್ಲಿಯೂ ಕೋವಿಡ್‌ 19 ದೃಢಪಟ್ಟಿಲ್ಲ. ವಿವಿಧ ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಮೂರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಮತ್ತೆ ದಾಖಲಾಗಿದ್ದಾರೆ.

ಮಂಗಳೂರಿನಲ್ಲಿ ಭಟ್ಕಳದ ಓರ್ವನಿಗೆ ಮತ್ತು ಕಾಸರಗೋಡು ಮೂಲದ ನಾಲ್ವರಿಗೆ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯನ್ನು ಕೋವಿಡ್‌ 19 ಚಿಕಿತ್ಸೆಗಾಗಿ ಪ್ರತ್ಯೇಕಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.

ಸಹಾಯವಾಣಿ ಸಂಖ್ಯೆ 1077
ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಯಾವುದೇ ತುರ್ತು ವಿಚಾರಣೆ, ವೈದ್ಯಕೀಯ ವಿಚಾರಣೆ, ವೈದ್ಯರ ಸಮಾಲೋಚನೆ ಸಂಬಂಧಿಸಿದ ಮಾಹಿತಿ ಗಾಗಿ ಸಹಾಯವಾಣಿ ಸಂಖ್ಯೆ 1077ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಅನಗತ್ಯ ತಿರುಗಾಡಿದವರಿಗೆ ಲಾಠಿ ರುಚಿ
ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ವಿವಿಧ ಭಾಗಗಳಲ್ಲಿ ಸುತ್ತಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಮಂಗಳೂರಿನ ಪಂಪ್‌ವೆಲ್‌ ಸೇರಿದಂತೆ ವಿವಿಧ ಭಾಗಗಳಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದವರನ್ನು ಪ್ರಶ್ನಿಸಿ ಲಾಠಿ ರುಚಿ ತೋರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next