Advertisement

ದ.ಕ. ಜಿಲ್ಲೆಗೆ ಸಕ್ಕರೆ, ಸನ್‌ ಫ್ಲವರ್; ಉಡುಪಿಗೆ ಸಕ್ಕರೆ, ಪಾಮೋಲಿನ್‌

08:40 AM Jul 21, 2017 | Team Udayavani |

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗಿ ವಿತರಣೆಯಾಗದೆ ಬಾಕಿ ಉಳಿದಿರುವ ಸಕ್ಕರೆ, ಸನ್‌ ಫ್ಲವರ್ ಆಯಿಲ್‌ ಮತ್ತು ಪಾಮೋ ಲಿನ್‌ ದಾಸ್ತಾನನ್ನು ವಿಲೇವಾರಿ ಮಾಡುವ ನಿಟ್ಟಿ ನಲ್ಲಿ ಈ ತಿಂಗಳಲ್ಲಿ ಬಿಪಿಎಲ್‌ ಕಾರ್ಡುಗಳಿಗೆ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸಕ್ಕರೆ ಮತ್ತು ಸನ್‌ ಫ್ಲವರ್ ಆಯಿಲ್‌ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಕ್ಕರೆ ಮತ್ತು ಪಾಮೋಲಿನ್‌ ಎಣ್ಣೆಯನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. 

Advertisement

ಬಿಪಿಎಲ್‌ ಕಾರ್ಡುಗಳಿಗೆ ಸಕ್ಕರೆ, ಪಾಮೋಲಿನ್‌ ಮತ್ತು ಉಪ್ಪು ವಿತರಣೆಯನ್ನು ಎರಡು ತಿಂಗಳ ಹಿಂದೆ ನಿಲ್ಲಿಸ ಲಾಗಿತ್ತು. ಉಪ್ಪು ಬೇಡಿಕೆ ಇಲ್ಲದ ಕಾರಣ ಸಕ್ಕರೆಗೆ ಕೇಂದ್ರ ಸರಕಾರ ಸಬ್ಸಿಡಿ ನಿಲ್ಲಿಸಿದ್ದರಿಂದ ಹಾಗೂ ಪಾಮೋಲಿನ್‌ ಮಾರಾಟದಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಕಾರಣ ಇವುಗಳ ವಿತರಣೆಯನ್ನು ನಿಲ್ಲಿಸಲಾಗಿತ್ತು. ಈಗ ದಾಸ್ತಾನನ್ನು ಖಾಲಿ ಮಾಡುವ ಉದ್ದೇಶದಿಂದ ಈ ಒಂದು ತಿಂಗಳ ಮಟ್ಟಿಗೆ ಮಾತ್ರ ಸಕ್ಕರೆ, ಪಾಮೋಲಿನ್‌ ಮತ್ತು ಸನ್‌ ಫÉವರ್‌ ಆಯಿಲನ್ನು ಕಾರ್ಡುದಾರರಿಗೆ ವಿತರಣೆ ಮಾಡಲು ನಿರ್ಧರಿಸ ಲಾಗಿದೆ ಎಂದವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪಾಮೋಲಿನ್‌ ಎಣ್ಣೆಯ ಲಕೋಟೆಯಲ್ಲಿ “ಬೆಸ್ಟ್‌ ಫೋರ್‌ ಯೂಸ್‌ ಬಿಫೋರ್‌ 4 ಮಂತ್ಸ್’ ಎಂದು ಬರೆಯ ಲಾಗಿ ದ್ದರೂ ಅದನ್ನು ಬಳಕೆ ಮಾಡಬಹುದೆಂದು ಬೆಂಗ ಳೂರಿನ ಸೆಂಟ್ರಲ್‌ ಲ್ಯಾಬ್‌ನಲ್ಲಿ ಪರೀಕ್ಷಿಸಿ ಶಿಫಾರಸು ಪತ್ರ ಪಡೆಯ ಲಾಗಿದೆ. ಹಾಗೆಯೇ ಜಿಲ್ಲಾ ಮಟ್ಟದಲ್ಲಿ ಟೆಸ್ಟ್‌ ಮಾಡಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. 

ಕಾರ್ಡ್‌ಗೆ ಮನೆಯಿಂದಲೇ ತಿದ್ದುಪಡಿ
ಹೊಸ ಪಡಿತರ ಚೀಟಿಗಳ ಮುದ್ರಣ ಕಾರ್ಯ ಪ್ರಗತಿ ಯಲ್ಲಿದೆ. ಮುಂದೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಕಚೇರಿ ಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ಮನೆ ಯಲ್ಲಿಯೇ ಕುಳಿತು ಮೊಬೈಲ್‌ ಫೋನ್‌ನಲ್ಲಿ ಸರಿ ಪಡಿಸುವ ವ್ಯವಸ್ಥೆ ಬರಲಿದೆ. ಇದರ ಸಾಫ್ಟ್‌ ವೇರ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರ  ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಕರ್ನಾಟಕ ಬಾವುಟ-ತಪ್ಪೇನಿದೆ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಬಾವುಟ ರಚಿಸುವುದರಲ್ಲಿ ತಪ್ಪೇನಿದೆ? ದೇಶದ ಸಂವಿಧಾನದ ಆಶಯಗಳಿಗೆ ಪೂರಕ ವಾದ ಧ್ವಜ ಬರುವುದಾದರೆ ಅದನ್ನು ಬೇಡ ಎನ್ನುವುದೇಕೆ ಎಂದು ಸಚಿವ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ. 
ಏನಿದ್ದರೂ ಈಗ ಯಾವುದೂ ಅಂತಿಮಗೊಂಡಿಲ್ಲ. ಈಗ ಸಮಿತಿಯೊಂದನ್ನು ರಚಿಸಲಾಗಿದೆ. ಅಧ್ಯಯನ ಸಮಿತಿ ವರದಿ ಬಂದ ಬಳಿಕ ನೋಡೋಣ ಎಂದರು. 

Advertisement

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹರೀಶ್‌ ಕುಮಾರ್‌, ಮೆಲ್ವಿನ್‌ ಡಿ’ಸೋಜಾ, ಮಲಾರ್‌ ಮೋನು, ಚಂದ್ರಹಾಸ ಕರ್ಕೇರಾ, ಹರ್ಷರಾಜ್‌ ಮುಧ್ಯ, ಸದಾಶಿವ ಉಳ್ಳಾಲ, ಎನ್‌.ಎಸ್‌. ಕರೀಂ, ಸಂತೋಷ್‌ ಕುಮಾರ್‌ ಶೆಟ್ಟಿ, ನಝೀರ್‌ ಬಜಾಲ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next