Advertisement

ಬೆಳ್ಳಂಬೆಳಗ್ಗೆ ಡಿಕೆ ಬ್ರದರ್ಸ್‌ ತುರ್ತು ಪ್ರಸ್‌ ಮೀಟ್‌:ಹೇಳಿದ್ದೇನು?

08:49 AM May 31, 2018 | Team Udayavani |

ಬೆಂಗಳರೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ  ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ನಮ್ಮ 11 ಮಂದಿಯ ವಿರುದ್ಧ ಯಾವುದೇ ಕ್ಷಣದಲ್ಲಿ ಸಿಬಿಐನಿಂದ ಸರ್ಚ್‌ ವಾರಂಟ್‌ ಹೊರಡಿಸಬಹುದು ಎಂದು ಕಾಂಗ್ರೆಸ್‌ ನಾಯಕರಾದ ಡಿ.ಕೆ .ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ತುರ್ತು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. 

Advertisement

ಸದಾಶಿವ ನಗರದ ನಿವಾಸದಲ್ಲಿ  ಗುರುವಾರ ಬೆಳಗ್ಗೆ  ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸಹೋದರರು. ‘ಮೋದಿ, ಶಾ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ. ನಂಜಿನ ರಾಜಕಾರಣ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ 11 ಜನರ ಮೇಲೆ ಸಿಬಿಐ,ಇಡಿ ಮತ್ತು ಐಟಿ  ಮೂಲಕ ಕೇಸ್‌ ದಾಖಲಿಸಿ ಸರ್ಚ್‌ ವಾರೆಂಟ್‌ ಜಾರಿ ಮಾಡಲು ಸಿದ್ದತೆ ನಡೆಸಿದ್ದಾರೆ’ ಎಂದರು. 

‘ನಮಗೆ ಮೂರ್‍ನಾಲ್ಕು ತಿಂಗಳುಗಳಿಂದ ಅನೇಕ ಮಾಹಿತಿಗಳು ಬಂದಿವೆ.ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು  ನಮಗೆ ಗೌಪ್ಯತೆಯನ್ನು ತಿಳಿಸಿದ್ದಾರೆ. ಅವರ ಹೆಸರು ಹೊರಗೆ ಹಾಕಲು ಇಷ್ಟಪಡುವುದಿಲ್ಲ ಅವರು ನಮಗೆ ಕೆಲ ಮಾಹಿತಿಗಳನ್ನು ಕೊಟ್ಟಿದ್ದಾರೆ’ ಎಂದರು. 

‘ನಮ್ಮ ಕುಟುಂಬವನ್ನು ಬೆದರಿಸಿ ಬಗ್ಗಿಸಬಹುದು ಎಂದುಕೊಂಡರೆ ನಾವು ಜಗ್ಗುವವರಲ್ಲ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ನಾವು ಎಂದು ತಪ್ಪು ಮಾಡಿದವರಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ, ಅಕ್ರಮಗಳನ್ನು ಮಾಡಿಲ್ಲ. ಸುಳ್ಳು ಕೇಸ್‌ ದಾಖಲಿಸಿ ನಮ್ಮ ಧ್ವನಿ ಅಡಗಿಸಬಹುದು ಎಂದರೆ ಅದು ನಿಮ್ಮ ಭ್ರಮೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next