Advertisement

ದ.ಕ.: ಮನೆ ತಲುಪಿದ 9 ವಿದ್ಯಾರ್ಥಿಗಳು ; ವಿಮಾನ ನಿಲ್ದಾಣದಲ್ಲಿ ಹೆತ್ತವರ ಸಂಭ್ರಮ

02:41 AM Mar 08, 2022 | Team Udayavani |

ಮಂಗಳೂರು: ಉಕ್ರೇನ್‌ನಲ್ಲಿದ್ದ ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ 9 ಮಂದಿ ಸೋಮವಾರ ಮನೆ ಸೇರಿದ್ದಾರೆ. ಇದರೊಂದಿಗೆ ಒಟ್ಟು 14 ಮಂದಿ ಮನೆ ತಲುಪಿದಂತಾಗಿದೆ.

Advertisement

ಸೋಮವಾರ ಮಂಗಳೂರಿನ ಕ್ಲೇಟನ್‌ ಓಸ್ಮಂಡ್‌ ಡಿ’ಸೋಜಾ, ಅನೈನಾ ಅನಾ, ಅಹಮ್ಮದ್‌ ಸಾದ್‌ ಅರ್ಷದ್‌, ಲಾಯ್ಡ ಆ್ಯಂಟೊನಿ ಪಿರೇರಾ, ಸಾಕ್ಷಿ ಸುಧಾಕರ್‌, ಪೃಥ್ವಿರಾಜ್‌ ಭಟ್‌, ಡೇಲ್‌ ಆ್ಯಂಡ್ರಿಯಾನ ಲೂವಿಸ್‌, ಲಕ್ಷಿತಾ ಪುರುಷೋತ್ತಮ, ಮೂಡುಬಿದಿರೆಯ ಶಾಲ್ವಿನ್‌ ಪ್ರೀತಿ ಅರಾನ್ಹ ಆಗಮಿಸಿದರು. ಹೆತ್ತವರು ವಿಮಾನ ನಿಲ್ದಾಣ
ದಲ್ಲಿ ಮಕ್ಕಳನ್ನು ತಬ್ಬಿಕೊಂಡು ಗದ್ಗದಿತರಾ ದರು. ಕೇಂದ್ರ, ರಾಜ್ಯ ಸರಕಾರ, ಜಿಲ್ಲಾಡಳಿ ತಕ್ಕೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.

16 ತಾಸು ಹಿಮದಲ್ಲಿ
ಫೆ. 24ರ ವರೆಗೆ ಖಾರ್ಕಿವ್‌ ನಗರ ಕೂಡ ಇತರ ನಗರಗಳಂತೆ ಸಾಮಾನ್ಯವಾಗಿತ್ತು. ಅನಂತರ ಪರಿಸ್ಥಿತಿ ಏಕಾಏಕಿ ಬದಲಾಗಿ ಯುದ್ಧದ ಕಾರ್ಮೋಡ ಆವರಿಸಿತು. ಹಾಸ್ಟೆಲ್‌ ಕಡೆಗೆ ಬರುತ್ತಿದ್ದ ನನ್ನ ಸಹಪಾಠಿಗಳಿಗೆ ಗನ್‌ಪಾಯಿಂಟ್‌ ಇಟ್ಟು ಹೆದರಿಸಲಾ ಯಿತು. ನಮ್ಮನ್ನು ಮೆಟ್ರೋ ಬಂಕರ್‌ಗೆ ಕಳುಹಿಸಿದರು. ಅಲ್ಲಿ 400ಕ್ಕೂ ಹೆಚ್ಚು ಮಂದಿ ಇದ್ದರು. ನಿದ್ರಿಸಲೂ ಸಾಧ್ಯವಾಗಿರಲಿಲ್ಲ. ಕೆಲವು ದಿನಗಳ ಬಳಿಕ ಪೋಲಂಡ್‌ಗೆ ತೆರಳಲು ಅವಕಾಶ ನೀಡಲಾಯಿತು. ಮಾ. 2ರಂದು ನಾನು ಮತ್ತು ಇತರ ಮೂವರು ರೈಲು ನಿಲ್ದಾಣಕ್ಕೆ ಬಂದು ಹೇಗೋ ರೈಲೇರಿದೆವು. ಈ ನಡುವೆ ನವೀನ್‌ ಸಾವು ನಮ್ಮನ್ನು° ಹತಾಶರನ್ನಾಗಿಸಿತ್ತು. ನನ್ನ ಪಾಸ್‌ ಪೋರ್ಟ್‌ ಏಜೆನ್ಸಿಯವರ

ಕೈಯಲ್ಲಿ ಬಾಕಿಯಾಗಿತ್ತು. ಕೊನೆಗೂ ಉಕ್ರೇನ್‌ನ ಚೆಕ್‌ಪಾಯಿಂಟ್‌ ತಲುಪಿದ್ದು, ಅಲ್ಲಿ 16 ತಾಸು ಭಾರೀ ಹಿಮಾವೃತ ಪ್ರದೇಶದಲ್ಲಿ ಇರಬೇಕಾಯಿತು. 2 ತಾಸು ನಡೆದು ಪೋಲಂಡ್‌ ತಲುಪಿದ್ದು ಅಲ್ಲಿ ತಾತ್ಕಾಲಿಕ ಪಾಸ್‌ಪೋರ್ಟ್‌
ದೊರೆಯಿತು. ಶಾಸಕರ ಕಡೆಯ ಓರ್ವರು ಮಾರ್ಗದರ್ಶನ ನೀಡಿದರು. ರಾಯಭಾರ ಕಚೇರಿಯವರೂ ಸಹಾಯ ಮಾಡಿದರು. ಮತ್ತೆ ಉಕ್ರೇನ್‌ಗೆ ಹೋಗಲು ಮನಸ್ಸಿಲ್ಲ. ಸರಕಾರ ಅವಕಾಶ ನೀಡಿದರೆ ಇಲ್ಲಿಯೇ ಓದುವೆ ಎಂದು ಅನೈನಾ ಅನಾ ಹೇಳಿದರು.

ಕಣ್ಣೆದುರೇ ಬಾಂಬ್‌ ಸ್ಫೋಟ
ಒಂದು ಮುಂಜಾವ ನನ್ನ ಕಣ್ಣೆದುರಲ್ಲೇ ಬಾಂಬ್‌ ಸ್ಫೋಟಿಸಿ ತುಂಬಾ ಆತಂಕಗೊಂಡೆ. ನಮ್ಮನ್ನು ಬಂಕರ್‌ಗೆ ಕಳುಹಿಸಲಾಯಿತು. ಹಲವು ದಿನಗಳ ಕಾಲ ಚಾಕಲೇಟ್‌, ಬ್ರೆಡ್‌ ತಿಂದು ಬದುಕಿದೆವು. ಬಳಿಕ ಹಂಗೇರಿ ಕಡೆಗೆಂದು ರೈಲಿನಲ್ಲಿ ಹೊರಟೆವು. 5 ರೈಲು ಬದಲಾಯಿಸಿದೆವು. ನಿಂತುಕೊಂಡೇ ಪ್ರಯಾಣಿಸಿದೆವು. ಅಲ್ಲಿನ ಗಡಿಯಲ್ಲಿ ಅವಕಾಶ ನೀಡದ್ದರಿಂದ ಸ್ಲೊವಾಕಿಯಾಕ್ಕೆ ಹೋದೆವು. ಶಾಸಕರಾದ ವೇದವ್ಯಾಸ ಕಾಮತ್‌, ಸಂಸದ ನಳಿನ್‌ ಕುಮಾರ್‌ ಕಟೀಲು ನಿರಂತರ ಸಂಪರ್ಕದಲ್ಲಿದ್ದರು. ರಾಜ್ಯ ಸರಕಾರವೂ ಸಹಾಯ ಮಾಡಿತು. ಮಂಗಳೂರು ತಲುಪಿದ ಮೇಲೆ ತುಂಬಾ ಖುಷಿಯಾಗಿದ್ದೇನೆ ಎಂದರು ಅಹಮ್ಮದ್‌ ಸಾದ್‌ ಅರ್ಷದ್‌.

Advertisement

20 ಕಿ.ಮೀ. ನಡೆದೆವು
ಕೀವ್‌ನಿಂದ 5 ಕಿ.ಮೀ. ನಡೆದು ರೈಲು ನಿಲ್ದಾಣ ತಲುಪಿದೆವು. ರೈಲಿನಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ನೀಡುತ್ತಿದ್ದರು. ಅಲ್ಲಿಂದ ಲ್ವಿವ್‌ ನಗರಕ್ಕೆ, ಬಳಿಕ ಉಸುYರುಗೆ ಬಂದೆವು. ಆದರೆ ಹಂಗೇರಿಗೆ ಹೋಗಲು ಸಾಧ್ಯವಿಲ್ಲ ಎಂಬ ವಿಚಾರ ಗೊತ್ತಾಗಿ ಸ್ಲೊವಾಕಿಯಾದತ್ತ ಹೋದೆವು. ಸುಮಾರು 15 ಕಿ.ಮೀ. ನಡೆದೆವು. ಯುದ್ಧ ಆರಂಭಕ್ಕೆ ಮೊದಲೇ ನಾನು ಸುಮಾರು ಎರಡು ವಾರದ ಆಹಾರ ಸಂಗ್ರಹಿಸಿಟ್ಟುಕೊಂಡಿದ್ದೆ. ಎಲ್ಲರೂ ಹಂಚಿ ತಿಂದ ಕಾರಣ ಬೇಗ ಮುಗಿಯಿತು. ಭಾರತದ ಧ್ವಜ ಹಿಡಿದು ಬಸ್‌ನಲ್ಲಿ ಬಂದ ಕಾರಣ ಸ್ಲೊವಾಕಿಯಾ ಗಡಿಯಲ್ಲಿ ಚೆಕ್‌ಪೋÓr… ಪಾಸಿಂಗ್‌ ಸಿಕ್ಕಿತು ಎಂದು ಕ್ಲೇಟನ್‌ ಹೇಳಿದರು.

ಉಕ್ರೇನ್‌ ಬೆಕ್ಕಿನೊಂದಿಗೆ ಲಕ್ಷಿತಾ!
ಲಕ್ಷಿತಾ ಅವರು ಸಂಕಷ್ಟಗಳ ನಡುವೆಯೂ ತನ್ನ ಮುದ್ದಿನ ಬೆಕ್ಕಿನೊಂದಿಗೆ ಮಂಗಳೂರಿಗೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೂ ಕರೆತಂದು ಗಮನ ಸೆಳೆದರು. “ಯುರೋಪಿಯನ್‌ ಶಾರ್ಟ್‌ ಹೇರ್‌ ಬ್ರಿàಡ್‌ ತಳಿಯ ಬೆಕ್ಕಿನ ಮರಿಯನ್ನು ಕಳೆದ ಮೇಯಲ್ಲಿ ಉಕ್ರೇನ್‌ನ ಕೀವ್‌ ನಗರದಲ್ಲಿ ಖರೀದಿಸಿದ್ದೆ . ಬಾಂಬ್‌ ಶಬ್ದಕ್ಕೆ ಬೆಕ್ಕು ತುಂಬಾ ಭಯಗೊಂಡಿತ್ತು. ಅದನ್ನು ತರಲು ಅಲ್ಲಿಂದ ಎಲ್ಲ ರೀತಿಯ ಅನುಮತಿ ಸಿಕ್ಕಿತ್ತು. ಇಲ್ಲಿ ಸ್ವಲ್ಪ ತೊಂದರೆ ಆಯಿತು. ಅಗತ್ಯ ದಾಖಲೆಗಳನ್ನು ತಯಾರಿಸಿ ಕರೆದುಕೊಂಡು ಬಂದಿದ್ದೇನೆ ಎಂದು ಲಕ್ಷಿತಾ ತಿಳಿಸಿದ್ದಾರೆ.

ಡಿಸಿ ಕಚೇರಿಯಲ್ಲಿ ಸಂಭ್ರಮ
ವಿದ್ಯಾರ್ಥಿಗಳು ಮತ್ತು ಹೆತ್ತವರು ವಿಮಾನ ನಿಲ್ದಾಣದಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿÇÉಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರಿಗೆ ಹೂಗುತ್ಛ ನೀಡಿ ಕೃತಜ್ಞತೆ ಸಲ್ಲಿಸಿದರು. ಕೇಕ್‌ ಕತ್ತರಿಸಿ ಸಂಭ್ರಮಾಚರಿಸಿದರು.

ಸ್ವದೇಶ ತಲುಪಲು ಒಬ್ಬರಷ್ಟೇ ಬಾಕಿ
ಮೊಹಮ್ಮದ್‌ ಮಿಶೆಲ್‌ ಆರಿಫ್ ಮತ್ತು ನೈಮಿಷಾ ಹೊಸದಿಲ್ಲಿಗೆ, ಅನ್ಶಿತಾ ರೆಶಲ್‌ ಪದ್ಮಶಾಲಿ ಮುಂಬಯಿಗೆ ತಲುಪಿದ್ದಾರೆ. ಶೇಖ್‌ ಮೊಹಮ್ಮದ್‌ ತಾಹಾ ಅವರು ರೊಮೇನಿಯಾ ಗಡಿ ತಲುಪಿದ್ದಾರೆ. ಇದರೊಂದಿಗೆ ಜಿಲ್ಲೆಯ 17 ವಿದ್ಯಾರ್ಥಿಗಳು ಸ್ವದೇಶ ತಲುಪಿದ್ದು ಓರ್ವರು ಮಾತ್ರ ಸ್ವದೇಶ ತಲುಪಬೇಕಿದೆ.

ಮನೆ ಸೇರಿದ ನಾವುಂದದ ಅಂಕಿತಾ
ಕುಂದಾಪುರ: ಉಕ್ರೇನ್‌ನಲ್ಲಿದ್ದ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮಸ್ಕಿಯ ಅಂಕಿತಾ ಜಗದೀಶ್‌ ಪೂಜಾರಿ (22) ಸೋಮವಾರ ಸಂಜೆ ಹುಟ್ಟೂರು ಸೇರಿದ್ದಾರೆ.

ಉಕ್ರೇನ್‌ನಿಂದ ಪೋಲಂಡ್‌ಗೆ, ಅಲ್ಲಿಂದ ಮಾ. 3ರಂದು ಹೊಸದಿಲ್ಲಿಗೆ, ಬಳಿಕ ಮುಂಬಯ ಸಂಬಂಧಿಕರ ಮನೆಗೆ ಬಂದ ಅಂಕಿತಾ ಸೋಮವಾರ ಮಂಗಳೂರಿನ ಮೂಲಕ ನಾವುಂದಕ್ಕೆ ಆಗಮಿಸಿದರು.

ಕಠಿನ ಸನ್ನಿವೇಶಗಳನ್ನು ಎದುರಿಸಿ, ಈಗ ಸುರಕ್ಷಿತವಾಗಿ ಮನೆಗೆ ಆಗಮಸಿದ ಪುತ್ರಿಯನ್ನು ತಂದೆ ಜಗದೀಶ್‌ ಪೂಜಾರಿ, ತಾಯಿ ಜ್ಯೋತಿ, ಸಹೋದರ ಮಣಿಶಂಕರ್‌ ಬರಮಾಡಿಕೊಂಡರು. ಉಕ್ರೇನ್‌ನಿಂದ ಮರಳಲು ಸಹಕರಿಸಿದ ಎಲ್ಲರಿಗೂ ಅಂಕಿತಾ ಕೃತಜ್ಞತೆ ಅರ್ಪಿಸಿದ್ದಾರೆ.

ತ್ರಿವರ್ಣಧ್ವಜವೇ ಶಕ್ತಿ: ನೈಮಿಷಾ
ಉಡುಪಿ:ಉಕ್ರೇನ್‌ನಿಂದ ರೊಮೇನಿಯಾ ಗಡಿಗೆ ಹೋಗುವಾಗ ಸುಮಾರು 15 ಕಿ.ಮೀ. ನಡೆಯಬೇಕಾಯಿತು. ಈ ವೇಳೆ ತ್ರಿವರ್ಣ ಧ್ವಜವೇ ನಮಗೆ ಶಕ್ತಿಯಾಗಿತ್ತು ಎಂದು ಮೂಡು ಬಿದಿರೆ ಬೆಳುವಾಯಿಯ ನೈಮಿಷಾ ಹೇಳಿದರು. ರೊಮೇನಿಯಾ ಮೂಲಕ ಸೋಮವಾರ ದಿಲ್ಲಿಗೆ ಬಂದಿಳಿದಿದ್ದ ಅವರನ್ನು ದಿಲ್ಲಿ ಕರ್ನಾಟಕ ಭವನದ ವ್ಯವಸ್ಥಾಪಕ ಬಿ.ವಿ. ರಾಘವೇಂದ್ರ, ವೆಂಕಟೇಶ್‌ ಮತ್ತು ಮಂಜುನಾಥ್‌ ವಿಮಾನ ನಿಲ್ದಾಣದಿಂದ ಕರ್ನಾಟಕ ಭವನಕ್ಕೆ ಕರೆದುಕೊಂಡು ಬಂದಿದ್ದರು. ಇವರು ಮಂಗಳವಾರ ಬೆಳುವಾಯಿಗೆ ಬರಲಿದ್ದಾರೆ.

ದಿಲ್ಲಿಯಿಂದ ಉದಯವಾಣಿ ಜತೆ ಮಾತನಾಡಿದ ಅವರು, ಖಾರ್ಕಿವ್‌ನಲ್ಲಿ ಏರ್‌ಸ್ಟ್ರೈಕ್‌, ಶೆಲ್‌ ದಾಳಿಯನ್ನು ಕಣ್ಣಾರೆ ನೋಡಿದ್ದೇವೆ. ಏಕಾಏಕಿ ಖಾರ್ಕಿವ್‌ ಬಿಡಬೇಕು ಎಂಬ ಸೂಚನೆ ಬಂದಾಗ ಸಾಕಷ್ಟು ಕಷ್ಟವಾಗಿತ್ತು. ರೈಲು ಸಂಪರ್ಕ ಕೂಡ ಇರಲಿಲ್ಲ. ಅಲ್ಲಿಂದ ರೊಮೇನಿಯಾ ಗಡಿಗೆ ಬರಲು ತುಂಬ ಕಷ್ಟ ಪಟ್ಟಿದ್ದೇವೆ. ರೊಮೆನಿಯಾ ತಲುಪಿದ ಅನಂತರ ಯಾವುದೇ ಸಮಸ್ಯೆಯಾಗಿಲ್ಲ. ರಾಯಭಾರ ಕಚೇರಿಯ ಅಧಿಕಾರಿಗಳು ಚೆನ್ನಾಗಿ ನೋಡಿಕೊಂಡಿದ್ದಾರೆ. ಮುಂದಿನ ಶಿಕ್ಷಣ ಹೇಗೆ ಗೊತ್ತಿಲ್ಲ. ಉಕ್ರೇನ್‌ನಲ್ಲಿ ಪರಿಸ್ಥಿತಿ ತಿಳಿಯಾದರೆ ಪುನಃ ಹೋಗಲು ಸಿದ್ಧಳಿದ್ದೇನೆ ಎಂದರು.
ಇನ್ನಿಬ್ಬರು ಸ್ವದೇಶಕ್ಕೆ: ಉಡುಪಿಯ ಆ್ಯನಿಫ್ರೆಡ್‌ ರಿಡ್ಲಿ ಡಿ’ಸೋಜಾ ಅವರು ಹಂಗೇರಿ ಮೂಲಕ ದಿಲ್ಲಿಗೆ, ಅಲ್ಲಿಂದ ಬೆಂಗಳೂರಿಗೆ ಸೋಮ ವಾರ ತಲುಪಿ ಅಕ್ಕನ ಮನೆಯಲ್ಲಿದ್ದಾರೆ. ಗ್ಲೆನ್‌ವಿಲ್‌ ಸೋಮವಾರ ರೊಮೇನಿಯಾ ಗಡಿ ತಲುಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next