Advertisement

ದ.ಕ. ಶೇ.75.05; ಉಡುಪಿ ಶೇ. 74.10 ಮತದಾನ

01:33 AM Dec 23, 2020 | mahesh |

ದ.ಕ.: ಬಂಟ್ವಾಳದಲ್ಲಿ ಅತೀ ಹೆಚ್ಚು ಮತದಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕುಗಳಲ್ಲಿ ಒಟ್ಟು ಶೇ.75.05ರಷ್ಟು ಮತದಾನವಾಗಿದೆ. ಕೊರೊನಾ ಆತಂಕದ ನಡುವೆಯೂ ನಿರೀಕ್ಷೆಗೂ ಮೀರಿ ಉತ್ತಮ ಪ್ರಮಾಣದಲ್ಲಿ ಮತದಾನ ನಡೆದಿದೆ.

Advertisement

ಜಿಲ್ಲಾಡಳಿತದ ಪ್ರಾಥಮಿಕ ಅಂಕಿ- ಅಂಶದಂತೆ, ಬಂಟ್ವಾಳ ತಾ| ನಲ್ಲಿ ಗರಿಷ್ಠ ಶೇ.77.77 ರಷ್ಟು ಮತದಾನವಾಗಿದೆ. ಮಂಗಳೂರು ತಾ| ನಲ್ಲಿ ಶೇ. 72.37 ಹಾಗೂ ಮೂಡುಬಿದಿರೆಯಲ್ಲಿ ಶೇ. 72.82 ಮತದಾನವಾಗಿದೆ. ಎಲ್ಲೆಡೆ ಪೊಲೀಸ್‌ ಬಂದೋಬಸ್ತು ಮಾಡಲಾಗಿತ್ತು.

ಎಲ್ಲ ಬೂತ್‌ಗಳ ಮತಪೆಟ್ಟಿಗೆಗಳನ್ನು ತಾಲೂಕು ಕೇಂದ್ರಗಳ ಡಿ-ಮಸ್ಟರಿಂಗ್‌ ಕೇಂದ್ರ ಗಳಲ್ಲಿ ಬಿಗಿಭದ್ರತೆಯಲ್ಲಿರಿಸಲಾಗಿದೆ.
ಮಂಗಳೂರು ತಾ| ನಲ್ಲಿ 37 ಗ್ರಾ.ಪಂ.ಗಳ 623, ಮೂಡಬಿದಿರೆಯ 12 ಗ್ರಾ.ಪಂ.ಗಳ 186 ಹಾಗೂ ಬಂಟ್ವಾಳ ತಾ| 57 ಗ್ರಾ.ಪಂ. ಗಳ 822 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಮಂಗಳೂರಿನಲ್ಲಿ 1,510, ಮೂಡುಬಿದಿರೆ ಯಲ್ಲಿ 419 ಹಾಗೂ ಬಂಟ್ವಾಳದಲ್ಲಿ 1925 ಅಭ್ಯರ್ಥಿಗಳು ಸೇರಿದಂತೆ ಒಟ್ಟು 3,854 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾ| ಗಳಲ್ಲಿ ಡಿ. 27ರಂದು ಮತದಾನ ನಡೆ ಯಲಿದೆ. ಡಿ. 30 ರಂದು ಮತ ಎಣಿಕೆ ನಡೆಯಲಿದೆ.

ಮುನ್ನೆಚ್ಚರಿಕೆ
ಕೊರೊನಾ ಹಿನ್ನೆಲೆ ಯಲ್ಲಿ ಮತಗಟ್ಟೆಗಳ ಎದುರು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಮತದಾರರ ದೇಹದ ಉಷ್ಣಾಂಶ
ತಪಾಸಣೆ ಮಾಡಲಾಯಿತು. ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಸರ್‌ ಬಳಕೆಗೆ ಒತ್ತು ನೀಡಲಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಈ ಬಗ್ಗೆ ನಿರ್ಲಕ್ಷ್ಯ ಕೂಡ ಕಂಡು ಬಂದಿದೆ. ಮತಗಟ್ಟೆಗಳಲ್ಲಿ ಪೊಲೀಸರು ಸೇರಿದಂತೆ ಚುನಾವಣಾ ಸಿಬಂದಿಗೆ ಕೆಲವೆಡೆ ಊಟ- ತಿಂಡಿಗೆ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉಡುಪಿ ಜಿಲ್ಲೆ: ಹೆಬ್ರಿಯಲ್ಲಿ ಗರಿಷ್ಠ ಮತದಾನ
ಉಡುಪಿ: ಜಿಲ್ಲೆಯಾದ್ಯಂತ 4 ತಾಲೂಕುಗಳಲ್ಲಿ ಒಂದನೇ ಹಂತದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಉಡುಪಿ, ಹೆಬ್ರಿ, ಬ್ರಹ್ಮಾವರ, ಬೈಂದೂರು ತಾಲೂಕುಗಳಲ್ಲಿ ಒಟ್ಟು ಶೇ. 74.10 ಮತದಾನವಾಗಿದೆ. ಉಡುಪಿ ತಾ| ಶೇ. 74.80, ಹೆಬ್ರಿ ತಾ| 79.41, ಬ್ರಹ್ಮಾವರ ತಾ| 73.69, ಬೈಂದೂರು ತಾ| ಶೇ. 71.28 ಮತದಾನ ವಾಗಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 5ರ ವರೆಗೆ ಮತದಾನ ನಡೆಯಿತು. ಜಿಲ್ಲೆಯ 11 ನಕ್ಸಲ್‌ ಪೀಡಿತ ಮತಗಟ್ಟೆಗಳ ಮತದಾನವನ್ನು ಚಿತ್ರೀಕರಿಸ ಲಾಯಿತು. ಹೊರ ಜಿಲ್ಲೆಯ 370 ಪೊಲೀಸ್‌ ಸಿಬಂದಿ ಸಹಿತ ಸುಮಾರು 600 ಪೊಲೀಸರು ಮತ್ತು 4 ಕೆಎಸ್‌ಆರ್‌ಪಿ ತುಕಡಿ, 8 ಸಶಸ್ತ್ರ ಪೊಲೀಸ್‌ ಮೀಸಲು ಪಡೆ ನಿಯೋಜನೆಯಾಗಿತ್ತು.

Advertisement

ಸಕಲ ಮುನ್ನೆಚ್ಚರಿಕೆ
ಮತದಾನ ಕೇಂದ್ರದೊಳಗೆ ಹಾಗೂ ಹೊರಭಾಗದಲ್ಲಿ ಸರಕಾರದ ಕೊರೊನಾ ನಿಯಮಾವಳಿಯಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂಗವಿಕಲರು ಹಾಗೂ ಹಿರಿಯರಿಗೆ ವ್ಹೀಲ್‌ ಚೇರ್‌ ವ್ಯವಸ್ಥೆಯಿತ್ತು. ಆಶಾ ಕಾರ್ಯಕರ್ತರು, ಪೊಲೀಸ್‌ ಸಿಬಂದಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿ ದ್ದರು. ಜಿಲ್ಲಾ ಚುನಾವಣಾಧಿಕಾರಿ ಜಿ.ಟಿ. ದಿನೇಶ್‌ ಕುಮಾರ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತದಾನ ಶಾಂತಿಯುತ
ಜಿಲ್ಲೆಯಲ್ಲಿ ಪ್ರಥಮ ಹಂತದ ಗ್ರಾ.ಪಂ. ಚುನಾವಣೆ ಶಾಂತಿಯುತವಾಗಿ ನಡೆದಿದೆ. ಶೇ.75ಕ್ಕಿಂತ ಅಧಿಕ ಮತದಾನ ನಿರೀಕ್ಷಿಸಲಾಗಿತ್ತು. ಅದರ ಆಸುಪಾಸಿನಲ್ಲಿ ಮತದಾನ ಆಗಿದೆ. ಡಿಮಸ್ಟರಿಂಗ್‌ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ಶೇಕಡಾವಾರು ಫ‌ಲಿತಾಂಶದಲ್ಲಿ ತುಸು ಬದಲಾವಣೆಯಾಗಬಹುದು.
– ಜಿ. ಜಗದೀಶ್‌, ಜಿಲ್ಲಾಧಿಕಾರಿ

ಸೋಂಕಿತರೊಬ್ಬರ ಮತದಾನ
ಮುದ್ರಾಡಿಯಲ್ಲಿ ಕೊರೊನಾ ಸೋಂಕಿತರೊಬ್ಬರು ನಿಯಮಾವಳಿ ಯಂತೆ ಸಂಜೆ ಮತದಾನ ಮಾಡಿದ್ದಾರೆ. ಉಳಿದಂತೆ ಬೈಂದೂರಿನಲ್ಲಿ ಪಾಸಿಟಿವ್‌ ಪ್ರಕರಣಗಳಿರಲಿಲ್ಲ. ಬ್ರಹ್ಮಾವರ, ಉಡುಪಿ ತಾಲೂಕಿನಲ್ಲಿ ಒಂದೆರಡು ಪಾಸಿಟಿವ್‌ ಪ್ರಕರಣಗಳಿದ್ದರೂ ಅವರ ಅವಧಿ ಮುಗಿದಿದೆ.- ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ

ತುತ್ತೂರಿಯಲ್ಲ ಕೊಳಲು!
ವಿಟ್ಲ: ಮಾಣಿಲ 1ನೇ ಕ್ಷೇತ್ರದ ಬ್ಯಾಲೆಟ್‌ ಪೇಪರ್‌ನಲ್ಲಿ ಸೋಮವಾರ ರಾತ್ರಿ ಪರಿಶೀಲನೆ ಸಂದರ್ಭ ಅಭ್ಯರ್ಥಿ ಯೋರ್ವರ ಚಿಹ್ನೆ ತುತ್ತೂರಿಯ ಬದಲು ಕೊಳಲು ಮುದ್ರಣವಾಗಿತ್ತು. ಆದರೆ ಮರುದಿನ ಮತದಾನದ ವೇಳೆಗೆ ಅಧಿ ಕಾರಿಗಳು ಮತಪತ್ರವನ್ನು ಬದಲಾಯಿಸಿ ಸುಗಮ ಮತದಾನಕ್ಕೆ ಅನುವು ಮಾಡಿದ್ದರು.

“ಚಾಲೆಂಜ್‌ ಮತದಾನ’
ಬಂಟ್ವಾಳ ತಾಲೂಕಿನ ಕೈರಂಗಳದ ಮತಗಟ್ಟೆಯೊಂದರಲ್ಲಿ ಇಬ್ಬರು ಮತದಾರರ ಮತಗಳನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಿಜವಾದ ಮತದಾರರು ಎನ್ನಲಾದವರು “ಚಾಲೆಂಜ್‌ ಮತದಾನ’ ಮಾಡಿದ್ದಾರೆ.

ಕಳಪೆ ಮತಪತ್ರ: ಒಂದು ಗಂಟೆ ಮತದಾನ ಸ್ಥಗಿತ
ಕೋಟ: ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಮತಗಟ್ಟೆಯಲ್ಲಿ ಕಳಪೆ ಗುಣಮಟ್ಟದ ಮತಪತ್ರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯನ್ನು 1 ಗಂಟೆ ಕಾಲ ತಡೆಹಿಡಿದರು. ಮತಪತ್ರದ ಹಿಂದೆ ಅಧಿಕಾರಿ ಹಾಕಿದ ಮುದ್ರೆ ಮುಂಭಾಗದಲ್ಲಿ ಎದ್ದು ತೋರುವುದರಿಂದ ಮತಪತ್ರ ಅಸಿಂಧುವಾಗುವ ಸಾಧ್ಯತೆ ಇದ್ದು, ಚುನಾವಣಾಧಿಕಾರಿ ಗಳು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಮತ ಎಣಿಕೆ ಸಂದರ್ಭ ಸ್ವಸ್ತಿಕ ಚಿಹ್ನೆಯನ್ನು ಸರಿಯಾಗಿ ನೋಡಿ ಎಣಿಸುತ್ತೇವೆ ಎಂದು ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ಭರವಸೆ ನೀಡಿದ ಅನಂತರ ಮತದಾನವನ್ನು ಪುನಃ ಆರಂಭಿಸಲಾಯಿತು. ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದ ಕೋಡಿ ಕನ್ಯಾಣ ಗ್ರಾ.ಪಂ.ನಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣೆ ನಡೆಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next