Advertisement
299 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 2,990 ಸಕ್ರಿಯ ಪ್ರಕರಣಗಳಿವೆ. ಶೇ.5.52 ರಷ್ಟು ಪಾಸಿಟಿವಿಟಿ ದರ ಇದೆ. ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 13 ಪ್ರಕರಣ ಪತ್ತೆಯಾಗಿದ್ದು, ಆ ಪ್ರದೇಶವನ್ನು ಕ್ಲಸ್ಟರ್ ವಲಯವೆಂದು ಘೋಷಿಸಲಾಗಿದೆ.
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 497 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.6,652 ಮಂದಿಯನ್ನು ಪರೀಕ್ಷೆಗೆ ಒಳಪಡಿಸ ಲಾಗಿದ್ದು, 76 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,335 ಪ್ರಕರಣಗಳು ಸಕ್ರಿಯ ವಾಗಿವೆ ಎಂದು ಡಿಎಚ್‌ಒ ಪ್ರಕಟನೆ ತಿಳಿಸಿದೆ. ಕಾಸರಗೋಡು: 371 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 371 ಮಂದಿಗೆ ಕೊರೊನಾ ದೃಢಪಟ್ಟಿದೆ. 138 ಮಂದಿ ಗುಣ ಮುಖರಾಗಿ ದ್ದಾರೆ. 1,328 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ ಜಿಲ್ಲೆಯಲ್ಲಿ 7 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ.
Related Articles
Advertisement
ಕೇರಳದಲ್ಲಿ 16,338 ಪ್ರಕರಣಕೇರಳದಲ್ಲಿ ಶುಕ್ರವಾರ 16,338 ಮಂದಿಗೆ ಕೊರೊನಾ ದೃಢಪಟ್ಟಿದೆ. 3,848 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 50,568ಕ್ಕೇರಿದೆ. 76819 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9ನೇ ತರಗತಿ ವರೆಗೆ ಶಾಲೆ ಬಂದ್
ಕೋವಿಡ್ ವ್ಯಾಪಿಸುತ್ತಿರುವುದರಿಂದ ಕೇರಳದಲ್ಲಿ ಒಂದರಿಂದ 9ರ ವರೆಗಿನ ತರಗತಿಗಳನ್ನುಜ. 21ರಿಂದ ಎರಡು ವಾರಗಳ ಕಾಲ ಮುಚ್ಚಿಆನ್‌ಲೈನ್ ತರಗತಿ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಪರೀಕ್ಷೆ ಬಗ್ಗೆ ಮುಂದೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ವಾರಾಂತ್ಯ ನಿಯಂತ್ರಣ, ರಾತ್ರಿ ಕರ್ಫ್ಯೂ ಇಲ್ಲ. ಕೊಡಗು: 80 ಮಂದಿಗೆ ಕೊರೊನಾ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 80 ಮಂದಿಗೆ ಕೊರೊನಾ ದೃಢಪಟ್ಟಿದೆ. 49 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 417 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 2.51ರಷ್ಟಿದೆ.