Advertisement
ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳು ಹಾಗೂ ಬಂಟ್ವಾಳದ ವಿಟ್ಲ ಭಾಗ ಮತ್ತು ಮಂಗಳೂರಿನ ಮೂಡಬಿದಿರೆ ಭಾಗಗಳಲ್ಲಿ ಎಂಡೋ ಸಂತ್ರಸ್ತರ ಸಂಖ್ಯೆ ಹೆಚ್ಚು ಇರುವುದರಿಂದ ಈ ಪ್ರದೇಶಗಳನ್ನು ಕೇಂದ್ರೀಕರಿಸಲಾಗಿದೆ. ಕಡಬ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ ಈಗಾಗಲೇ 2 ಕೇಂದ್ರಗಳಿವೆ.
ಪ್ರಸ್ತುತ ಬಂಟ್ವಾಳ ತಾಲೂಕಿನ ವಿಟ್ಲ, ಬೆಳ್ತಂಗಡಿಯ ಕಣಿಯೂರು, ಪುತ್ತೂರಿನ ಪಾಣಾಜೆ ಪಾಲನಾ ಕೇಂದ್ರಗಳ ಕಾಮಗಾರಿ ಪೂರ್ಣಗೊಂಡರೆ, ಸುಳ್ಯದ ಬೆಳ್ಳಾರೆ ಕೇಂದ್ರ ನಿರ್ಮಾಣದ ಹಂತದಲ್ಲಿದೆ. ಒಟ್ಟು 1.77 ಕೋ.ರೂ. ಅನುದಾನದಲ್ಲಿ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿ ನಡೆಯುತ್ತಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ಇದೆ.
Related Articles
Advertisement
ಶಾಶ್ವತ ಪುನರ್ವಸತಿ ಕೇಂದ್ರದ ಬೇಡಿಕೆಜಿಲ್ಲೆಯ ಎಂಡೋ ಸಂತ್ರಸ್ತರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅದಕ್ಕಾಗಿ ಆಲಂಕಾರು ಮತ್ತು ಕೊಕ್ಕಡದಲ್ಲಿ ಜಾಗವನ್ನೂ ಗುರುತಿಸಲಾಗಿದೆ. ಯಾವುದೇ ವಾರಸುದಾರರಿಲ್ಲದ ಎಂಡೋಸಂತ್ರಸ್ತರ ಆರೈಕೆಯನ್ನು ಆ ಕೇಂದ್ರದಲ್ಲಿ ಮಾಡಬೇಕಿರುವುದರಿಂದ ಅದುಆಸ್ಪತ್ರೆಯ ರೀತಿಯಲ್ಲಿ ಕೆಲಸ ಮಾಡಬೇಕಿದ್ದು, ಹೆಚ್ಚಿನ ಅನುದಾನದ ಅಗತ್ಯವಿದೆ. ಅನುದಾನದ ನಿರೀಕ್ಷೆಯಲ್ಲಿ
ಕಟ್ಟಡದ ಕಾಮಗಾರಿಯಷ್ಟೇ ನಡೆದಿದ್ದು, ಕೇಂದ್ರದ ಕಾರ್ಯಾಚರಣೆಗೆ ಇನ್ನಷ್ಟು ಅನುದಾನದ ಅಗತ್ಯವಿದೆ. ಅಗತ್ಯ ಸಲಕರಣೆಗಳ ಒದಗಣೆ, ನಿರ್ವಹಣೆಯ ಮೊತ್ತ, ಸಿಬಂದಿ ನಿಯೋಜನೆ ಇನ್ನಷ್ಟೇ ನಡೆಯಬೇಕಿದೆ. ಕೇಂದ್ರಗಳ ನಿರ್ವಹಣೆಗೆ ಮಾಸಿಕ 2ರಿಂದ 3 ಲಕ್ಷ ರೂ. ಬೇಕಿದೆ. ಪೂರ್ಣಗೊಂಡಿರುವ ಕೇಂದ್ರಗಳ ಆರಂಭಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಸರಕಾರಕ್ಕೆ ಬರೆಯಲಾಗಿದೆ. ಬಂದ ಬಳಿಕ ಕೇಂದ್ರ ಆರಂಭಗೊಳ್ಳಲಿದೆ.
– ಸಾಜುದ್ದೀನ್, ಜಿಲ್ಲಾ ಸಂಯೋಜಕರು, ದ.ಕ. ಜಿಲ್ಲಾ ಎಂಡೋಸಲ್ಫಾನ್ ಕೋಶ – ಕಿರಣ್ ಸರಪಾಡಿ