Advertisement
ನಗರ ಭಾಗದಿಂದ ನಾಪತ್ತೆ ಯಾದ ಮಕ್ಕಳ ಸಂಖ್ಯೆ ಅಧಿಕ. ಮಂಗಳೂರು ಪೊಲೀಸ್ ಕಮಿಷ ನರೆಟ್ ವ್ಯಾಪ್ತಿಯಲ್ಲಿ 101 ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 32 ಪ್ರಕರಣ ದಾಖಲಾಗಿದೆ. ಕಮಿಷ ನರೆಟ್ ವ್ಯಾಪ್ತಿಯ 10 ಮಂದಿಯ ಪತ್ತೆಯಾಗಿಲ್ಲ.
ಕೊರೊನಾ – ಲಾಕ್‌ಡೌನ್ ಸಂದರ್ಭ ಸಾರಿಗೆ ವ್ಯವಸ್ಥೆ ಸಹಜ ವಾಗಿರ ದಿದ್ದರೂ 38 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ವರ್ಷ ನಾಪತ್ತೆಯಾಗಿರುವ ಎಲ್ಲ 24 ಮಕ್ಕಳನ್ನೂ ಪತ್ತೆಹಚ್ಚಲಾಗಿದೆ. ಹೆತ್ತವರ ವರ್ತನೆ ಕಾರಣ!
ಮಕ್ಕಳು ಮನೆ ಬಿಡಲು ಪ್ರಮುಖ ಕಾರಣ ಕೌಟುಂಬಿಕ ವಿಚಾರಗಳು ಎನ್ನುವುದು ಮಕ್ಕಳ ತಜ್ಞರು, ಮಕ್ಕಳ ಕಲ್ಯಾಣ ಸಮಿತಿಯವರು ಹಾಗೂ ಮಕ್ಕಳ ಆಪ್ತ ಸಮಾಲೋಚಕರ ವಿಶ್ಲೇಷಣೆ. ಹೆತ್ತವರ ಕುಡಿತದ ಚಟ ಅಥವಾ ನಿರಂತರ ಕಲಹದಿಂದ ಮನನೊಂದು ಅನೇಕ ಮಕ್ಕಳು ಮನೆ ಬಿಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಿಗೂ ಕಠಿನ ಶಿಕ್ಷೆಯ ಭೀತಿ ಕೂಡ ಮಕ್ಕಳು ಮನೆ ತೊರೆಯಲು ಇನ್ನೊಂದು ಪ್ರಮುಖ ಕಾರಣ. ಉಳಿದಂತೆ ವಿದ್ಯಾ ಭ್ಯಾಸದಲ್ಲಿ ಹಿಂದುಳಿದು ಮನೆಯವರಿಂದ ನಿರ್ಲಕ್ಷಿಸಲ್ಪಟ್ಟಾಗ ಅಥವಾ ತಿರಸ್ಕರಿಸಲ್ಪಟ್ಟಾಗ, ವಯ ಸ್ಸಿಗೆ ಸರಿ ಹೊಂದದ ವರ್ತನೆ ಮಕ್ಕಳಲ್ಲಿ ಉಂಟಾದಾಗ (ಕಂಡಕ್ಟ್ ಡಿಸಾರ್ಡರ್), ಹದಿಹರೆಯಕ್ಕೆ ಕಾಲಿಡುವ ಪೂರ್ವದಲ್ಲಿ ಉಂಟಾ ಗುವ ಗಂಡು/ಹೆಣ್ಣಿನ ಕುರಿತಾದ ಆಕರ್ಷಣೆ, ಕುತೂಹಲ, ತಪ್ಪು ಕಲ್ಪನೆ, ಆಮಿಷ ಮೊದಲಾದವು ಕೂಡ ನಾಪತ್ತೆಗೆ ಕಾರಣವಾಗಿರುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಬಸ್/ರೈಲು ನಿಲ್ದಾಣಗಳ ಸನಿಹ ಮನೆ ಇದ್ದರೆ ಅಲ್ಲಿನ ಮಕ್ಕಳು ಕುತೂಹಲದಿಂದ ಬಸ್, ರೈಲು ಹತ್ತಿ ನಾಪತ್ತೆಯಾಗಿರುವ ದೃಷ್ಟಾಂತಗಳೂ ಇವೆ.
Related Articles
Advertisement
ಅಪಹರಣ ಪ್ರಕರಣ18 ವರ್ಷಕ್ಕಿಂತ ಕೆಳಗಿನವರು ಕಾಣೆಯಾದರೆ ಠಾಣೆಗಳಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಪೊಲೀಸರ ಜತೆಗೆ ಮಕ್ಕಳ ರಕ್ಷಣಾ ಘಟಕ, ಚೈಲ್ಡ್‌ಲೈನ್ (1098) ಕೆಲಸ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿಯೂ ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆ ಜಾಗೃತಿ ಮೂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. “ಕಲಹವಿರುವ ಕುಟುಂಬ’ (ಅನ್‌ಹ್ಯಾಪಿ ಫ್ಯಾಮಿಲಿ)ದಿಂದ ಮಕ್ಕಳು ನಾಪತ್ತೆಯಾಗುವ ಸಾಧ್ಯತೆಗಳು ಹೆಚ್ಚು. ಹೆತ್ತವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು. ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸುವುದಲ್ಲದೆ, ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಕ್ಕಳ ಮನೋಕೌಶಲ ಹೆಚ್ಚಿಸುವ ಕೆಲಸ ಮಾಡಬೇಕು. ಶಾಲೆಗಳಲ್ಲಿಯೂ ಜಾಗೃತಿ ಕಾರ್ಯಕ್ರಮ ನಡೆಯಬೇಕು.
– ಡಾ| ರಮಿಳಾ ಶೇಖರ್,
ಮಾನಸಿಕ ಆರೋಗ್ಯ ತಜ್ಞೆ, ಮಂಗಳೂರು ವಿಚ್ಛೇದನ ಪ್ರಕರಣದ ಸಂದರ್ಭ ಪತಿ/ಪತ್ನಿ ತಮ್ಮ ಗೆಲುವಿಗಾಗಿ ಮಕ್ಕಳನ್ನು ಬಳಸುವುದು, ಅವರ ಮೂಲಕ ದೂರು, ಹೇಳಿಕೆ ಕೊಡಿಸುವುದು ಕಂಡುಬಂದಿದೆ. ಇದು ಕೂಡ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಅವರು ಮನೆ ಬಿಡುವ ಸ್ಥಿತಿ ನಿರ್ಮಿಸುತ್ತಿದೆ.
– ರೆನ್ನಿ ಡಿ’ಸೋಜಾ, ದ.ಕ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ – ಸಂತೋಷ್ ಬೊಳ್ಳೆಟ್ಟು