Advertisement
ಜಿಲ್ಲೆಯ ಮೆಗಾ ಅದಾಲತ್‌ನಲ್ಲಿ ಬಾಕಿ ಪ್ರಕರಣ ಗಳ ವಿಚಾರಣೆಗೆ 30 ಪೀಠಗಳನ್ನು ರಚಿಸಲಾಗಿದ್ದರೆ ವ್ಯಾಜ್ಯ ಪೂರ್ವ ಪ್ರಕರಣಗಳ ವಿಚಾರಣೆಗೆ 12 ಪೀಠ ಗಳನ್ನು ರಚಿಸಲಾಗಿತ್ತು. ಬೆಳಗ್ಗಿನಿಂದ ಸಂಜೆ ವರೆಗೂ ವಿವಿಧ ಪೀಠಗಳಲ್ಲಿ ಮೆಗಾ ಅದಾಲತ್ ನಡೆದಿದೆ.
ಕೋವಿಡ್ ಹಿನ್ನೆಲೆಯಲ್ಲಿ ವರ್ಚುವಲ್ ಹಾಗೂ ನೇರವಾಗಿಯೂ ವಿಚಾರಣೆ ನಡೆದಿದೆ. ಒಟ್ಟು ನಾಲ್ಕು ಪ್ರಕರಣಗಳು ಮಾತ್ರವೇ ವರ್ಚು ವಲ್ ಮೋಡ್‌ನಲ್ಲಿ ವಿಚಾರಣೆಗೆ ಬಂದಿದ್ದು ಉಳಿದೆಲ್ಲ ಪ್ರಕರಣಗಳನ್ನು ನೇರವಾಗಿ ವಿಚಾರಣೆ ನಡೆಸಲಾಗಿದೆ. ವಾಹನ ಅಪಘಾತದ ಪ್ರಕರಣಗಳು 1,153 ವಿಚಾರಣೆಗೆ ಬಂದಿದ್ದರೆ 199 ಇತ್ಯರ್ಥಗೊಂಡು ಗರಿಷ್ಠ ಪ್ರಮಾಣದ ಎಂದರೆ 6,50,82,919 ರೂ. ಮೊತ್ತ ವಿಲೇವಾರಿಯಾಗಿದೆ. 794 ಚೆಕ್‌ಬೌನ್ಸ್ ಪ್ರಕರಣ ಗಳು ವಿಚಾರಣೆಗೆ ಬಂದಿದ್ದು 3,30,22,698 ರೂ. ಮೊತ್ತದ 154 ಪ್ರಕರಣಗಳು ಇತ್ಯರ್ಥಗೊಂಡಿವೆ.
Related Articles
ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಎಂದರೆ 4,079 ಚಿಲ್ಲರೆ ಪ್ರಕರಣಗಳು ವಿಚಾರಣೆಗೆ ಬಂದಿದ್ದು ಅದರಲ್ಲಿ 3,758 ಪ್ರಕರಣಗಳು ಇತ್ಯರ್ಥಗೊಂಡು 9,25,498 ರೂ. ವಿಲೇವಾರಿಯಾಗಿದೆ.
Advertisement
ಉಳಿದಂತೆ ನೀರಿನ ಬಿಲ್, ವಿದ್ಯುತ್ ಬಿಲ್, ಕಾರ್ಮಿಕ ಪರಿಹಾರ, ಕಾರ್ಮಿಕ ವ್ಯಾಜ್ಯಗಳು, ವೈವಾಹಿಕ ವ್ಯಾಜ್ಯಗಳು, ಇತರೇ ಸಿವಿಲ್ ವ್ಯಾಜ್ಯಗಳು ಸೇರಿದಂತೆ ವಿವಿಧ ಪೀಠಗಳಲ್ಲಿ ಇತ್ಯರ್ಥಗೊಂಡವು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀàಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಎಂ. ಜೋಶಿ ಹಾಗೂ ಸದಸ್ಯ ಕಾರ್ಯದರ್ಶಿ ಶೋಭಾ ನೇತೃತ್ವ ವಹಿಸಿದ್ದರು.