Advertisement
ಕಮಿಷನರೆಟ್ ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಗಳು ಬರುತ್ತಿವೆ. ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕ ಪ್ರಕರಣಗಳು ಮತ್ತು ಅಧಿಕ ದಂಡ ಮೊತ್ತ ವಿಧಿಸಲಾಗಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ಉದಯವಾಣಿಗೆ ತಿಳಿಸಿವೆ.
ಉಡುಪಿ: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಬುಧವಾರ 290 ಪ್ರಕರಣಗಳು ದಾಖಲಾಗಿದ್ದು 1,64,300 ರೂ. ದಂಡ ವಸೂಲಿ ಮಾಡಲಾಗಿದೆ. ವಾಹನ ವಿಮೆ: ಆಯುಕ್ತರ ಸ್ಪಷ್ಟನೆ
ಪೊಲೀಸ್ ಆಯುಕ್ತರ ವಾಹನದ ವಿಮೆ ನವೀಕರಣ ಆಗಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ವ್ಯಕ್ತಿಗಳು ಹರಿಯ ಬಿಟ್ಟ ಸುದ್ದಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು, ಸರಕಾರಿ ವಾಹನಗಳ ಬಗ್ಗೆ ಮಾಹಿತಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸರಕಾರಿ ವಾಹನಗಳಿಗೆ ಸರಕಾರವೇ ವಿಮೆ ಪಾವತಿಸುತ್ತದೆ. ಸರಕಾರ ವಿಮೆ ಪಾವತಿಸಿದ ವಾಹನಗಳನ್ನು ಸಾರಿಗೆ (ಪರಿವಾಹನ್) ವಾಹನಗಳ ಜತೆ ತುಲನೆ ಮಾಡುವುದು ಸರಿಯಲ್ಲ; ಏಕೆಂದರೆ ಈ ವಾಹನಗಳಲ್ಲಿ ಪ್ರಾರಂಭಿಕ ದತ್ತಾಂಶ ಮಾತ್ರ ಲಭಿಸುತ್ತಿದೆ; ನಂತರದ ನವೀಕರಣದ ಮಾಹಿತಿ ಇಲ್ಲ ಎಂದು ವಿವರಿಸಿದ್ದಾರೆ.