Advertisement

ಜೊಕೋವಿಕ್‌, ಪತ್ನಿಯ ಫ‌ಲಿತಾಂಶವೀಗ ನೆಗೆಟಿವ್‌

11:01 PM Jul 02, 2020 | Sriram |

ಬೆಲ್ಗ್ರೇಡ್‌ (ಸರ್ಬಿಯಾ): ಕೋವಿಡ್- 19 ಪಾಸಿಟಿವ್‌ ದಾಖಲಾದ 10 ದಿನಗಳ ಬಳಿಕ ಟೆನಿಸಿಗ ನೊವಾಕ್‌ ಜೊಕೋವಿಕ್‌ ಮತ್ತು ಪತ್ನಿ ಜೆಲೆನಾ ಅವರ ಫ‌ಲಿತಾಂಶ ನೆಗೆಟಿವ್‌ ಬಂದಿದೆ.

Advertisement

ಗುರುವಾರ ಜೊಕೋವಿಕ್‌ ಅವರ ಮಾಧ್ಯಮ ತಂಡ ಇದನ್ನು ತಿಳಿಸಿದೆ. ಇವರಿಬ್ಬರೂ ಬೆಲ್ಗ್ರೇಡ್‌ ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಲ್ಗ್ರೇಡ್‌ ಮತ್ತು ಝದಾರ್‌ನಲ್ಲಿ ಸ್ವತಃ ಜೊಕೋವಿಕ್‌ ಅವರೇ ಆಯೋಜಿಸಿದ ಪ್ರದರ್ಶನ ಟೆನಿಸ್‌ ಪಂದ್ಯಾವಳಿಯ ವೇಳೆ ಅನೇಕರಿಗೆ ಕೋವಿಡ್- 19 ಅಂಟಿಕೊಂಡಿತ್ತು.

ಟೆನಿಸಿಗರಾದ ಗ್ರಿಗರ್‌ ಡಿಮಿಟ್ರೋವ್‌, ಬೋರ್ನ ಕೊರಿಕ್‌, ವಿಕ್ಟರ್‌ ಟ್ರೊಯಿಕಿ, ಜೊಕೋವಿಕ್‌ ಅವರ ಕೋಚ್‌ ಗೊರಾನ್‌ ಇವಾನಿಸೆವಿಕ್‌ ಅವರ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next