Advertisement

ವಿಂಬಲ್ಡನ್ 2022: 4 ಸೆಟ್‌ಗಳಲ್ಲಿ ಗೆದ್ದ ನೊವಾಕ್‌ ಜೊಕೋವಿಕ್‌

11:32 PM Jun 27, 2022 | Team Udayavani |

ಲಂಡನ್‌: ಕಳೆದ 3 ಬಾರಿಯ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ 4 ಸೆಟ್‌ಗಳ ಗೆಲುವಿನೊಂದಿಗೆ ವಿಂಬಲ್ಡನ್‌ ಓಟ ಆರಂಭಿಸಿದ್ದಾರೆ.

Advertisement

ಸೋಮವಾರದ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಅವರು ದಕ್ಷಿಣ ಕೊರಿಯಾ ವಿರುದ್ಧ 6-3, 3-6, 6-3, 6-4 ಅಂತರದ ಗೆಲುವು ಸಾಧಿಸಿದರು.

ಕೂಟದ ಮೊದಲ ದಿನವೇ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಯಿತು. ಹೀಗಾಗಿ ಸೆಂಟರ್‌ ಕೋರ್ಟ್‌ ಪಂದ್ಯವನ್ನು ಮುಚ್ಚಿದ ಛಾವಣಿಯಲ್ಲಿ ಆಡಲಾಯಿತು.

ಇದನ್ನೂ ಓದಿ:ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ 3-0 ಪರಾಕ್ರಮ: ಸ್ಟೋಕ್ಸ್‌ ಬಳಗಕ್ಕೆ 7 ವಿಕೆಟ್‌ ಜಯ

ವನಿತಾ ಸಿಂಗಲ್ಸ್‌ನಲ್ಲಿ ಟ್ಯುನೀಶಿ ಯಾದ ಓನ್ಸ್‌ ಜೆಬುರ್‌ ಸ್ವೀಡನ್‌ನ ಅರ್ಹತಾ ಆಟಗಾರ್ತಿ ಮಿರ್ಜಾನಾ ಬೋರ್ಕ್‌ ಲಂಡ್‌ ಅವರನ್ನು 6-1, 6-3 ಅಂತರದಿಂದ ಮಣಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next