Advertisement

ಸುಮೊ ಕುಸ್ತಿಪಟುವನ್ನು ಎದುರಿಸಿದ ಜೊಕೋವಿಕ್‌!

10:17 AM Oct 02, 2019 | Team Udayavani |

ಟೋಕಿಯೊ: ವಿಶ್ವದ ನಂ.1 ಟೆನಿಸ್‌ಪಟು ನೊವಾಕ್‌ ಜೊಕೋವಿಕ್‌ ಸುಮೊ ಕುಸ್ತಿಪಟು ವನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ!

Advertisement

ಜಪಾನ್‌ ಓಪನ್‌ ಟೆನಿಸ್‌ ಪಂದ್ಯಾವಳಿಗಾಗಿ ಟೋಕಿಯೋಗೆ ಆಗಮಿಸಿರುವ ಜೊಕೋವಿಕ್‌, ಸೋಮವಾರ ಬೆಳಗ್ಗಿನ ಅಭ್ಯಾಸದ ವೇಳೆ ಸುಮೊ ರಿಂಗ್‌ ಒಂದಕ್ಕೆ ತೆರಳಿ ಅಲ್ಲಿ ವೃತ್ತಿಪರ ಸುಮೊ ಸ್ಪರ್ಧಿಗಳೊಡನೆ ಸೆಣಸಾಡಲು ಪ್ರಯತ್ನಿಸಿದ್ದಾರೆ. ಕೊನೆ ಗೆ ಇದು ತನ್ನಿಂದಾಗದ ಕೆಲಸ ಎಂದು ಮನಗಂಡಿದ್ದಾರೆ!

“ನಾನು ಈ ಸುಮೊ ಪಟು ಗಳೊಂದಿಗೆ ಸೆಣಸಬೇಕೆಂದರೆ ತೂಕ ವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕು, ದೇಹವನ್ನು ಇನ್ನಷ್ಟು ಬೆಳೆಸಬೇಕು. ಬಹುಶಃ ಮೂರು ಪಟ್ಟುಗಳಷ್ಟು ಹೆಚ್ಚು! ಆಗ ಒಂದು ಕೈ ನೋಡ ಬಹುದು’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

“ಇದೊಂದು ಉತ್ತಮ ಅನುಭವ. ನಿನ್ನೆ ತಂದೆಯೊಂದಿಗೆ ಮಾತಾಡುತ್ತಿ ದ್ದಾಗ, ಸುಮೊ ಕುಸ್ತಿಪಟುಗಳನ್ನು ಭೇಟಿ ಯಾಗುವ ಅವಕಾಶವೊಂದು ನನಗೆ ಎದುರಾಗಿರುವ ಬಗ್ಗೆ ಪ್ರಸ್ತಾವಿ ಸಿದ್ದೆ…’ ಎಂಬುದಾಗಿ ಜೊಕೋ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next