Advertisement

ನಮ್ಮ ಪರಂಪರೆಯಲ್ಲಿ ರೇಷ್ಮೆಗೆ ವಿಶಿಷ್ಟ ಸ್ಥಾನ: ಡಾ|ಸಂಧ್ಯಾ ಪೈ

10:07 AM Jan 19, 2020 | Sriram |

ಮಂಗಳೂರು: ಭಾರತೀಯ ಪರಂಪರೆಯಲ್ಲಿ ರೇಷ್ಮೆಗೆ ಅದರದೇ ಆದ ವಿಶಿಷ್ಟ ಸ್ಥಾನವಿದ್ದು, ಪುರಾಣ ಗಳಲ್ಲಿಯೂ ಉಲ್ಲೇಖ ಇದೆ ಎಂದು ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕರಾದ ಡಾ| ಸಂಧ್ಯಾ ಎಸ್‌. ಪೈ ಹೇಳಿದರು.

Advertisement

ದೀಪಾವಳಿ ಸಂದರ್ಭ ಉದಯವಾಣಿ ಪತ್ರಿಕೆಯು ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ ಸಂಸ್ಥೆಯ ಸಹಯೋಗದಲ್ಲಿ ನಡೆಸಿದ “ರೇಷ್ಮೆ ಜತೆ ದೀಪಾವಳಿ’ ಸ್ಪರ್ಧೆಯ ವಿಜೇತರಿಗೆ ನಗರದಲ್ಲಿ ಶನಿವಾರ ಜರಗಿದ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೇಷ್ಮೆ ಬಟ್ಟೆ 10 ಸಾವಿರ ವರ್ಷಗಳ ಹಿಂದೆ ಚೀನದಲ್ಲಿ ಆರಂಭವಾಯಿತು ಎಂಬ ಮಾತಿದೆ. ರಾಮಾಯಣದಲ್ಲಿ ಬರುವ ಘಟನೆಗಳು 10,000 ವರ್ಷಗಳ ಹಿಂದೆ ನಡೆದವು ಎಂದು ಹೇಳಲಾಗುತ್ತಿದ್ದು, ಅಲ್ಲಿಯೂ ಸೀತೆ ರೇಷ್ಮೆ ವಸ್ತ್ರಗಳನ್ನು ಧರಿಸುತ್ತಿದ್ದರು ಎಂಬ ಉಲ್ಲೇಖ ಇದೆ. ಹಾಗಾಗಿ ಭಾರತ ದಲ್ಲಿಯೂ 10,000 ವರ್ಷಗಳ ಹಿಂದೆ ರೇಷ್ಮೆ ಬಳಕೆಯಲ್ಲಿತ್ತು ಎನ್ನಬಹುದು ಎಂದರು.


ಕಾಲ ಬದಲಾದಂತೆ ಫ್ಯಾಶನ್‌ ಕೂಡ ಬದಲಾಗಿದೆ. ಆದರೆ ರೇಷ್ಮೆ ಸೀರೆ ತಯಾರಿಸುವಲ್ಲಿ ಇರುವ ಕೌಶಲ ಮತ್ತು ಸೂಕ್ಷ್ಮತೆ ಭಾರತದಲ್ಲಿ ಮಾತ್ರ ಇದೆ; ಪ್ರಪಂಚದ ಬೇರೆಲ್ಲಿಯೂ ಕಂಡು ಬರುವುದಿಲ್ಲ ಎಂದು ತಿಳಿಸಿದರು.

ಸ್ಪರ್ಧೆಯ ವಿಜೇತರು ಹಾಗೂ ಎಲ್ಲ ಸ್ಪರ್ಧಿಗಳನ್ನು ಸಂಧ್ಯಾ ಪೈ ಅಭಿನಂದಿಸಿದರು. ಉದಯವಾಣಿಯ ಯೊಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಅವಿನಾಭಾವ ಸಂಬಂಧ
ಮುಖ್ಯ ಅತಿಥಿಯಾಗಿದ್ದ ಶ್ರೀನಿವಾಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಎ. ಶ್ಯಾಮ ರಾವ್‌ ಫೌಂಡೇಶನ್‌ನಕಾರ್ಯದರ್ಶಿ ಮಿತ್ರಾ ಶ್ರೀನಿವಾಸ್‌ ರಾವ್‌ ಅವರು ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ರೇಷ್ಮೆಗೂ ಸೀರೆಗೂ ಅವಿನಾಭಾವ ಸಂಬಂಧ. ವಿದೇಶಿಯರು ಕೂಡ ಇಲ್ಲಿಗೆ ಬಂದು ನಮ್ಮ ಸಂಸ್ಕೃತಿಯ ಅಧ್ಯಯನ ನಡೆಸಿ ಅದರ ಮಹತ್ವವನ್ನು ವಿವರಿಸಿದ್ದಾರೆ. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದರು.

Advertisement

ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ನ ಮುರಳೀಧರ ಶೆಟ್ಟಿ ಮಾತನಾಡಿ, ಉದಯವಾಣಿಯು ಹೊಸ ಹೊಸ ಆಲೋಚನೆಗಳೊಂದಿಗೆ ವಿನೂತನ ಯೋಜನೆಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. 50 ವರ್ಷ ತುಂಬಿದ ಉದಯವಾಣಿ ತನ್ನ ವ್ಯವಹಾರದ ಜತೆಗೆ ಸಮಾಜಕ್ಕೆ ಕೊಡುಗೆ ನೀಡುವ ಆಲೋಚನೆಗೆ ಸಹಯೋಗ ನೀಡಲು 75 ವರ್ಷ ತುಂಬಿದ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ ಸಂಸ್ಥೆಗೆ ಸಂತೋಷವಾಗುತ್ತದೆ ಎಂದರು. ಸಂಸ್ಥೆಯ ಅಶ್ವಿ‌ತಾ ಮಹೇಂದ್ರ ಶೆಟ್ಟಿ ಅವರೂ ಮಾತನಾಡಿ ವಿಜೇತರನ್ನು ಅಭಿನಂದಿಸಿದರು.

ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ ಸಂಸ್ಥೆಯ ಕುಟುಂಬದ ಸದಸ್ಯರಾದ ರಜನಿ ಮುರಳೀಧರ ಶೆಟ್ಟಿ, ನಿಧೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ಉದಯವಾಣಿಯ ಸಂಪಾದಕ ಅರವಿಂದ ನಾವಡ ಸ್ವಾಗತಿಸಿ, ಇದು ತೃತೀಯ ವರ್ಷದ ಸ್ಪರ್ಧೆಯಾಗಿದ್ದು, ದೀಪಾವಳಿಯ ಸಂಪ್ರದಾಯ ಮತ್ತು ಹಬ್ಬವನ್ನು ಜತೆ ಜತೆಯಾಗಿ ಸಂಭ್ರಮಿಸ ಬೇಕೆಂಬ ಉದ್ದೇಶದಿಂದ ಏರ್ಪಡಿಸಲಾಗಿದೆ ಎಂದರು.
ಸಹಾಯಕ ಸಂಪಾದಕ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರಸ್ತಾವನೆಗೈದು ಸ್ಪರ್ಧೆಯ ವಿಜೇತರ ವಿವರ ನೀಡಿದ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಮಿಜಾರ್‌ ಅವರು ಈ ವರ್ಷ 3,000 ಸ್ಪರ್ಧಿಗಳು 6,000ಕ್ಕೂ ಹೆಚ್ಚು ಫೋಟೊಗಳನ್ನು ಕಳುಹಿಸಿದ್ದರು ಎಂದರು. ಮ್ಯಾಗಸಿನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ. ವಂದಿಸಿದರು.

ಬಹುಮಾನ ವಿಜೇತರ ವಿವರ
ಪ್ರಥಮ: ವೈಷ್ಣವಿ, ಸುಮನ, ರಮ್ಯಾ, ರೇಖಾ, ವರಲಕ್ಷ್ಮೀ, ಶ್ರೀಲಕ್ಷ್ಮೀ, ಸಾನ್ವಿ
ದ್ವಿತೀಯ: ಅಕ್ಷತಾ ಪಿ. ನಾಯಕ್‌. ವಿನಯ ಎಂ. ಪೈ, ಅನುಷಾ ನಾಯಕ್‌, ಸುಲತಾ ಪೈ, ಶೋಭಿತ್‌ ನಾಯಕ್‌ ಅಜ್ಜರ ಕಾಡು, ಉಡುಪಿ.
ತೃತೀಯ: ದೀಪಾ ಮಸ್ಕರೇಸ್‌, ಸವಿತಾ ಕೋಟ್ಯಾನ್‌, ಕವಿತಾ ಪಿ., ಸ್ವರೂಪ ದಯಾನಂದ, ಹೇಮಲತಾ ಪೂಜಾರಿ, ಸರಸ್ವತಿ ಕೆ., ಎಲಿಶಾ ಜಾಸ್ಮಿನ್‌ ಕ್ರಾಸ್ತಾ, ಚೈತ್ರಾ ಶೆಟ್ಟಿ, ಉಜ್ವಲ ಕುಂಬಾರ್‌, ಲಲಿತಾ ಶೆಟ್ಟಿ, ಪ್ರಿಯಾ ಎಂ.ಎಸ್‌., ಸುಪರ್ಣ ಬಳಗ ಮಂಗಳೂರು.
8 ಪ್ರೋತ್ಸಾಹಕ ಬಹುಮಾನಗಳು: (1) ಮಲ್ಲಿಕಾ ಶೆಟ್ಟಿ, ವಿನುತಾ ಶೆಟ್ಟಿ, ಶ್ರೇಯಾ ಶೆಟ್ಟಿ ಬಜಪೆ. (2) ತನಯ, ಪ್ರಫ‌ುಲ್ಲಾ ಗಣೇಶ್‌, ಕಾವ್ಯಾ, ಪಾರ್ವತಿ. (3) ಅಮಿತಾ ಮಿನೇಜಸ್‌, ಸ್ವಪ್ನಾ ಮೂಡುಬಿದಿರೆ, ವಿಲ್ಮಾ ಪ್ರಿಯಾಂಕಾ, ಬಬಿತಾ ಮಿನೇಜಸ್‌, ಅಲ್ವಿಟಾ. (4) ವಿಜೇತಾ ನಾಯಕ್‌, ಶಾಂತಾ ಶೆಣೈ, ಗೀತಾ ಶೆಣೈ, ಸುಮನಾ ಶೆಣೈ, ಸುಜಾತಾ ಶೆಣೈ, ರಂಜಿತಾ ಶೆಣೈ, ರಕ್ಷಿತಾ ಶೆಣೈ, ಜಾಹ್ನವಿ ಭಟ್‌. (5) ಇಂದಿರಾ, ದೀಪಾ, ರೂಪಾ, ಗೀತಾ ಸಾಲ್ಮರ ಕಾರ್ಕಳ. (6) ಮಮತಾ, ಪ್ರಿಯಾಂಕಾ, ಪ್ರೀತಿಕಾ, ಪ್ರಿಯಾ ಲಾೖಲ ಬೆಳ್ತಂಗಡಿ. (7) ಸುಲೋಚನಾ, ಭುಜಂಗರಾವ್‌ ಕೋಟೇಶ್ವರ ಕುಂದಾಪುರ. (8) ರೂಪಾ ಪೈ, ಶ್ರಾವ್ಯಾ, ಶ್ರೀಯಾ ವಾಮದಪದವು ಬಂಟ್ವಾಳ.

ಸರ್ವ ಧರ್ಮೀಯರು ಸೇರಿ ಆಚರಿಸಿದೆವು
ನಾವು ಸರ್ವ ಧರ್ಮೀಯರೂ ಸೇರಿ ದೀಪಾವಳಿ ಆಚರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದೆವು. ಕಳೆದ ವರ್ಷದಂತೆ ಈ ವರ್ಷವೂ ನಮಗೆ ತೃತೀಯ ಬಹುಮಾನ ಬಂದಿದೆ. ಹೀಗಾಗುತ್ತದೆ ಎಂದು ನಾವು ಎಣಿಸಿರಲಿಲ್ಲ. ತುಂಬಾ ಖುಷಿಯಾಗಿದೆ.
– ಸರಸ್ವತಿ ಕೆ., ತೃತೀಯ ಬಹುಮಾನ ವಿಜೇತರ ಬಳಗದ ಸದಸ್ಯೆ

ಚಿಕ್ಕಂದಿನಲ್ಲೇ ಉದಯವಾಣಿ ಎಂದರೆ ಇಷ್ಟ
ನನಗೆ ಚಿಕ್ಕಂದಿನಲ್ಲೇ ಉದಯವಾಣಿ ಎಂದರೆ ಬಹಳ ಇಷ್ಟ. ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಮಳೆ ಕೊಯ್ಲು ಅಭಿಯಾನ ಮತ್ತು ಮತದಾರರ ಜಾಗೃತಿ ಬಹಳಷ್ಟು ಉಪಯುಕ್ತ. ಮಹಿಳಾ ಸಂಪದದಲ್ಲಿ ವಿಚಾರ ಪೂರ್ಣ ಲೇಖನಗಳು ಬರುತ್ತಿವೆ. ದೀಪಾವಳಿ ಎಂದರೆ ಕೇವಲ ಪಟಾಕಿ ಹಚ್ಚುವುದಲ್ಲ; ಅದರ ಹೊರತಾಗಿ ಬೇರೇನೋ ಇದೆ ಎನ್ನುವುದನ್ನು ಈ ಸ್ಪರ್ಧೆ ಎತ್ತಿ ತೋರಿಸುತ್ತದೆ. ಬಹುಮಾನ ಬಂದಿರುವುದಕ್ಕೆ ಖುಷಿಯಾಗಿದೆ.
– ಅಕ್ಷತಾ ಪಿ. ನಾಯಕ್‌,
ದ್ವಿತೀಯ ಬಹುಮಾನ ವಿಜೇತರ ಬಳಗದ ಸದಸ್ಯೆ

ಸ್ಪರ್ಧೆ ಮುಂದುವರಿಯಲಿ
ಉದಯವಾಣಿ ಹಮ್ಮಿಕೊಂಡ ಈ ಸ್ಪರ್ಧೆ ಮುಂದುವರಿಯ ಬೇಕು. ಮುಂದಿನ ವರ್ಷ ಪ್ರಥಮ ಬಹುಮಾನಕ್ಕಾಗಿ ಪ್ರಯತ್ನಿಸು ತ್ತೇವೆ. ಉದಯವಾಣಿ ಮತ್ತು ಸ್ಪರ್ಧೆಯ ಪ್ರಾಯೋಜಕರಿಗೆ ಅಭಿನಂದರೆಗಳು.
-ವಿನುತಾ ಶೆಟ್ಟಿ, ಪ್ರೋತ್ಸಾಹಕರ ಬಹುಮಾನ ವಿಜೇತರು.

Advertisement

Udayavani is now on Telegram. Click here to join our channel and stay updated with the latest news.

Next