Advertisement
ಸೆಗಣಿ ಮಿಶ್ರಿತ ಹಣತೆದೀಪಾವಳಿ ಅಂದರೆ ಬೆಳಕೇ ಪ್ರಾಧಾನ್ಯ. ಇತ್ತೀಚೆಗಿನ ವರ್ಷಗಳಲ್ಲಿ ಜನರು ಮಣ್ಣಿನ ಹಣತೆಗಳನ್ನು ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ. ಈ ಬಾರಿ ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಸೆಗಣಿಯಿಂದ ನಿರ್ಮಿಸಿದ ಹಣತೆ. ದೇಶದೆಲ್ಲೆಡೆಯಂತೆ ಕರಾವಳಿಯ ಎಲ್ಲ ಕಡೆಯೂ ಈ ಬಾರಿ ಸೆಗಣಿ ಮಿಶ್ರಿತ ಹಣತೆ ಮಾರುಕಟ್ಟೆಗೆ ಬಂದಿದೆ. ವಿವಿಧ ಸಂಘ ಸಂಸ್ಥೆಗಳು, ಶಾಲೆ, ಕಾಲೇಜಿನ ಮಕ್ಕಳು ಹೀಗೆ ಹಲವಾರು ಮಂದಿ ಈ ಬಾರಿ ಸೆಗಣಿಯ ಹಣತೆ ನಿರ್ಮಿಸಿ ಮಾರುಕಟ್ಟೆಗೆ ಒದಗಿಸಿದ್ದಾರೆ. ಶೇ.70ರಷ್ಟು ಗೋಮಯ ಹಾಗೂ ಶೇ.30 ಮಣ್ಣು ಅಥವಾ ಇತರ ಪರಿಸರ ಪೂರಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದು ನೀರಿನಲ್ಲಿ ತೇಲುತ್ತದೆ. ಕೆಲವು ದೀಪಗಳನ್ನು ಒಮ್ಮೆಗೆ ಮಾತ್ರ ಬಳಸಬಹುದಾಗಿದ್ದರೆ, ಇನ್ನು ಕೆಲವನ್ನು 5, 6 ಬಾರಿ ಹಚ್ಚಬಹುದಾಗಿದೆ. 50 ರೂ. ಪ್ಯಾಕೆಟ್‌ನಲ್ಲಿ 10ರಿಂದ 12 ಹಣತೆಗಳಿರುತ್ತವೆ. ದ.ಕ.. ಉಡುಪಿಯ ಹೆಚ್ಚಿನ ಅಂಗಡಿಗಳಲ್ಲಿ ಇದು ಲಭ್ಯವಿದ್ದು, ತಾತ್ಕಾಲಿಕ ಪಟಾಕಿ ಮಾರಾಟ ಅಂಗಡಿಗಳಲ್ಲೂ ಕೆಲವರು ಮಾರಾಟಕ್ಕೆ ಇರಿಸಿದ್ದಾರೆ. ಪರಿಸರ ಪೂರಕ ದೀಪಾವಳಿಯ ನಿಟ್ಟಿನಲ್ಲಿ ಇದೊಂದು ಹೊಸ ಹೆಜ್ಜೆ.
ದೀಪಾವಳಿಯ ಇನ್ನೊಂದು ವಿಶೇಷ ಸ್ಥಳೀಯವಾಗಿ ತಯಾರಿಸಲಾಗಿರುವ ಅಷ್ಟಪಟ್ಟಿ ಗೂಡುದೀಪ. ಚೀನ ವಸ್ತುಗಳಿಗೆ ಬಹಿಷ್ಕಾರ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಆಕಾಶಬುಟ್ಟಿಗಳಿಗೆ ಬೇಡಿಕೆ ಹೆಚ್ಚಿದೆ. ಕರಾವಳಿಯ ಪ್ರಸಿದ್ಧ ಅಷ್ಟಪಟ್ಟಿ ಗೂಡುದೀಪಗಳಿಗೆ ಉತ್ತಮ ಬೇಡಿಕೆ ಬಂದಿದ್ದು, ಹೆಚ್ಚಿನವರು ಇದನ್ನು ಕೇಳಿ ಪಡೆಯುತ್ತಿದ್ದಾರೆ. ಹಿಂದೊಮ್ಮೆ ಮನೆಯಲ್ಲಿ ಮಾಡಿದ್ದವರು ಈಗ ಮತ್ತೂಮ್ಮೆ ಗೂಡುದೀಪ ತಯಾರಿಸಿ ಹಬ್ಬಕ್ಕೆ ದೇಶೀಯತೆಯ ಮೆರುಗನ್ನು ತಂದಿದ್ದಾರೆ. ಈ ಬಾರಿ ಕೆಲವೇ ಕೆಲವರು ಪ್ಲಾಸ್ಟಿಕ್ ಮಾದರಿಯ ವಸ್ತುಗಳಿಂದ ರಚಿಸಿದ ಗೂಡುದೀಪಗಳನ್ನು ಮಾರಾಟಕ್ಕೆ ಇಟ್ಟಿದ್ದರೂ ಅದಕ್ಕೆ ಬೇಡಿಕೆಯೇ ಇರಲಿಲ್ಲ. ವಾತಾವರಣ ಶುದ್ಧ
ಎಲ್ಲವನ್ನೂ ಪವಿತ್ರ ಮಾಡುವಂತದ್ದು ಗೋಮಯ. ಪಾವಿತ್ರತೆ ಇರುವಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಗೋಮಯದಲ್ಲಿ ಶ್ರೀ ಲಕ್ಷ್ಮಿ ನೆಲೆಸಿದ್ದಾಳೆ ಎನ್ನುವುದು ನಂಬಿಕೆ. ವೈಜ್ಞಾ ನಿಕವಾಗಿಯೂ ಗೋಮಯದಿಂದ ವಾತಾ ವರಣ ಶುದ್ಧವಾಗುತ್ತದೆ. ಋಣಾತ್ಮಕ ಶಕ್ತಿ ಹೊಡೆದೋಡಿಸುತ್ತದೆ. ಅಲ್ಲದೆ ಗೋಮಯ ಬಳಕೆಯಿಂದ ವೈರಸ್ ನಿರ್ಮೂಲ ನೆಯಾಗುತ್ತದೆ ಎನ್ನುವುದೂ ಸಾಬೀತಾಗಿದೆ.
Related Articles
ಕಳೆದ ದೀಪಾವಳಿಯಿಂದ ದೇಶದಲ್ಲಿ ಪಟಾಕಿ ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಒಟ್ಟಾರೆ ವ್ಯಾಪಾರದಲ್ಲಿ ಶೇ. 20ರಿಂದ ಶೇ. 30ರಷ್ಟು ಕುಸಿತ ಕಂಡು ಬಂದಿದೆ. ಭಾರೀ ಶಬ್ದವನ್ನುಂಟು ಮಾಡುವ ಪಟಾಕಿಗಳ ಬೇಡಿಕೆ ಶೇ. 50ರಷ್ಟು ಕಡಿಮೆಯಾಗಿತ್ತು. ಮುಂಬಯಿ-ಥಾಣೆಯಂತಹ ಮಹಾನಗರಗಳಲ್ಲಿ ಪ್ರತಿ ವರ್ಷ 300 ಕೋಟಿ. ರೂ.ಗಳ ಪಟಾಕಿಗಳು ಮಾರಾಟವಾಗುತ್ತಿತ್ತು. ಅವುಗಳ ಪ್ರಮಾಣ ಕಳೆದ ವರ್ಷ ಶೇ. 30ರಷ್ಟು ಇಳಿಕೆಯಾಗಿತ್ತು. ಈ ವರ್ಷ ಹಸಿರು ಪಟಾಕಿ ಮತ್ತು ಆತ್ಮನಿರ್ಭರ್ ಭಾರತ್‌ನಡಿ ದೀಪಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ಪಟಾಕಿ ವ್ಯಾಪಾರದ ಮೇಲೆ ನೇರ ಪರಿಣಾಮಬೀರಲಿದೆ.
Advertisement