Advertisement

ಸಹ-ವಾಸಿ ಆಚರಣೆಯಲ್ಲಿ ಬೆಳಗಿದ ದೀಪಾವಳಿ

11:23 PM Oct 29, 2019 | sudhir |

ಹೂವು, ಮಾವಿನ ಎಲೆಯ ಸಿಂಗಾರ
ಅಂಬಲಪಾಡಿ ಜನಾರ್ದನ್‌ ಹೈಟ್ಸ್‌ನಲ್ಲಿ ಲೇಡಿಸ್‌ ಕ್ಲಬ್‌ ಸದಸ್ಯರು ಒಂದಾಗಿ “ಉದಯವಾಣಿ ಸಹವಾಸ ಸಮ್ಮಿಲನ’ ಪರಿಕಲ್ಪನೆಯಲ್ಲಿ ದೀಪಾವಳಿ ಹಬ್ಬ ಆಚರಿಸಲಾಯಿತು. ಫ್ಲ್ಯಾಟ್‌ನ್ನು ಹೂವು, ಮಾವಿನ ಎಲೆಯಿಂದ ಸಿಂಗರಿಸಲಾಯಿತು. ಮಕ್ಕಳು ಹಾಗೂ ಮಹಿಳೆಯರು ಹಣತೆ ಹಚ್ಚಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ರಂಗೋಲಿ ಬಿಡಿಸುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಈ ಸಮ್ಮಿಲನ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಿದೆ. ಪಟಾಕಿಯನ್ನು ಸಿಡಿಸದೆ, ಸಿಹಿ ಹಂಚಿ ಸಂಭ್ರಮಿಸಲಾಯಿತು.
-ಪುಷ್ಪಾ ಅಡಿಗ, ಅಂಬಲಪಾಡಿ ಜನಾರ್ದನ ಹೈಟ್ಸ್‌

Advertisement

ಪಟಾಕಿ ಬಳಸಿಲ್ಲ
ದೀಪಾವಳಿ ಸಂಭ್ರಮಾಚರಣೆಗಳ ಬಗ್ಗೆ ವಾರ ಹಿಂದೆಯೇ ಯೋಜನೆ ರೂಪಿಸಿಕೊಂಡಿ¨ªೆವು. ಅಪಾರ್ಟ್‌ಮೆಂಟ್‌ ತುಂಬಾ ಹಣತೆ ಮೂಲಕ ದೀಪ ಬೆಳಗಿಸಬೇಕೆಂದು ಮೊದಲೇ ನಿಶ್ಚಯಿಸಿದಂತೆ ಯಶಸ್ವಿಯಾಗಿ ನಡೆಯಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಸಾಥ್‌ ನೀಡಿದರು. ಸಿಹಿತಿನಿಸು, ಕಡುಬು, ಪಾಯಸ, ಅವಲಕ್ಕಿ ಸಹಿತ ತಿಂಡಿಯಲ್ಲಿ ಹಲವು ರೀತಿಯ ವೆÂವಿಧ್ಯತೆಗಳಿದ್ದವು. ಕಳೆದ ಬಾರಿ ಮಾಡಿದಂತೆ ಈ ಬಾರಿ ಪಟಾಕಿಯನ್ನು, ಕ್ಯಾಂಡಲ್‌ಗ‌ಳನ್ನು ಯಾರೂ ಬಳಸಲಿಲ್ಲ. ಮಣ್ಣಿನ ಹಣತೆಯ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡೆವು. ಆಚರಣೆಗಳ ಅಪೂರ್ವ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡು ಎಲ್ಲರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಂಡೆವು. ಎಲ್ಲ ಫ್ಲ್ಯಾಟ್‌ಗಳ ಮುಂಭಾಗದಲ್ಲಿ ರಂಗೋಲಿ ಹಾಕಿ ಮತ್ತಷ್ಟು ಸಂಭ್ರಮಪಟ್ಟುಕೊಂಡೆವು.
– ವಿದ್ಯಾ ಮತ್ತು ಸ್ನೇಹಿತರು, ಕೀರ್ತಿ ಸಾಲಿಟೆರ್‌, ಬ್ರಹ್ಮಗಿರಿ

ನಮ್ಮ ಸಂಸ್ಕೃತಿ, ಸಂಪ್ರದಾಯದ ಪ್ರತೀಕ
ದೀಪಾವಳಿ ಹಬ್ಬ ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯದ ಪ್ರತೀಕ. ಈ ನೆಲೆಯಲ್ಲಿ ಮಹಿಳೆಯರು ಒಟ್ಟಾಗಿ ಇದೇ ಮೊದಲ ಬಾರಿಗೆ ಬೆಳಕಿನ ಹಬ್ಬವನ್ನು ಆಚರಿಸಿದ್ದೇವೆ. ಮಾವಿನ ಎಲೆ ಹಾಗೂ ಹೂವು ಮೂಲಕ ಫ್ಲ್ಯಾಟ್‌ ಅಲಂಕರಿಸಿ ರಂಗೋಲಿ ಹಾಕಲಾಯಿತು. ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು. ಹೆಣ್ಣು ಮಕ್ಕಳು ಒಂದೇ ಕಲರ್‌ ಸೀರೆ ಉಟ್ಟು ಸಂಭ್ರಮಿಸಿದ್ದೇವೆ. ಇದೇ ಮೊದಲ ಬಾರಿಗೆ ಉದಯವಾಣಿ ಸಹವಾಸ ಸಮ್ಮಿಲನ ಪರಿಕಲ್ಪನೆಯಲ್ಲಿ ಹಬ್ಬ ಆಚರಿಸಿರುವುದು ಖುಷಿ ನೀಡಿದೆ
– ಗ್ಲಾಡೀಸ್‌, ಡೈಮಂಡ್‌ ಫ್ಯಾ$Éಟ್‌ ಅಜ್ಜರಕಾಡು

Advertisement

Udayavani is now on Telegram. Click here to join our channel and stay updated with the latest news.

Next