Advertisement
ಇಂತಹದ್ದೊಂದು ವಿಶಿಷ್ಟ ಪರಿ ಕಲ್ಪನೆಯನ್ನು ಇಕೋ ಫ್ರೆಂಡ್ಸ್ ಗ್ರೂಪ್ ಮಂಗಳೂರಿಗೆ ಪರಿಚಯಿಸಿದೆ. ಖರೀದಿ ಕೆಲಸಗಳೆಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಹೊತ್ತಿನಲ್ಲಿ ದೀಪಾವಳಿಗೂ ನಿಸರ್ಗಸ್ನೇಹಿಯಾದ ಹಣತೆ, ದೀಪಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಅವಕಾಶ ಒದಗಿಸಿದ್ದು, ಮಂಗಳೂರು ನಗರದೊಳಗೆ ಅಂಚೆ ಯಣ್ಣ ಅದನ್ನು ಮನೆಮನೆಗೆ ತಲುಪಿಸು ವಂತೆ ಜವಾಬ್ದಾರಿ ವಹಿಸಿದೆ.
ಮೈಸೂರು, ಚನ್ನಪಟ್ಟಣ, ಉತ್ತರ ಪ್ರದೇಶ, ಪುದುಚೇರಿ, ಕೇರಳ, ಗುಜ ರಾತಿನಲ್ಲಿ ಶುದ್ಧ ಮಣ್ಣಿನಿಂದ ತಯಾ ರಾದ ಹಣತೆ ಮತ್ತು ದೀಪಗಳನ್ನು ಇಕೋ ಫ್ರೆಂಡ್ಸ್ ಗ್ರೂಪ್ ಮಂಗಳೂರಿಗೆ ತರಿಸಿದೆ. ಲೋಪ ಮರಗಳನ್ನು ಬಳಸಿಕೊಂಡು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದ್ದು, ನೋಡಲು ಆಕರ್ಷಕವಾಗಿವೆ. ದೀಪಗಳನ್ನು ಬಲ್ಮಠ ಮ್ಯಾಂಗೋ ರೆಸ್ಟೋರೆಂಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಅ. 26ರ ವರೆಗೆ ಗ್ರಾಹಕರಿಗೆ ಇದನ್ನು ನೇರವಾಗಿಯೂ ಕೊಳ್ಳಲು ಅವ ಕಾಶವಿದೆ ಎನ್ನುತ್ತಾರೆ ಇಕೋ ಫ್ರೆಂಡ್ಸ್ ಗ್ರೂಪ್‌ನ ರಾಜೇಶ್. ಲ್ಯಾಂಟೀನ್ ದೀಪ ಪರಿಚಯ
ಹಳ್ಳಿಗಾಡಿನಲ್ಲಿ ಈಗಲೂ ಉಳಿದು ಕೊಂಡ ಲ್ಯಾಂಟೀನ್ ದೀಪಗಳನ್ನು ನಗರಕ್ಕೆ ಪರಿಚಯಿಸಲು ಹೊರಟಿರುವ ಇಕೋ ಫ್ರೆಂಡ್ಸ್ ತಂಡವು, ಈ ಲ್ಯಾಂಟೀನ್ ದೀಪಗಳನ್ನು ಆನ್‌ಲೈನ್ ಬುಕ್ ಮಾಡಿದರೆ, ಅಂಚೆಯಣ್ಣನೇ ಮನೆಗೆ ತಂದು ಕೊಡುತ್ತಾನೆ ಎನ್ನುತ್ತಾರೆ ತಂಡದ ಸದಸ್ಯರು. ಗುಜರಾತಿನ ಮರಳುಗಾಡಿನ ಪ್ರಾಂತ್ಯದಲ್ಲಿ ಮಹಿಳಾ ಕಲಾವಿದರು ಸಿದ್ಧಪಡಿಸಿರುವ ಆಕರ್ಷಕ ಟಿ ರಾ ಕೋಟ ಲ್ಯಾಂಟೀನ್‌ಗಳು, ಕರ್ನಾ ಟಕದ ಕಲಾವಿದರು ಸಿದ್ಧಪಡಿಸಿದ ಕೆಂಪು ಮಣ್ಣಿನ ಟೆರಾಕೋಟ ಕಂದಿಲು, ಪಾಂಡಿ ಚೇರಿಯ ತೈಲ ದೀಪಗಳು, ಮಧುರೈಯ ಮಣ್ಣಿನ ದೀಪಗಳು ಆಕರ್ಷಣೆ ಪಡೆಯುತ್ತಿವೆ.
Related Articles
Advertisement