Advertisement
ಮನೆಯ ಯಾಜಮಾನ ಬಿಳಿ ಮುಂಡು ಧರಿಸಿ, ಬಿಳಿ ಮುಂಡಾಸು ಹಾಕಿ ಭತ್ತದ ರಾಶಿಯ ಎದುರು ದೀಪ ಬೆಳಗಿಸಿ, ಗೆರಸೆಯಲ್ಲಿ ಅಡಿಕೆ, ವೀಳ್ಯದೆಲೆ, ಬೆಲ್ಲ, ತೆಂಗಿನಕಾಯಿ ತುಂಡು, ಗೊಂಡೆ ಹೂ ಜತೆಗೆ ಒಂದೊಂದು ಸಾಲು ಅವಲಕ್ಕಿ, ಅಕ್ಕಿ, ಭತ್ತವನ್ನು ಗೆರೆಸೆಯಲ್ಲಿ ಇಟ್ಟು ಒಟ್ಟು ಮೂರು ಸಾಲುಗಳಾಗಿ ಮಾಡಲಾಗುತ್ತದೆ. ಮೂರು, ಮೂರು ಹಣತೆಯ ದೀಪ ಇಟ್ಟು ಒಟ್ಟು ಒಂಬತ್ತು ದೀಪ ಬೆಳಗಿಸಿ, ಭತ್ತದ ರಾಶಿಗೆ ಪೊಲಿಪೂಜೆ ಮಾಡಲಾಗುತ್ತದೆ.ದೈವಗಳಿದ್ದ ಮನೆಗಳಲ್ಲಿ ಮೊದಲು ದೈವಗಳಿಗೆ ಪೂಜೆ ಮಾಡಿ ಅನಂತರ ಭತ್ತದ ರಾಶಿಗೆ ಪೂಜೆ ಮಾಡುತ್ತಾರೆ. ಬಳಿಕ ದನದ ಹಟ್ಟಿಗೆ, ಭತ್ತ ಹೊಡೆಯುವ ಪಡಿ,ಅಲ್ಲಿದ್ದ ಭತ್ತದ ರಾಶಿಗೂ ಪೂಜೆ ಮಾಡಲಾಗುತ್ತದೆ. ಭತ್ತದ ರಾಶಿಯಲ್ಲಿ ಮಣೆ ಇಟ್ಟು ಪೂಜೆ ಮಾಡಿದ ಗೆರೆಸಿಯನ್ನು ಇಡಲಾಗುತ್ತದೆ ಎಂದು