Advertisement
ಗೋ ಪೂಜೆಯಂದು ಹಟ್ಟಿಯಲ್ಲಿ ಗೊಬ್ಬರ ತೆಗೆದು, ತೊಳೆದು ಶುಚಿಗೊಳಿಸಿ ದನಕರು, ಕೋಣ, ಎಮ್ಮೆಗಳನ್ನು ಗುಡ್ಡೆಗೆ ಮೇಯಲು ಬಿಡದೆ ಅವುಗಳಿಗೆ ಸ್ನಾನ ಮಾಡಿಸಿ, ಗೊಂಡೆಯ ಹೂವಿನ ಮಾಲೆ ಹಾಕಿ ದನಗಳಿಗೆ ಕರುಗಳಿಗೆ ಅವಲಕ್ಕಿ ಪಂಚಾಕಜ್ಜಯ, ಸಿಹಿ ಗಟ್ಟಿ , ಚಪ್ಪೆ ಗಟ್ಟಿ ಮಾಡಿ ಹಾಗೂ ಹಿಂಡಿ ನೀಡಿ ಆರತಿ ಬೆಳಗಿ ಪೂಜೆ ಮಾಡುವ ವಿಧಾನ ಇತ್ತು. ಇದರಿಂದ ಮನೆ ಮಂದಿ ಸಂತಸ ಪಡುತ್ತಿದ್ದರು. 25 ವರ್ಷಗಳ ಹಿಂದೆ ಹಟ್ಟಿ ತುಂಬಾ ದನ, ಕರು, ಗದ್ದೆ ಹೊಳುವ ಕೋಣಗಳು ಇದ್ದವು ಆದರೆ ಇಂದು ಆಧುನಿಕತೆಗೆ ಬೇಸಾಯ ಪದ್ಧತಿಯು ಬದಲಾಗಿದೆ ಹಾಗೂ ಹಬ್ಬ ಆಚರಣೆಯಲ್ಲೂ ಬದಲಾವಣೆ ಆಗಿದೆ.– ಸಚ್ಚಿದಾನಂದ ಉಡುಪ, ಕೊಡೆತ್ತೂರು