ಡರ್ಬನ್: ನಾಲ್ಕು ದೇಶಗಳ ಅಂಡರ್ 19 ಏಕದಿನ ಕೂಟದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 89 ರನ್ ಭಾರಿ ಅಂತರದಲ್ಲಿ ಜಯ ಗಳಿಸಿದೆ.
ಡರ್ಬನ್ ನ ಕಿಂಗ್ಸ್ ಮೇಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ದಿವ್ಯಾಂಶ್ ಸಕ್ಸೇನಾ ಮತ್ತು ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 301 ರನ್ ಕಲೆಹಾಕಿತು. ಇದನ್ನು ಬೆನ್ನತ್ತಿದ ಜಿಂಬಾಬ್ವೆ ಹುಡುಗರು ಕೇವಲ 212 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ಭಾರತದ ಪರ ದಿವ್ಯಾಂಸ್ ಸಕ್ಸೇನಾ ಭರ್ಜರಿ ಶತಕ ಬಾರಿಸಿದರು. ಸಕ್ಸೇನಾ 137 ಎಸೆತಗಳಿಂದ 128 ರನ್ ಗಳಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 78 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಮೊದಲ ವಿಕೆಟ್ ಗೆ ಇವರಿಬ್ಬರ ಜೋಡಿ 143 ರನ್ ಜೊತೆಯಾಟ ನಡೆಸಿದರು.
ಜಿಂಬಾಬ್ವೆ ಪರ ನಾಯಕ ಡಾಯಿನ್ ಮೈರ್ಸ್ 83 ರನ್ ಗಳಿಸಿದರೆ ಉಳಿದ ಯಾರೂ ಉತ್ತಮ ಆಟವಾಡಿದರು. ಭಾರತ ಮತ್ತು ಶುಭಾಂಗ್ ಹೆಗ್ಡೆ ತಲಾ ಮೂರು ವಿಕೆಟ್ ಪಡೆದರು.
ದಿವ್ಯಾಂಶ್ ಸಕ್ಸೇನಾ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.