Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜಮೀರ್ ಹೆಸರು ಹುಬ್ಬಳ್ಳಿ ಪ್ರಕರಣದಲ್ಲೂ ಕೇಳಿ ಬರುತ್ತಿದೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಕೋಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಗಲಭೆಕೋರರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್ ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ ಎಂದರು.
Related Articles
Advertisement
ಎಫ್ಐಆರ್ ಮಾಡಿದ್ದು, ಸಿಐಡಿಗೆ ವಹಿಸಿದ್ದು, ಆಕೆ ಗಂಡನನ್ನು ಬಂಧಿಸಿದ್ದು ಬಿಜೆಪಿ ಸರ್ಕಾರ. ಪ್ರಕರಣದಲ್ಲಿ ಇರುವ ಎಲ್ಲರನ್ನೂ ಬಂಧಿಸುತ್ತಿರುವುದು ಬಿಜೆಪಿ ಸರ್ಕಾರ. ಬಂಧನವಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದಿದ್ದು ಬಿಜೆಪಿ. ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದು ಬಿಜೆಪಿ. ಹಿಂದೆ ಅವರದ್ದೇ ಮುಖ್ಯಮಂತ್ರಿ ಮೇಲೆ ವಾಚ್ ಪ್ರಕರಣ ಬಂದಿತ್ತು. ಕಳ್ಳತನದ ವಾಚು, ಅಕ್ರಮದ ವಾಚು ಸಿಎಂ ಕೈಗೆ ಹೇಗೆ ಬಂತು ಎಂದು ತನಿಖೆಯ ಆಗಲಿಲ್ಲ ಎಂದರು.
ರಿಡ್ಯೂ ಹೆಸರಲ್ಲಿ ಅರ್ಕಾವತಿ ಭೂಹರಗದಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದರು. 10-20 ಲಕ್ಷ, ಕೆಲವಡೆ 50 ಲಕ್ಷ ಪಡೆದರು, ತನ್ನ ಕುತ್ತಿಗೆಗೆ ಬರುತ್ತದೆ ಎಂದು ಹಾಗೇ ತಿಪ್ಪೆ ಸಾರಿಸಿದರು. ಕೆಂಪಣ್ಣ ಆಯೋಗ ಕೂಡ ಕಾಂಗ್ರೆಸ್ ಪಾತ್ರವನ್ನು ಎತ್ತಿ ಹಿಡಿದಿತ್ತು. ಪ್ರಶಂಸೆ ಹೇಳುವ ಮನಸ್ಥಿತಿ ಅವರಿಗಿಲ್ಲ, ಕಾಂಗ್ರೆಸ್‍ನಂತೆ ಬಿಜೆಪಿ ಅಲ್ಲ. ಈ ವಿಷಯದಲ್ಲಿ ಯಾರೇ, ಎಷ್ಟೆ ಪ್ರಭಾವಶಾಲಿಗಳಿದ್ದರೂ ಶಿಕ್ಷೆ ಆಗುತ್ತೆ, ಮುಚ್ಚಿಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.