Advertisement
ಅರವಿಂದ್ ಕೌಶಿಕ್ ನಿರ್ದೇಶನದ “ಹುಲಿರಾಯ’ ಚಿತ್ರದ ಮೂಲಕ ದಿವ್ಯಾ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಅಂದಹಾಗೆ ಇವರ ಪೂರ್ಣ ಹೆಸರು ದಿವ್ಯಾ ಉರುಡುಗ. ಶಿವಮೊಗ್ಗದ ಹುಡುಗಿ. ಚಿಕ್ಕಂದಿನಿಂದಲೇ ಸಿನಿಮಾ ಆಸಕ್ತಿ ಹೊಂದಿದ್ದ ದಿವ್ಯಾಗೆ ಈಗ ಅವಕಾಶ ಸಿಕ್ಕಿದೆ. “ಹುಲಿರಾಯ’ ಮೂಲಕ ಚಿತ್ರರಂಗದಲ್ಲಿ ನೆಲೆನಿಲ್ಲುವ ವಿಶ್ವಾಸ ಕೂಡಾ ದಿವ್ಯಾಗಿದೆ. ಭಾವನೆಗಳಿಗೆ ಬೆಲೆ ಕೊಡದೇ ಪಕ್ಕಾ ಪ್ರಾಕ್ಟೀಕಲ್ ಆಗಿ ಯೋಚಿಸುವ ಮತ್ತು ವರ್ತಿಸುವ ಡೋಂಟ್‌ಕೇರ್ ಹುಡುಗಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಕಾಡಿನಲ್ಲಿ ನಡೆದಿದ್ದು, ಅದೊಂದು ಥ್ರಿಲ್ಲಿಂಗ್ ಅನುಭವ ಎನ್ನುತ್ತಾರೆ ದಿವ್ಯಾ. ಧಾರಾವಾಹಿಯಿಂದ ಸಿನಿಮಾಕ್ಕೆ ಬಂದ ದಿವ್ಯಾಗೆ ಈಗಲೂ ಧಾರಾವಾಹಿಯಿಂದ ಸಾಕಷ್ಟು ಅವಕಾಶಗಳಿವೆ. ಆದರೆ ದಿವ್ಯಾಗೆ ಸಿನಿಮಾದಲ್ಲೇ ಮುಂದುವರಿ ಯಲು ಇಷ್ಟವಿದೆಯಂತೆ. ಅದಕ್ಕೆ ಸರಿಯಾಗಿ ಸಿನಿಮಾಗಳಿಂದಲೂ ದಿವ್ಯಾಗೆ ಆಫರ್ ಇದೆ. ದಿವ್ಯಾ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಲು ಅವರ ಮನೆಯವರ ಸಂಪೂರ್ಣ ಬೆಂಬಲವಿದೆ ಯಂತೆ. ಹಾಗಾಗಿಯೇ ದಿವ್ಯಾ ಕೂಡಾ ಒಳ್ಳೆಯ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಬೆಳೆ ಯುವ ಕನಸು ಕಾಣುತ್ತಿದ್ದಾರೆ. Advertisement
ಹುಲಿ ಮೇಲೆ ದಿವ್ಯಾ ಸವಾರಿ
03:45 AM Feb 10, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.