Advertisement
ದೇಶದ ಗಮನ ಸೆಳೆದಿದ್ದ ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ಜಾರಿಗೊಳಿಸಿದ ಮಾದರಿಯಲ್ಲಿಯೇ ತಲೆ ಕರೆಸಿಕೊಂಡು ಓಡಾಡುವ ಮೂಲಕ ತನಿಖೆಗೆ ಅಸಹಕಾರ ತೋರುತ್ತಿರುವ ಆರು ಜನ ಆರೋಪಿತರಿಗೆ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ಅದರಲ್ಲೂ ತನಿಖಾ ಹಂತದಲ್ಲಿ ವಾರೆಂಟ್ ಜಾರಿಯಾದರೆ ಆರೋಪಿತರು ಎಲ್ಲಿದ್ದರೂ ಬಂದು ಸಿಐಡಿಗೆ ಇಲ್ಲವೇ ನ್ಯಾಯಾಲಯದ ಹಾಜರಾಗಲೇಬೇಕಾಗುತ್ತದೆ. ಇಲ್ಲದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ. ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
Related Articles
Advertisement
ಮುಂಬೈ ಸ್ಫೋಟ ಪ್ರಕರಣ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅದನ್ನು ಮನ್ನಿಸಿ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
ವಾರದೊಳಗಡೆ ಆರೋಪಿತರು ಶರಣಾಗದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕಳೆದ 15 ದಿನಗಳಿಂದ ದಿವ್ಯಾ ಸೇರಿ ಆರು ಜನ ಆರೋಪಿಗಳು ಸಿಐಡಿಯಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.
ಸಿಐಡಿಯಿಂದ 6 ವಿಶೇಷ ತಂಡ ರಚನೆ: ದಿವ್ಯಾ ಹಾಗರಗಿ ಮತ್ತಿತರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯಾರಂಭಿಸಿದೆ. ಡಿಜಿಪಿ ಪಿ.ಎಸ್. ಸಂಧು ಸೂಚನೆಯಂತೆ ಬಂಧನಕ್ಕೆ ಆರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
ಸಿಐಡಿಯ ಆರು ತಂಡಗಳು ಕೆಲಸ ಮಾಡುತ್ತಿವೆ. ಶೋಧ ನಡೆಸುತ್ತಿದ್ದರೂ ಇದುವರೆಗೂ ದಿವ್ಯಾ ಎಲ್ಲಿ ಇದ್ದಾರೆ ಸುಳಿವು ಇದುವರೆಗೂ ಪತ್ತೆ ಆಗಿಲ್ಲ. ಇದು ಸಿಐಡಿಗೆ ತಲೆ ನೋವಾಗಿದೆ.