Advertisement

ಶೀಲ ಪರೀಕ್ಷೆ: ಪತ್ನಿಯರಿಗೆ ಬಹಿಷ್ಕಾರ! ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅನಾಗರಿಕ ಘಟನೆ

01:48 AM Apr 11, 2021 | Team Udayavani |

ಕೊಲ್ಹಾಪುರ: ಶೀಲ ಪರೀಕ್ಷೆಯಲ್ಲಿ ಅನು ತ್ತೀರ್ಣಳೆಂಬ ಕಾರಣಕ್ಕೆ ಮಹಿಳೆ ಹಾಗೂ ಆಕೆಯ ತಂಗಿಯನ್ನು ಅವರ ಗಂಡಂದಿರು ಮನೆಗಳಿಂದ ಆಚೆ ಹಾಕಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಪತಿಯ ಮನೆಯವರ ನಿರ್ಧಾರಗಳನ್ನು ಸ್ಥಳೀಯ ಜಾತಿಯ ಮುಖಂಡರೂ ಪಂಚಾಯತ್‌ ಸೇರಿ ಬೆಂಬಲಿಸಿದ್ದಾರೆ. ಅಲ್ಲದೆ ಗಂಡಂದಿರು ಮೌಖೀಕವಾಗಿ ನೀಡಿರುವ ವಿಚ್ಛೇಧನಕ್ಕೆ ಪಂಚಾಯತ್‌ ಒಪ್ಪಿಗೆಯನ್ನೂ ಸೂಚಿಸಿದೆ!

Advertisement

ಏನಿದು ಪ್ರಕರಣ?: 2020ರ ನವೆಂ ಬರ್‌ನಲ್ಲಿ ಕಂಬರ್ಜಾಟ್‌ ಸಮುದಾ  ಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಅಣ್ಣತಮ್ಮಂದಿ ರನ್ನು ವಿವಾಹವಾಗಿದ್ದರು. ಮೊದಲ ರಾತ್ರಿ  ಯಂದು ಆ ಸಮುದಾಯದ ಸಂಪ್ರ ದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷಿಸಲಾಗಿದೆ. ಈ ಪರೀಕ್ಷೆ ಯಲ್ಲಿ ಅಕ್ಕ ವಿಫ‌ಲಳಾಗಿದ್ದಾಳೆ. ಆದರೆ ತಂಗಿ ಉತ್ತೀರ್ಣಳಾಗಿದ್ದಾಳೆ ಎಂಬುದು ಪತಿಯ ಮನೆಯವರ ತಕರಾರು. ಹಾಗಾಗಿ ಅಕ್ಕನ ಮೇಲೆ ಶೀಲ ಕಳೆದು ಕೊಂಡ ಆರೋಪ ಹೊರಿಸಲಾಗಿದ್ದು, ಅದರ ಪರಿಣಾಮವಾಗಿ, “ಶೀಲಗೆಟ್ಟವಳ ತಂಗಿ’ ಎಂಬ ಹಣೆಪಟ್ಟಿ ಕಟ್ಟಿ ತಂಗಿ ಯನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ.
ಪ್ರಕರಣ ದಾಖಲು: ಘಟನೆ ತಿಳಿದ ಕೂಡಲೇ ಪೊಲೀಸರು ಹಳ್ಳಿಗೆ ಆಗಮಿಸಿ ಪ್ರಕರಣವನ್ನು ಅವಲೋಕಿಸಿದ್ದಾರೆ. ಇಂತಹ ಕುಕೃತ್ಯವೆಸಗಿದ ಸಹೋದರರು ಮತ್ತು ಅವರ ತಾಯಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಜಾತ್‌ ಪಂಚಾಯತ್‌ ಮುಖಂ ಡರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next