ಮುಂಬಯಿ: ಡಿವೈನ್ ಸ್ಪಾರ್ಕ್ ಇದರ ಮಹಾ ನಗರದ ಎಲ್ಲಾ ವಿವೇಕ ಜಾಗೃತ ಬಳಗದ ಆಶ್ರಯ ದಲ್ಲಿ ಬಾಂದ್ರಾ ಪೂರ್ವದ ನ್ಯೂ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸ ಲಾಗಿತ್ತು.
ಡಿವೈನ್ ಪಾರ್ಕ್ ಸಾಲಿಗ್ರಾಮದ ಗುರೂಜೀ ಡಾ| ಚಂದ್ರಶೇಖರ ಉಡುಪ ಅವರ ಉಪಸ್ಥಿತಿ ಹಾಗೂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ವಿಶಿಷ್ಟ ಸಾಮೂಹಿಕ ಕುಂಕುಮಾರ್ಚನೆಯ ವೈಶಿಷ್ಟé ಹಾಗೂ ಪ್ರಾಧಾನ್ಯತೆಯ ಬಗ್ಗೆ ಡಾ| ಚಂದ್ರಶೇಖರ್ ಗುರೂಜೀ ಅವರು ಮಾತನಾಡಿ, ನಮ್ಮೆಲ್ಲರ ರಕ್ತದ ಬಣ್ಣ ಕೆಂಪಾಗಿದ್ದು, ನಾನು, ನನ್ನದು ಹಾಗೂ ನನ್ನಿಂದ ಎಂಬೀ ಜನ್ಮ ಜನ್ಮಾಂತರದ ಅಹಂ ಭಾವದ ಕೊಳೆ ಸಹಿತವಾದ ಅಶುದ್ಧ ರಕ್ತವನ್ನು ಶ್ರದ್ಧೆ, ಭಕ್ತಿಯಿಂದ ಜಗನ್ಮಾತೆಯ ಪಾದ ತಳದಲ್ಲಿ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಹಿರಿಯ ಮನುಷ್ಯರ ಶರೀರದಲ್ಲಿ ಐದು ಲೀಟರ್ ರಕ್ತ ಇರುತ್ತದೆ. ಹಾಗೆಂದೇ ಕನಿಷ್ಠ ಐದು ಚಮಚದಷ್ಟಾದರೂ ರಕ್ತ ಬಣ್ಣದ ತಾಜಾ ಕುಂಕುಮವನ್ನು ಈ ಕುಂಕುಮಾರ್ಚನೆಯಲ್ಲಿ ಉಪಯೋಗಿಸಲಾಗುತ್ತದೆ ಎಂದು ನುಡಿದರು.
ಪ್ರಾರಂಭದಲ್ಲಿ ಶ್ರೀ ರಾಮರಕ್ಷಾ ಸ್ತೊÅàತ್ರ ಪಠ ಣದೊಂದಿಗೆ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭ ಗೊಂಡಿತು. ಜಗನ್ಮಾತೆಗೆ ಅಭಿಷೇಕ ಅಲಂಕಾರವನ್ನು ಮಾಡುತ್ತಿದ್ದಂತೆ ಡಾ| ಚಂದ್ರಶೇಖರ ಗುರೂಜಿ ಅವರು ಕಾರ್ಯಕ್ರಮದ ವೈಶಿಷ್ಟéದ ಬಗ್ಗೆ ವಿವರಿಸಿದರು.
ಕುಂಕುಮಾರ್ಚನೆ ಆದ ಬಳಿಕ ಮಹಾಮಂಗಳಾರತಿ ನಡೆಯಿತು. ಈ ವೈಶಿಷ್ಟÂಪೂರ್ಣ ಕುಂಕುಮಾರ್ಚನೆಯಲ್ಲಿ ಸಾವಿರಾರು ತುಳು-ಕನ್ನಡಿಗರು ಭಾಗವಹಿಸಿದ್ದು, ನಗರದ ಹಿರಿಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಕ್ತಾದಿಗಳು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಮಹಾದಾನಿಗಳನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಡಾಕ್ಟರ್‌ಜೀ ಅವರು ಪ್ರಸಾದವನ್ನಿತ್ತು ಆಶೀರ್ವದಿಸಿ ಶುಭಹಾರೈಸಿದರು. ಡಿವೈನ್ ಸ್ಪಾರ್ಕ್ ಮುಂಬಯಿ ಸೆಂಟ್ರಲ್ ಸಮಿತಿಯ ಪದಾಧಿಕಾರಿಗಳಾದ ಎಂ. ಟಿ. ಶೆಟ್ಟಿ, ಜಯರಾಮ ಶೆಟ್ಟಿ, ಎಂ. ಬಿ. ಸನಿಲ್, ಡಾ| ಪಿ. ಎಸ್. ರಾವ್, ವಿಶ್ವನಾಥ ತೋನ್ಸೆ ಅವರು ಡಾ| ಚಂದ್ರಶೇಖರ ಗುರೂಜೀ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಅಪರಾಹ್ನ 4 ರಿಂದ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಕುಮಾರ್ಚನೆಗೈದು ಮಹಾಮಂಗಳಾರತಿಯ ಆನಂತರ ಪ್ರಸಾದ ವಿತರಣೆ ನಡೆಯಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ