ಮುಂಬಯಿ: ಡಿವೈನ್ ಸ್ಪಾರ್ಕ್ ವಸಾಯಿ ಇದರ ವತಿಯಿಂದ ಆತ್ಮೋನ್ನತಿ ಶಿಬಿರವು ಮೇ 25 ರಂದು ಮೀರಾ-ಭಾಯಂದರ್ ಮಹಾನಗರ ಪಾಲಿಕಾ ಸಭಾಗೃಹದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬಳಗದ ಅಧ್ಯಕ್ಷ ಹೇಮಾ ಉಚ್ಚಿಲ್ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆತ್ಮಕ್ಕೆ ದೇಹದ ಬಂಧನದಂತೆಯೇ ಮನುಷ್ಯ ಜೀವನದಲ್ಲಿ ಮದುವೆಯೆ ಬಂಧನದ ಬೇರು ಎಂಬ ವಿಷಯವನ್ನು ಜಲಜಾಕ್ಷಿ ಕುಂಬಳೆ ಅವರು ವಿವರಿಸಿದರು.
ಡಿವೈನ್‌ಸ್ಪಾರ್ಕ್ ಡಿ-2 ಇದರ ಅಧಿಕಾರಿಯಾದ ದಿನೇಶ್ ಶೆಟ್ಟಿ ಅವರು ದೇವರು ಧರ್ಮ ಸಾಧನೆಯ ಬಗ್ಗೆ ವಿವರಿಸಿದರು.
ವಿಎಚ್ ವಿಭಾಗದ ಅಧಿಕಾರಿ ವತ್ಸಲಾ ಐಲ್ ಅವರು ದೇವರ ಕೃಪಾಋಣ ತೀರಿಸುವ ವಿವಿಧ ಮಜಲುಗಳನ್ನು ನಿಖರವಾಗಿ ವಿವರಿಸಿದರು. ವಿ-4 ಅಧಿಕಾರಿಯಾದ ಶಾಂಭಾವಿ ಭೇಂದ್ರೆ ಅವರು ಪ್ರಕೃತಿಯಿಂದ ನಾವು ಕಲಿಯಬೇಕಾದ ಪಾಠ, ಪ್ರಕೃತಿಯಲ್ಲಿ ದೇವರ ದಿವ್ಯಾನುಭವ ಆಗುವ ಬಗ್ಗೆ ಮಾಹಿತಿ ನೀಡಿದರು. ಸದ್ಭಕ್ತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಜಯಂತಿ ಉಚ್ಚಿಲ್ ಅವರು ವಂದಿಸಿದರು.