ಮುಂಬಯಿ: ಡಿವೈನ್ ಸ್ಪಾರ್ಕ್ ವಸಾಯಿ ಬಳಗದ ವತಿಯಿಂದ ಧಾರ್ಮಿಕ ಯಾತ್ರೆಯು ಮಾ. 29ರಂದು ನಡೆಯಿತು. ಗಣೇಶ್‌ಪುರಿ, ವಜ್ರೆàಶ್ವರಿ, ಪ್ರತಿ ಶಿರ್ಡಿ ಸಾಯಿಬಾಬಾ ಮಂದಿರಗಳ ದರ್ಶನಗೈದು ಬಳಗವು ದೇವರ ದರ್ಶನ ಪಡೆದು ಕೃತಾರ್ಥರಾದರು.
ಶ್ರೀ ಈಶ್ವರ ಧಾಮ ಟ್ರಸ್ಟ್ ಸಾಯಿಬಾಬಾ ಮಂದಿರ ಪ್ರತಿ ಶಿರ್ಡಿ ಅಕಲೋಬಿ ವಜ್ರೆàಶ್ವರಿ ಇವರ ಸಹಕಾರದಿಂದ ದೇವರ ದರ್ಶನ ಮತ್ತು ಸಾರಿಗೆ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸುಮಾರು 60 ಮಂದಿ ಸದಸ್ಯರ ತಂಡವು ಮಧ್ಯಾಹ್ನ 1ರಿಂದ ಬಸ್‌ಮೂಲಕ ಸಾಗಿತು. ಸದಸ್ಯರು ರಾಮರಕ್ಷಾ ಪಠಣದ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಆನಂತರ ಶಾಂತಿ ಮಂತ್ರ ಪಠಣೆಯೊಂದಿಗೆ ಅಪರಾಹ್ನ 4 ಗಂಟೆಗೆ ಗಣೇಶ್‌ಪುರಿಯನ್ನು ತಲುಪಿದ ತಂಡವು ಶಿವದೇವರು, ಶ್ರೀಕೃಷ್ಣ, ಗುರುವರ್ಯ ಸ್ವಾಮಿ ನಿತ್ಯಾನಂದರ ಭವ್ಯ ಮೂರ್ತಿಯ ದರ್ಶನಗೈದರು. ಆನಂತರ ವಜ್ರೆàಶ್ವರಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಕೊನೆಯಲ್ಲಿ ಶಿರ್ಡಿಗೆ ಭೇಟಿ ನೀಡಿದ ತಂಡವು ಅಲ್ಲಿ ಧ್ಯಾನದಲ್ಲಿ ಪಾಲ್ಗೊಂಡರು. ಮಹಿಳಾ ಸದಸ್ಯೆಯರೇ ಅಧಿಕವಾಗಿದ್ದ ತಂಡಕ್ಕೆ ವತ್ಸಲಾ ಐಲ್ ಇವರು ಶ್ರೀ ಗುರೂಜೀ ಅವರ ಸಂಸಾರ ಸುಗಮ ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಆನಂತರ ಸಾಯಿ ಬಾಬಾ ದೇವರ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ರಾತ್ರಿ 7.30ಕ್ಕೆ ಮಹಾಪ್ರಸಾದ ಅನ್ನಪ್ರಸಾದ ವನ್ನು ಸ್ವೀಕರಿಸಿದ ತಂಡವು ಮುಂಬಯಿಗೆ ಪ್ರಯಾಣ ಬೆಳೆಸಿತು. ಈ ವೇಳೆಯಲ್ಲಿ ರಕ್ಷಾಸ್ತೋತ್ರ ನಾಮಸ್ಮರಣೆ, ಮಂತ್ರೋಚ್ಚಾರಣೆ ಮಾಡಿದರು. ಹೇಮಾ ವಾಸುದೇವ ಉಚ್ಚಿಲ್ ಇವರ ಆಯೋಜನೆಯಲ್ಲಿ ಈ ಧಾರ್ಮಿಕ ಯಾತ್ರೆಯನ್ನು ಆಯೋಜಿಸಲಾಗಿತ್ತು.