Advertisement
ಹೆದ್ದಾರಿ ಇಲಾಖೆಯ ವಿನ್ಯಾಸದಂತೆ ತಿರುವಿನಲ್ಲಿ ಪ್ರತ್ಯೇಕ ಲೈನ್ ಇದ್ದು ಸಿಗ್ನಲ್ ನೀಡಿ ತಿರುಗಲು ಮುಕ್ಕ, ಪಾವಂಜೆ ಬಳಿ ಅಧಿಕೃತ ಅವಕಾಶವಿದೆ. ಆದರೆ ಬೈಕಂಪಾಡಿಯಿಂದ ಸುರತ್ಕಲ್‌ವರೆಗೆ ಇಂತಹ ವಿನ್ಯಾಸದ ಯಾವುದೇ ತಿರುವುಗಳಿಲ್ಲ. ಈ ಹಿಂದೆ ಹಲವು ಬಾರಿ ಸ್ಥಳೀಯರ ಒತ್ತಾಯಕ್ಕೆ ಮಣಿದು ಮುಚ್ಚಿಸಲಾಗಿತ್ತಾದರೂ ಬಳಿಕ ವಿನಾಯಿತಿ ನೀಡಲಾಗಿತ್ತು.
ಮುಕ್ಕ ಬಳಿಯ ಡಿವೈಡರ್ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಟೋಲ್ ಸೋರಿಕೆಯೂ ಆಗುತ್ತಿದೆ. ಇಲ್ಲಿನ ಮಾಹಿತಿ ಹೊಂದಿರುವವರು ಕಿರಿದಾದ ಪಡ್ರೆ ರಸ್ತೆಯ ಮೂಲಕ ಸಾಗುತ್ತಾರೆ. ಅಪಾಯಕಾರಿಯಾದ ಡಿವೈಡರ್ ಮತ್ತು ಕಿರಿದಾದ ಪಡ್ರೆ ರಸ್ತೆ ಸೇರಿ ಕೊಂಡ ಫಲವಾಗಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಬೀಚ್ ರಸ್ತೆಯೂ ಅಗಲ ಕಿರಿದಾಗಿದ್ದರೂ ದೊಡ್ಡ ವಾಹನಗಳೂ ಓಡಾಟ ನಡೆಸುತ್ತಿವೆ. ಧಾವಂತದ ಓಡಾಟಕ್ಕೆ ಇನ್ನಷ್ಟು ಸ್ಥಳೀಯರ ಪ್ರಾಣ ಹರಣವಾಗುವ ಮುನ್ನ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Related Articles
ಈಗಾಗಲೇ ಡಿವೈಡರ್ ತುಂಡರಿಸಿದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಇಲ್ಲಿ ಅಪಘಾತವಲಯವಾಗುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಜಿಲ್ಲಾಡಳಿತ ರಕ್ಷಣೆಯೊಂದಿಗೆ ಅನ ಧಿಕೃತ ಡಿವೈಡರ್ ಮುಚ್ಚಲು ಹೆದ್ದಾರಿ ಇಲಾಖೆ ಬದ್ಧವಾಗಿದೆ.
-ಶಿಶುಮೋಹನ್,
ಯೋಜನ ನಿರ್ದೇಶಕ, ಎನ್‌ಎಚ್‌ಎಐ
Advertisement