Advertisement

Politics: ಒಡೆದು ಆಳುವ ನೀತಿ ಕಾಂಗ್ರೆಸ್‌ನ ಧ್ಯೇಯ: ಪ್ರಧಾನಿ ವಾಗ್ಧಾಳಿ

12:06 AM Feb 12, 2024 | Team Udayavani |

ಭೋಪಾಲ್‌/ಟಂಕಾರ: “ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲು ಸನ್ನಿಹಿತ­ವಾಗಿದೆ ಎಂಬುದು ಕಾಂಗ್ರೆಸಿಗರ ಅರಿವಿಗೆ ಬಂದಿದೆ. ಹಾಗಾಗಿ ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ಕಟ್ಟಕಡೆಯ ಪ್ರಯತ್ನವಾಗಿ “ಒಡೆದಾಳುವ ನೀತಿ’ಯನ್ನು ತಮ್ಮ ಧ್ಯೇಯ ಮಾಡಿಕೊಂಡಿವೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ರವಿವಾರ ಮಧ್ಯಪ್ರದೇಶದಲ್ಲಿ 7,500 ಕೋಟಿ ರೂ.ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಝಬುವಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. ಕಾಂಗ್ರೆಸ್‌ ಬುಡಕಟ್ಟು ಜನಾಂಗದ ವಿರೋಧಿ­ಯಾಗಿತ್ತು. ಗ್ರಾಮೀಣ ಭಾಗದ ಜನರು, ರೈತರು, ಬಡವರು ಅವರ ನೆನಪಿಗೆ ಬರು­ವುದು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ. ನಾನು ಬುಡಕಟ್ಟು ಸಮುದಾಯಗಳು ಮತ್ತು ಬಡವರ ಪರ ಕೆಲಸ ಮಾಡುತ್ತಿದ್ದೇನೆ ಎನ್ನುವ ಕಾರಣಕ್ಕೇ ವಿಪಕ್ಷಗಳು ನನ್ನನ್ನು ದೂಷಿಸುತ್ತವೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಜನರನ್ನು ದೋಚುತ್ತಿತ್ತು. ಅಧಿಕಾರದಿಂದ ಕೆಳಗಿಳಿದ ಬಳಿಕ ಜನರನ್ನು ವಿಭಜಿಸುತ್ತಿದೆ. ಒಟ್ಟಾರೆ ಒಡೆದು ಆಳುವುದು ಕಾಂಗ್ರೆಸ್‌ನ ಧ್ಯೇಯ. ಆದರೆ, ಜನರಿಗೆ ಸತ್ಯ ತಿಳಿದಿದೆ. ಅವರು ಎಂದಿಗೂ ಕಾಂಗ್ರೆಸ್‌ನ ಉದ್ದೇಶ ನೆರವೇ­ರಲು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ: ಭಾರತೀಯ ಮೌಲ್ಯಗಳನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮೌಲ್ಯಾಧರಿತ ಶಿಕ್ಷಣವನ್ನು ವಿಸ್ತರಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಗುಜರಾತ್‌ನ ಮೋರ್ಬಿಯ ಟಂಕಾರದಲ್ಲಿ ಆರ್ಯ ಸಮಾಜದ ಸ್ಥಾಪಕ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next