Advertisement

ಮದುವೆ ಹೆಸರಲ್ಲಿ ಪಂಗನಾಮ!

06:05 AM Dec 29, 2017 | |

ರೋಹ್‌ತಕ್‌:  ಮದುವೆಯಾಗುವ ಹುಡುಗಿಯರ ಸಂಖ್ಯೆ ಅತಿ ಕಡಿಮೆ ಇರುವ ಹರ್ಯಾಣದಲ್ಲಿ ಮದುವೆ ಬ್ರೋಕರ್‌ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಉತ್ತಮ, ಸುರಧೂÅಪಿ ಕನ್ಯೆಯರೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿ, 
ಸುಮಾರು 35 ಯುವಕರಿಂದ 15 ಲಕ್ಷಕ್ಕೂ ಹೆಚ್ಚು ಹಣ ದೋಚಿ ಮಾಯವಾಗಿದ್ದಾಳೆ! ಈಕೆಯ ವಂಚನೆಯ ಜಾಲದಲ್ಲಿ ಸಿಕ್ಕಿಬಿದ್ದಿರುವ ಮೂ ವತ್ತೈದು ಯುವಕರು ತಲಾ 45 ಸಾವಿರ ರೂ. ಕೊಟ್ಟು ಪಂಗನಾಮ ಹಾಕಿಸಿಕೊಂಡಿದ್ದಾರೆ. 

Advertisement

ವಂಚಕಿಯನ್ನು ದಿಲ್ಲಿ ಮೂಲದ ಅನಿತಾ ಎಂದು ಗುರುತಿಸಲಾಗಿದ್ದು,ಖಾಖೋìಡಾ ಠಾಣಾ ಪೊಲೀಸರು ಆಕೆಯ ಹುಡುಕಾಟ ಆರಂಭಿಸಿದ್ದಾರೆ. 

ವಂಚಿಸಿದ್ದು ಹೇಗೆ?: ಹರ್ಯಾಣ ರೋಹrಕ್‌, ಜಿಂದ್‌, ಸೋನೆಪತ್‌ ಹಾಗೂ ಝಜ್ಜರ್‌ ಪ್ರಾಂತ್ಯಗಳ ಸುಮಾರು ಹಲವಾರು ಬ್ಯಾಚುಲರ್‌ಗಳನ್ನು ಹಾಗೂ ಅವರ ಮನೆಯವರನ್ನು ಮೂರು ತಿಂಗಳ ಹಿಂದೆ ಸಂಪರ್ಕಿಸಿದ್ದ ಅನಿತಾ, ಅವರೆಲ್ಲರಿಗೂ ಡಿ. 27ರಂದು ಸೋನೆಪತ್‌ನ ಹೊರವಲಯದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದ ವೇಳೆ, ಸುಂದರ ಕನ್ಯೆಯನ್ನು ತೋರಿಸಿ ಅವರೊಂದಿಗೆ ವಿವಾಹ ಮಾಡುವುದಾಗಿ ನಂಬಿಸಿ, ಹಣ ವಸೂಲಿ ಮಾಡಿದ್ದಳು. ಸಾಮೂಹಿಕ ವಿವಾಹದ ದಿನ ಆಕೆಯ ಮೋಸ ಬಯಲಾಯಿತು. ಅಷ್ಟರಲ್ಲಿ ಆಕೆ ನಾಪತ್ತೆಯಾಗಿದ್ದಳು. ಇದೀಗ, ಮೋಸ ಹೋದವರು ಆಕೆಯ ವಿರುದ್ಧ ಖಾಖೋìಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next