Advertisement

Karate Association: ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್‌: ಸ್ಪರ್ಧಾಕೂಟ

01:51 PM Sep 28, 2023 | Team Udayavani |

ಕಟಪಾಡಿ: ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್‌ ಇದರ ವತಿಯಿಂದ ರಾಜ್ಯಮಟ್ಟದ ಆಯ್ಕೆ ಸ್ಪರ್ಧಾಕೂಟವನ್ನು ಮಣಿಪಾಲ ವಿಶ್ವ ವಿದ್ಯಾನಿಲಯದ ಸಿಒಒ ಸಿಜಿ ಮುತ್ತಣ್ಣ ಉದ್ಘಾಟಿಸಿದರು.

Advertisement

ಈ ಸ್ಪರ್ಧಾಕೂಟದಲ್ಲಿ ಜಿಲ್ಲಾ ಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕರಾಟೆಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿ ಆಯ್ಕೆಯಾದ ಸಂಸ್ಥೆಯ ಅಂತಾರಾಷ್ಟ್ರೀಯ ಕರಾಟೆ ಪಟು ಭರತ್‌ ಬಾಬು ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು ಪರ್ಕಳ ವಿಘ್ನೇಶ್ವರ ಸಭಾಭವನದ ಅಧ್ಯಕ್ಷ ದಿಲೀಪ್‌ ರಾಜ್‌ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಪೊಲೀಸ್‌ ಠಾಣೆಯ ಎಎಸ್‌ಐ ವಿವೇಕಾ ನಂದ, ಸಂಸ್ಥೆಯ ಗೌರವಾಧ್ಯಕ್ಷರಾದ ಆನಂದ ದೇವಾಡಿಗ, ಉಪಾಧ್ಯಕ್ಷರಾದ ಡಾ| ನಿಶಾಂತ್‌ ಭಟ್‌, ರಾಜಶೇಖರ್‌ ಸುವರ್ಣ, ಕೋಶಾಧಿಕಾರಿ ಕೃಷ್ಣ ಕೋಟ್ಯಾನ್‌, ಉಮೇಶ್‌ ಕರ್ಕೇರ , ಸೀತಾರಾಮ ಪೂಜಾರಿ, ಸುಧೀರ್‌ ಪ್ರಭು, ಗುರುಪ್ರಸಾದ್‌, ರಾಮಚಂದ್ರ, ದೀಪಕ್‌, ಸೋಮನಾಥ ಸುವರ್ಣ, ರವಿಶಂಕರ್‌, ಜಗನ್ನಾಥ್‌, ಸತೀಶ್‌ ಮೂಡುಬೆಳ್ಳೆ, ಸೂರಜ್‌ ಪೂಜಾರಿ, ಅಜಿತ್‌, ಶ್ರೇಯಸ್‌ ಉಪ್ಪೂರು, ಅಮೃತ ಸದಾನಂದ, ಸ್ಪೂರ್ತಿ, ಗ್ರೀಸ್ಮೆಶ್ ಕುಂದರ್‌ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷ ಕೀರ್ತಿ ಜಿ.ಕೆ. ಸ್ವಾಗತಿಸಿದರು .ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಉದ್ಯಾವರ ವಂದಿಸಿದರು. ಕಾರ್ಯದರ್ಶಿ ಸಂತೋಷ್‌ ಸುವರ್ಣ ಉದ್ಯಾವರ ನಿರೂಪಿಸಿದರು.

ಇದನ್ನೂ ಓದಿ: Pandavapur: ಅಕ್ರಮ ದಾಖಲೆ ಸೃಷ್ಟಿ ಆರೋಪ: ಅಧಿಕಾರಿಗಳ ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next