ಚಿಕ್ಕಬಳ್ಳಾಪುರ: ಜಿಪಂ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ಪೀಕರಿಸಿದ ಬಳಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ದಿಡೀರ್ ಬೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ, ಶಾಲೆ ಮೂಲಭೂತ ಸೌಕರ್ಯ ಪರಿಶೀಲಿಸಿ ಗಮನ ಸೆಳೆಯುವ ಮೂಲಕ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶ್ರಮಿಸುತ್ತಿರುವ ಸಿಇಒ ಬಿ. ಫೌಜಿಯಾ ತರುನ್ನುಮ್ ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಶನಿವಾರ ಮದ್ಯಾಹ್ನ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಸುಮಾರು ಎರಡು ಗಂಟೆಗಳ ಕಾಲ ಶೈಕ್ಷಣಿಕ ಗುಣಮಟ್ಟ ಕಾಪಾಡುವ ಬಗ್ಗೆ ಪಾಠ ಮಾಡಿ ಗಮನ ಸೆಳೆದರು.
ಜಿಲ್ಲೆಯ ಶಾಲೆಗಳು ಮದ್ಯವಾರ್ಷಿಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ಸಂಧರ್ಭದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಸಾಕಷ್ಟು ಕಾಳಜಿ ವಹಿಸಿರುವ ಸಿಇಒ, ಮಕ್ಕಳಿಗೆ ಪಾಠ ಹೇಗೆ ಮಾಡಬೇಕು. ಮಕ್ಕಳ ಕಲಿಕಾ ಸಾಮರ್ಥ್ಯ ಹೇಗೆ ಗುರುತಿಸಬೇಕು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಹೇಗೆ ಕಲಿಕೆಯಲ್ಲಿ ಮುಖ್ಯ ವಾಹಿನಿಗೆ ತರಬೇಕು ಎಂಬುದರ ಬಗ್ಗೆ ಮುಖ್ಯ ಶಿಕ್ಷಕರಿಗೆ ಪಾಠ ಮಾಡಿದರು.
ಕಳೆದ ವರ್ಷ ಅಂದ್ರೆ 2017 ರಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯದಲ್ಲಿ ಕಡೆ ಸ್ಥಾನದಲ್ಲಿ ಇತ್ತು. ಆದರೆ 18-19 ರಲ್ಲಿ ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಅವರ ವಿಶೇಷ ಕಾಳಜಿಯಿಂದ 31 ನೇ ಸ್ಥಾನದಲ್ಲಿ ಇದ್ದ ಚಿಕ್ಕಬಳ್ಳಾಪುರ 20 ನೇ ಸ್ಥಾನಕ್ಕೆ ಬಂದಿತ್ತು. ಈ ವರ್ಷ ರಾಜ್ಯ ಕ್ರಮಾಂಕದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 10ರ ಒಳಗೆ ಸ್ಥಾನ ಪಡೆಯಬೇಕೆಂದು ನಿರ್ಧಾರಿಸಿ ಜಿಲ್ಲೆಯ ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ವಿಶೇಷ ಸಭೆ, ಕಾರ್ಯಾಗಾರ, ಚಿಂಥನ ಮಂಥನ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ.