ಮಹಾನಗರ: ದ.ಕ. ಜಿಲ್ಲಾ ಮರಾಠಿ ಸಂರಕ್ಷಣೆ ಸಮಿತಿ ವತಿಯಿಂದ ವನಮಹೋತ್ಸವ ಬಸ್ತಿ ಗಾರ್ಡನ್ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ವಹಿಸಿದ್ದರು.
ಮುಖ್ಯ ಅತಿಥಿ ಅಶೋಕ್ ನಾಯ್ಕ ಮಾತನಾಡಿ, ವಿದೇಶಗಳಲ್ಲಿ ಮರಗಿಡಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿ ಮರಗಿಡಗಳನ್ನು ರಕ್ಷಿಸುವುದು ತುಂಬಾ ಕಡಿಮೆ ಎಂದರು.
ಕಡಬ ಘಟಕದ ಅಧ್ಯಕ್ಷ ಕುಶಾಲಪ್ಪ ನಾಯ್ಕ ಅವರು ಮಕ್ಕಳಿಗೆ ಪರಿಸರದ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ತಿಳಿ ಹೇಳಿದರು.
ಮಂಗಳೂರು ಘಟಕದ ಅಧ್ಯಕ್ಷರಾದ ವೀಣಾಲತಾ ಮಾತನಾಡಿ, ನಗರಾಭಿವೃದ್ಧಿ ಹಾಗೂ ಕೈಗಾರಿಕೀಕರಣದಿಂದ ಪರಿಸರ ನಾಶವಾಗುತ್ತಿದೆ. ಕೆಲವು ಪ್ರಾಣಿ ಪಕ್ಷಿಗಳು ವಿನಾಶದ ಅಂಚಿನಲ್ಲಿವೆ ಎಂದರು.
ಮಂಗಳೂರು ಘಟಕದ ಉಪಾಧ್ಯಕ್ಷ ಕುಶಾಲಪ್ಪ ವಂದಿಸಿದರು. ಪದಾಧಿಕಾರಿಗಳಾದ ಬಾಲಕೃಷ್ಣ, ನಾರಾಯಣ, ಮಂಜುನಾಥ್, ಸುರೇಶ್, ಹರೀಶ್ ಮೊಟುಕಾನ ಮತ್ತು ಶಾಲಾ ಮಕ್ಕಳು ಹಾಗೂ ಸಿಬಂದಿ ಉಪಸ್ಥಿತರಿದ್ದರು.