Advertisement

ಜೂನ್‌ 2ನೇ ವಾರ ಜಿಲ್ಲಾ ಸಾಹಿತ್ಯ ಸಮ್ಮೇಳನ

02:23 PM May 03, 2019 | Suhan S |

ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣು ಗೋಗೇರಿ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಜೂನ್‌ 2ನೇ ವಾರದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

Advertisement

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಮಾತನಾಡಿ, ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಸಬೇಕು. ಅದಕ್ಕಾಗಿ ಸಮ್ಮೇಳನದ ಗೋಷ್ಠಿಗಳು, ಕಲಾವಿದರ ಆಯ್ಕೆ, ಕವಿಗಳ ಆಯ್ಕೆ, ಸನ್ಮಾನಿತರ ಆಯ್ಕೆ ಸೇರಿದಂತೆ ಎಲ್ಲ ಪ್ರಮುಖ ತೀರ್ಮಾನಗಳನ್ನು ಹಿರಿಯ ಸಾಹಿತಿಗಳನ್ನೊಳಗೊಂಡ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಪ್ರಸಕ್ತ ಸಾಲಿನ ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಜಿಲ್ಲೆಯ ಏಳು ತಾಲೂಕುಗಳ ಅಧ್ಯಕ್ಷರು ಮಾರ್ಚ್‌ ಕೊನೆಯ ವಾರದಲ್ಲಿ ನಡೆಸದೇ, ವರ್ಷದಾದ್ಯಂತ ಕ್ರಮವಾಗಿ ನಡೆಸಬೇಕು. ಇದರಿಂದ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳ ಕಂಪು ಹೆಚ್ಚುತ್ತದೆ ಎಂದು ಸಲಹೆ ನೀಡಿದರು.

ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ರೋಣ ತಾಲೂಕು ಸಾಹಿತ್ಯ ಭವನ ಉದ್ಘಾಟನೆ, ಲಕ್ಷ್ಮೇಶ್ವರ ಸಾಹಿತ್ಯ ಭವನದ ಭೂಮಿಪೂಜೆ ನೆರವೇರಿಸಲಾಗುತ್ತದೆ. ಜಿಲ್ಲೆಯಲ್ಲಿರುವ 62 ದತ್ತಿ ಉಪನ್ಯಾಸಗಳನ್ನು ಆಯಾ ತಾಲೂಕಿನ ಅಧ್ಯಕ್ಷರು ದತ್ತಿ ದಾನಿಗಳ ಅಪೇಕ್ಷೆಯಂತೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿಯ ಸದಸ್ಯರು ಚರ್ಚೆ ನಡೆಸಿದರು.

ಗೌರವ ಕಾರ್ಯದರ್ಶಿ ಬಾಹುಬಲಿ ಜೈನರ್‌, ಕೋಶಾಧ್ಯಕ್ಷ ಎಚ್.ಬಿ. ರಡ್ಡೇರ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಕಸಾಪ ಮಾಜಿ ಅಧ್ಯಕ್ಷ ಕೆ.ಬಿ. ತಳಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಎ.ವೈ. ನವಲಗುಂದ, ಎ.ಒ. ಪಾಟೀಲ, ಶಂಕರ ಹೂಗಾರ, ಅಂದಾನೆಪ್ಪ ವಿಭೂತಿ, ಐ.ಕೆ. ಕಮ್ಮಾರ, ಪಿ.ಎಸ್‌. ಕಾಶಪ್ಪನವರ, ಶ್ರೀಶೈಲ ಬೀರಕಬ್ಬಿ, ಬಸವರಾಜ ಸೂಳಿಭಾವಿ, ಡಿ.ಬಿ. ಗವಾನಿ, ಎಂ.ಬಿ. ಹೊಸಮನಿ, ತಾಲೂಕು ಘಟಕಗಳ ಅಧ್ಯಕ್ಷರಾದ ಐ.ಎ. ರೇವಡಿ, ಎಂ.ಎಂ. ಕಲಹಾಳ, ಕೆ.ಎ. ಹಿರೇಮಠ, ಎಂ.ಕೆ. ಲಮಾಣಿ, ರವಿ ಶಿಶ್ವಿ‌ನಹಳ್ಳಿ, ಜಯಶ್ರೀ ಹೊಸಮನಿ, ಜಯಶ್ರೀ ಶ್ರೀಗಿರಿ, ಎಸ್‌.ಬಿ. ಹೊಸೂರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next