Advertisement

ಧರ್ಮಸ್ಥಳ ಸಂಘದಿಂದ ಮಹಿಳಾ ಆರ್ಥಿಕ ಸಬಲೀಕರಣ

09:52 AM Jan 28, 2019 | |

ಗದಗ: ಸರಕಾರದ ಅನುದಾನವಿಲ್ಲದೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ, ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿರುವುದು ಅಭಿನಂದನಾರ್ಹ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆ ಹಾಗೂ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ವ್ಯವಸ್ಥಾಪನಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಹಾತಲಗೇರಿ ಸಮೀಪದ ಉರ್ದು ಸ್ಕೂಲ್‌ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಲ ಮರುಪಾವತಿಯಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಸಂಸ್ಥೆಗೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರ ರೈ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಚನೆಯಾಗಿರುವ ಸ್ವಸಹಾಯ ಸಂಘಗಳಲ್ಲಿ 35 ಲಕ್ಷ ಮಹಿಳಾ ಸದಸ್ಯರು ಇದ್ದಾರೆ. ಅವರಿಗೆ 8,700 ಕೋಟಿ ರೂ. ಸಲ ನೀಡಿದ್ದು, ಶೇ. 100 ರಷ್ಟು ಮರುಪಾವತಿಯಾಗಿದೆ. ಜಿಲ್ಲೆಯಲ್ಲಿ 8100 ಸ್ವಸಹಾಯ ಸಂಘಗಳು ಹೊಂದಿದ್ದು, 68 ಸಾವಿರ ಸದಸ್ಯರು ಇದ್ದಾರೆ. ಸುಮಾರು 10 ಸಾವಿರ ಮಹಿಳೆಯರು ಸ್ವ ಉದ್ಯೋಗವನ್ನು ಆರಂಭಿಸಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಸಹಾಯ, ಸಹಕಾರ ನೀಡಿದವರನ್ನು ಹಾಗೂ ಸೇವಾ ಕಾರ್ಯಕರ್ತರರಿಗೆ ಸನ್ಮಾನಿಸಲಾಯಿತು.

ಶಿರಹಟ್ಟಿಯ ಫಕ್ಕಿರೇಶ್ವರ ಸಂಸ್ಥಾನಮಠದ ಜ| ಫಕ್ಕೀರ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿವಲೀಲಾ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು.

Advertisement

ಅಕ್ಕನ ಬಳಗದ ಅಧ್ಯಕ್ಷೆ ಪ್ರೇಮಾ ಮೇಟಿ, ಜಗದೀಶ ಕರಡಿ, ಮಂಜುನಾಥ ಬಮ್ಮನಕಟ್ಟಿ, ರಾಜಣ್ಣ ಹೂಲಿ, ಜಯದೇವ ಭಟ್, ಮರಿಗೌಡ್ರ ಅಸೂಟಿ, ಚಲನಚಿತ್ರ ಹಿರಿಯ ನಟಿ ಪಂಕಜಾ ಇದ್ದರು.

ಗಮನ ಸೆಳೆದ ಡಾಗ್‌ ಶೋ
ಜಿಲ್ಲಾಮಟ್ಟದ ಮಹಿಳಾ ಸಮಾವೇಶದ ಭಾಗವಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಖರೀದಿ ಬರಾಟೆ ಜೋರಾಗಿತ್ತು. ಅದರೊಂದಿಗೆ ವಿವಿಧ ತಳಿಗಳ ಶ್ವಾನ ಪ್ರದರ್ಶನ ಮಹಿಳೆಯರು ಹಾಗೂ ಮಕ್ಕಳಿಗೆ ಮುದ ನೀಡಿತು. ಬಾಕ್ಸರ್‌ ಪಿಟ್ಬುಲ್‌, ಲ್ಯಾಬ್ರಾಡರ್‌, ಪಗ್‌, ಸೇಂಟ್ ಬರ್ಮಾಡ್‌ ಡಾಬರ್‌ಮನ್‌ ರ್ಯಾಟ್ ವೈಲರ್‌, ಮುಧೋಳ, ಡಿಗಲ್‌, ಗೋಲ್ಡ್‌ನ್‌ ರಿಟ್ರೇಲರ್‌, ಪಮೋಲಿನ್‌ ಸೇರಿದಂತೆ ಸುಮಾರು 20 ತಳಿಗಳ 85ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next