Advertisement

ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಮೊಬುಶೀರಾ ಪ್ರಥಮ

01:41 PM Dec 12, 2021 | Team Udayavani |

ಬೀದರ: ಗಣರಾಜ್ಯೋತ್ಸವ ನಿಮಿತ್ತ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದ ಭಾಗವಾಗಿ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ ಇಲ್ಲಿಯ ಬಿ.ವಿ. ಭೂಮರಡ್ಡಿ ಪದವಿ ಕಾಲೇಜಿನಲ್ಲಿ ನಡೆದ “ಸಬಕಾ ಸಾಥ್‌, ಸಬಕಾ ವಿಕಾಸ್‌, ಸಬಕಾ ವಿಶ್ವಾಸ್‌, ಸಬಕಾ ಪ್ರಯಾಸ್‌’ ಕುರಿತ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಗರದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿ ಮೊಬುಶೀರಾ ಫಾತಿಮಾ ಪ್ರಥಮ ಸ್ಥಾನ ಗಳಿಸಿದ್ದಾರೆ.

Advertisement

ಹುಮನಾಬಾದನ ಶ್ವೇತಾ ದ್ವಿತೀಯ ಹಾಗೂ ಚಿಟಗುಪ್ಪದ ಭಾಗ್ಯಶ್ರೀ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರಿಗೆ ಟ್ರೋಫಿ ಹಾಗೂ ಭಾಗವಹಿಸಿದ ಇತರೆ ಎಲ್ಲ 14 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಅವರು, ಗಣರಾಜ್ಯೋತ್ಸವ ಪ್ರಯುಕ್ತ 18ರಿಂದ 29 ವರ್ಷದೊಳಗಿನ ಯುವ ಜನರಿಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರ ಖಾತೆಗೆ ಬಹುಮಾನ ರೂಪದಲ್ಲಿ ಇಲಾಖೆಯಿಂದ ನೇರವಾಗಿ ಕ್ರಮವಾಗಿ 5,000 ರೂ., 2,000 ರೂ. ಹಾಗೂ 1,000 ರೂ. ಜಮಾ ಆಗಲಿದೆ ಎಂದು ತಿಳಿಸಿದರು.

ಕೌಶಲ, ನಾಯಕತ್ವ ಪ್ರದರ್ಶಿಸಲು ಯುವಕರಿಗೆ ಅವಕಾಶ ಒದಗಿಸುವುದು ಹಾಗೂ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಭಾಷಣ ಸ್ಪರ್ಧೆಯ ಉದ್ದೇಶವಾಗಿದೆ. ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಥಮ ಸ್ಥಾನ ಪಡೆದ ಮೊಬುಶೀರಾ ಫಾತಿಮಾ ರಾಜ್ಯ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ ಎಂದು ಹೇಳಿದರು.

ವಿಠ್ಠಲದಾಸ್‌ ಪ್ಯಾಗೆ, ಡಾ| ವಿದ್ಯಾ ಪಾಟೀಲ, ಟೀಂ ಯುವಾದ ವಿನಯ ಮಾಳಗೆ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಕಾಲೇಜು ಪ್ರಾಚಾರ್ಯ ವಿ.ಎಂ. ಚನಶೆಟ್ಟಿ, ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೀರ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ| ಪಿ. ವಿಠuಲರೆಡ್ಡಿ, ದೀಪಾ ರಾಗಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next