Advertisement

ಸಂಘಟನೆಗೆ ಕಾರ್ಯಕರ್ತರ ಶ್ರಮ ಅಗತ್ಯ: ಬಾಬುಶಾಸ್ತ 

12:14 PM Sep 24, 2018 | Team Udayavani |

ಉಳ್ಳಾಲ: ಸಂಘಟನೆ ಬಲಿಷ್ಠವಾಗಿ ಕಾರ್ಯಾಚರಿಸಬೇಕಾದರೆ ಅದರ ಹಿಂದೆ ಸಂಘ ಕಟ್ಟಿ ಬೆಳೆಸಿದ ಅನೇಕ ಹಿರಿಯರ, ಕಾರ್ಯಕರ್ತರ ತ್ಯಾಗ ಪರಿಶ್ರಮವಿದೆ. ಇವರಿಂದಲೇ ಈ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಶ್ರೀ ಧೂಮಾವತಿ ಬಂಟ ದೈವಸ್ಥಾನ ಭಂಡಾರ ಮನೆ ಬೆಳರಿಂಗೆ ಇದರ ಆಡಳಿತ ಮೊಕ್ತೇಸರ ಬಾಬುಶಾಸ್ತ ಕಿನ್ಯ ಅಭಿಪ್ರಾಯಪಟ್ಟರು.

Advertisement

ಮುನ್ನೂರು ಯುವಕ ಮಂಡಲ ಕುತ್ತಾರ ಪದವು ಇದರ ಸುವರ್ಣ ಮಹೋತ್ಸವದ ಅಂಗವಾಗಿ ದ.ಕ.ಜಿಲ್ಲಾ ಅಮೆಚೂರು ಬಾಡಿ ಬಿಲ್ಡಿಂಗ್‌ ಅಸೋಸಿಯೇಶನ್‌ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್‌ ಸ್ಪರ್ಧೆ ‘ಮಿಸ್ಟರ್‌ ಎಂವೈಎಂ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ಕುಗ್ರಾಮವಾಗಿದ್ದ ಈ ಪ್ರದೇಶದಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸುವ ಕಾರ್ಯ ಮಹತ್ವದ್ದು,ಇದರೊಂದಿಗೆ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು, ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಮಾಜಮುಖಿ  ಕಾರ್ಯ ಜಾತ್ಯತೀತ ಜನತಾದಳದ ಜಿಲ್ಲಾ ಕಾರ್ಯದರ್ಶಿ ಹೈದರ್‌ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿ, ಸಂಘಟನೆಗಳು ಸಮಾಜಮುಖಿ ಕಾರ್ಯಗಳನ್ನು ಅಳವಡಿಸಿದಾಗ ಜನರು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಮುನ್ನೂರು ಯುವಕ ಮಂಡಲ ಸಾಕ್ಷಿಯಾಗಿದ್ದು, ಹಿರಿಯ ಮಾರ್ಗದರ್ಶನದಲ್ಲಿ ಯುವ ಜನರು ಈ ಸಂಘಟನೆಯನ್ನು ಮುನ್ನಡೆಸು ತ್ತಿರುವುದು ಶ್ಲಾಘನೀಯ ಎಂದರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ದೇಹದಾರ್ಡ್ಯ ಪಟು ರೋಶನ ಫೆರಾವೋ, ಕುತ್ತಾರು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ದಿವ್ಯನ್‌ ತೇವುಲ, ಕುತ್ತಾರು ಶ್ರೀ ರಾಮ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚರಣ್‌ ಕುತ್ತಾರು, ರಾಜ್ಯಮಟ್ಟದ ಪವರ್‌ ಲಿಫ್ಟರ್‌ ಬಾಲಕೃಷ್ಣ ಕುಲಾಲ್‌, ದೇರಳಕಟ್ಟೆಯ ಯೇನಪೊಯ ವಿವಿಯ ವ್ಯಾಯಾಮ ತರಬೇತುದಾರ ರಾಮಕೃಷ್ಣ ಮುಖ್ಯ ಅತಿಥಿಗಳಾಗಿದ್ದರು. ಮುನ್ನೂರು ಯುವಕ ಮಂಡಲದಸುವರ್ಣ  ಮಹೋತ್ಸವ ಸಮಿತಿ ಅಧ್ಯಕ್ಷ ಶಶೀಂದ್ರ ಕುಕ್ಯಾನ್‌, ಕೋಶಾಧಿಕಾರಿ ಭೋಜ ಶೆಟ್ಟಿ, ಪ್ರ. ಕಾರ್ಯದರ್ಶಿ ಚಂದ್ರಹಾಸ್‌, ಜತೆ ಕಾರ್ಯದರ್ಶಿ ರೋಹಿತ್‌ ಕುತ್ತಾರು, ಕ್ರೀಡಾ ಕಾರ್ಯದರ್ಶಿಗಳಾದ ಗಣೇಶ್‌ ಪ್ರಸಾದ್‌, ಮೋಹನ್‌ದಾಸ್‌ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಐತ್ತಪ್ಪ ಸ್ವಾಗತಿಸಿದರು. ಗೌರವಾಧ್ಯಕ್ಷ ಹರೀಶ್‌ ಮುಂಡೋಳಿ ವಿವರ ನೀಡಿದರು. ಸಲಹೆಗಾರ ಕೃಷ್ಣಪ್ಪ ಸಾಲ್ಯಾನ್‌ ಪ್ರಸ್ತಾವನೆಗೈದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಹರ್‌ ನಿರ್ವಹಿಸಿದರು. ವಸಂತ ವಂದಿಸಿದರು.

ಕ್ರೀಡೆಯಲ್ಲಿ ತೊಡಗಿಸಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ದೇಹದಾರ್ಡ್ಯ ಪಟು ಭಾಸ್ಕರ ತೊಕ್ಕೊಟ್ಟು ಮಾತನಾಡಿ, ಆರೋಗ್ಯದೊಂದಿಗೆ ಸದೃಡ ಸಮಾಜ ನಿರ್ಮಾಣದಲ್ಲಿ ದೇಹ ದಾರ್ಡ್ಯ ಅತ್ಯಂತ ಅಗತ್ಯವಾಗಿದ್ದು, ಇಂದಿನ ಯುವಜನರು ಇಂತಹ ಸಂಘಟನೆಗಳ ಮೂಲಕ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next