Advertisement

ಕಾಂಗ್ರೆಸ್‌ ಮುಖಂಡರಿಗೆ ಜಿಲ್ಲಾವಾರು ಜವಾಬ್ದಾರಿ

01:02 AM May 30, 2022 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಿಗೆ ಜಿಲ್ಲಾ ಜವಾಬ್ದಾರಿ ನೀಡಿದೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ವಿವಿಧ ಜಿಲ್ಲೆಗಳ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ್ದಾರೆ. ಜತೆಗೆ ಸಂಪೂರ್ಣ ಸಮಯವನ್ನು ಕ್ಷೇತ್ರಗಳಿಗೆ ಮೀಸಲಿಟ್ಟು ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಸೂಚಿಸಿದ್ದಾರೆ.

ಯಾರಿಗೆ, ಯಾವ ಜಿಲ್ಲೆ ಜವಾಬ್ದಾರಿ?
ಮಂಜುನಾಥ್‌ ಭಂಡಾರಿ (ಬೆಂಗಳೂರು ಉತ್ತರ), ಬಿ.ಎನ್‌. ಚಂದ್ರಪ್ಪ (ಬೆಂಗಳೂರು ಸೆಂಟ್ರಲ್‌), ಡಾ| ಬಿ.ಎಲ್‌. ಶಂಕರ್‌ (ಬೆಂಗಳೂರು ದಕ್ಷಿಣ), ಜಿ. ಪದ್ಮಾವತಿ (ಬೆಂಗಳೂರು ಗ್ರಾಮೀಣ), ನರೇಂದ್ರ ಸ್ವಾಮಿ (ರಾಮನಗರ/ ಬೆಂಗಳೂರು ಗ್ರಾಮಾಂತರ -ಲೋಕಸಭಾ ಕ್ಷೇತ್ರ), ಕೆ.ಎನ್‌. ರಾಜಣ್ಣ (ಚಿತ್ರದುರ್ಗ ಲೋಕಸಭಾಕ್ಷೇತ್ರ), ಎಂ.ಸಿ. ವೇಣುಗೋಪಾಲ್‌ (ದಾವಣಗೆರೆ ಲೋಕಸಭಾಕ್ಷೇತ್ರ), ಎಚ್‌.ಎಂ. ರೇವಣ್ಣ (ಶಿವಮೊಗ್ಗ), ಪಿ.ಆರ್‌. ರಮೇಶ್‌ (ತುಮಕೂರು ಲೋಕಸಭಾಕ್ಷೇತ್ರ), ವಿ.ಎಸ್‌. ಉಗ್ರಪ್ಪ (ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರ), ಎಂ.ಆರ್‌. ಸೀತಾರಾಂ (ಕೋಲಾರ), ಮಲ್ಲಿಕಾರ್ಜುನ ನಾಗಪ್ಪ (ಬಾಗಲಕೋಟೆ), ಆರ್‌. ಬಿ. ತಿಮ್ಮಾಪುರ್‌ (ಬೆಳಗಾವಿ ನಗರ), ವಿನಯ್‌ ಕುಲಕರ್ಣಿ (ಬೆಳಗಾವಿ ಗ್ರಾಮಾಂತರ).

ಪಿ.ಎಂ. ಅಶೋಕ್‌ (ಚಿಕ್ಕೋಡಿ), ನಸೀರ್‌ ಹುಸೇನ್‌ (ಬಿಜಾಪುರ), ಡಿ.ಆರ್‌. ಪಾಟೀಲ್‌ (ಧಾರವಾಡ ಗ್ರಾಮೀಣ), ಹಸನ್‌ ಸಾಬ್‌ ದೋತಿಹಾಳ್‌ (ಗದಗ್‌), ಶಿವರಾಮೇಗೌಡ (ಹಾವೇರಿ), ಪಿ.ವಿ. ಮೋಹನ್‌ (ಹುಬ್ಬಳಿ ನಗರ), ಐವನ್‌ ಡಿ’ಸೋಜಾ (ಉತ್ತರ ಕನ್ನಡ), ಬಸವರಾಜ ರಾಯರೆಡ್ಡಿ (ಗುಲ್ಬರ್ಗ), ಶರಣಪ್ಪ ಮತ್ತೂರ್‌ (ಯಾದಗಿರ್‌), ಶರಣ ಪ್ರಕಾಶ ಪಾಟೀಲ್‌ (ಬೀದರ್‌), ಎಚ್‌. ಆಂಜನೇಯ (ರಾಯಚೂರು), ಸಂತೋಷ ಲಾಡ್‌ (ಕೊಪ್ಪಳ), ಡಾ| ಎಲ್‌. ಹನುಮಂತಯ್ಯ (ಬಳ್ಳಾರಿ ನಗರ ಮತ್ತು ಗ್ರಾಮೀಣ).

ಜಿ.ಸಿ. ಚಂದ್ರಶೇಖರ್‌ (ಮಂಡ್ಯ), ಮಧು ಬಂಗಾರಪ್ಪ (ದಕ್ಷಿಣ ಕನ್ನಡ), ವಿನಯ ಕುಮಾರ್‌ ಸೊರಕೆ (ಕೊಡಗು), ಎಸ್‌.ಇ. ಸುದರ್ಶನ್‌ (ಮೈಸೂರು ನಗರ), ಸೂರಜ್‌ ಹೆಗ್ಡೆ (ಮೈಸೂರು ಗ್ರಾಮೀಣ), ಚೆಲುವರಾಯ ಸ್ವಾಮಿ (ಚಾಮರಾಜನಗರ), ಅಭಯಚಂದ್ರ ಜೈನ್‌ (ಉಡುಪಿ), ಬಿ. ರಮಾನಾಥ್‌ ರೈ (ಚಿಕ್ಕಮಗಳೂರು), ಡಿ.ಕೆ. ಸುರೇಶ್‌ (ಹಾಸನ).

Advertisement

 

Advertisement

Udayavani is now on Telegram. Click here to join our channel and stay updated with the latest news.

Next