Advertisement
ಶಿರೂರದಲ್ಲಿ ರವಿವಾರ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಡಸಿನ ಪ್ರಪಂಚವೆಂದರೆ ಅದುಹೊರಲೋಕ ಮತ್ತು ಪರಲೋಕ. ಇದರ ಸಾಧನೆಗಾಗಿ ಗಂಡಸು ಲೌಕಿಕ-ಅಲೌಕಿಕ ಜ್ಞಾನ ಸಂಪತ್ತನೆಲ್ಲ ಬಳಸಿಕೊಳ್ಳಬಹುದು. ಆದರೆ ಹೆಣ್ಣಿಗೆ ಮಾತ್ರ ಹೊರಲೋಕವೆಂಬುದೆ ಇಲ್ಲ. ಈ ಹೊರಲೋಕದ ಜ್ಞಾನಕ್ಕಾಗಿ ಹೆಣ್ಣು-ಗಂಡೆಂಬ ಭೇದ ಮಾಡಿದ್ದನ್ನು ಪ್ರಶ್ನಿಸುವ ಪ್ರಬುದ್ಧತೆ ಇರಲಿಲ್ಲ. ಜ್ಞಾನ ಮಾರ್ಗವಿಲ್ಲದೆ ಆತ್ಮ-ಪರಮಾತ್ಮನನ್ನು ಅರಿಯುವುದಾದರೂ ಹೇಗೆ? ಇಂದಿಗೂ ಅಕ್ಷರ, ಅರಿವು, ಜ್ಞಾನದ ಸಾಧನಗಳನ್ನೆಲ್ಲ ಪುರೋಹಿತಶಾಹಿ ಮತ್ತು ನವ ಬಂಡವಾಳ ಶಾಹಿಗಳು ತಮ್ಮ ಕೈ ತಪ್ಪಿ ಹೋಗದ ಹಾಗೆ ಕಾಯಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ಮೆಚ್ಚಿಸಲು ಪುಂಗಿ ಊದುತ್ತಾರೆ: ಕರ್ನಾಟಕದಲ್ಲಿಕನ್ನಡವೇ ಸಾರ್ವಭೌಮ ಭಾಷೆ. ಆದರೆ ಆಗಾಗ ದೆಹಲಿಯ ಗದ್ದುಗೆಯ ಮೇಲಿರುವ ವ್ಯಕ್ತಿಗಳನ್ನುಮೆಚ್ಚಿಸಲು ನಮ್ಮ ರಾಜಕಾರಣಿಗಳು, ಹಿಂದಿರಾಷ್ಟ್ರ ಭಾಷೆಯೆಂದು ಪುಂಗಿ ಊದುವುದನ್ನುಕೇಳುತ್ತಿರುತ್ತೇವೆ. ಹಿಂದಿ ಎನ್ನುವ ಭಾಷೆಯು ಸಹರಾಜ್ಯಭಾಷೆ. ಹೀಗಾಗಿ ಒಂದು ರಾಜ್ಯ ಭಾಷೆ ಇನ್ನೊಂದು ರಾಜ್ಯ ಭಾಷೆಯ ಮೇಲೆ ಸವಾರಿಮಾಡುವುದು ಸಂವಿಧಾನ ವಿರೋಧಿ ನಡೆ. ಹೀಗಾಗಿ ಕನ್ನಡ ದೇಶದ, ರಾಜ್ಯದ, ಪ್ರಜಾಪ್ರತಿನಿಧಿಗಳು ಮೊದಲು ಕನ್ನಡ, ದೇಶ ಭಾಷೆಯಲ್ಲಿಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುವಷ್ಟುವಿವೇಕವಂತರಾಗಬೇಕು ಎಂದು ಹೇಳಿದರು.
ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಎಂದು ಹೇಳಿ ಮಹಿಳೆ ಕಪಾಳಕ್ಕೆ ಹೊಡೆಯುತ್ತಿರುವುದನ್ನು ಮರೆತಿರುತ್ತೇವೆ.12ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆಸರಿದೊರೆಯಾದ ಮಹಿಳೆಯರು ಆಧುನಿಕಕಾಲದಲ್ಲಿ ಕಾಣೆಯಾಗಿರುವುದಕ್ಕೆ ಕಾರಣಗಳೇನು? ಮಹಿಳೆಯರನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳುತ್ತಿರುವ ಹಳೆಯ ಕೈಗಳೊಂದಿಗೆ ಜಾಗತಿಕ ಕೈಗಳು ಸೇರಿಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶೋಷಣೆಗೆ ಒಳಪಡಿಸಿದವರು ಯಾರು: ಶೂದ್ರಸಮುದಾಯ ಮತ್ತು ಮಹಿಳೆಯರನ್ನು ಶತಶತಮಾನಗಳಿಂದ ಶೋಷಣೆಗೆ ಒಳಪಡಿಸಿದವರು ಯಾರು ಎಂಬುದನ್ನು ನಮ್ಮ ಜನಪದ ಮಹಿಳೆಕರಾರುವಕ್ಕಾಗಿ ಹೇಳಿರುವಳು. ಪಂಚಾಂಗವೆಂಬುದು ಮೋಸಗಾರರು ಸೃಷ್ಟಿಸಿದ ಬಹುದೊಡ್ಡ ಸಂಚು. ಈ ಸಂಚಿಗೆ ಬಲಿಯಾಗದ ಹಾಗೆ ಸಮಾಜವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಹುಡುಗರ ಕಣ್ಣಲ್ಲಿ ಬಾದಾಮಿ ಹುಡುಗಿಯರು! :
ನನ್ನ ತಾಯಿಯ ಊರು ಬಾದಾಮಿ ತಾಲೂಕಿನ ಹಂಗರಗಿ. ಬಾದಾಮಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಹೀಗಾಗಿ ನಾವು 12 ಜನ ಹುಡುಗಿಯರು ಬಾದಾಮಿ, ಹೊಳೆಆಲೂರಿನ ಹಲವುಹುಡುಗಿಯರು ಕಾಲೇಜು ಶಿಕ್ಷಣಕ್ಕೆ ಬಾಗಲಕೋಟೆಯ ಬಸವೇಶ್ವರ ಕಾಲೇಜಿಗೆ ಬರುತ್ತಿದ್ದೇವು. ಅದಕ್ಕೆ ಹುಬ್ಬಳ್ಳಿ-ಸೊಲ್ಲಾಪುರ ರೈಲಿನಲ್ಲಿ ಬಾಗಲಕೋಟೆಗೆ ಬಂತು, ಕಾಲೇಜು ಆವರಣದ ಹುಡುಗರವಸತಿ ನಿಲಯದ ಎದುರು ಹಾದು ಹೋಗುತ್ತಿದ್ದೇವು. ಆಗ ಹಾಸ್ಟೇಲ್ ಹುಡುಗರು ನಮ್ಮನ್ನುಬಾದಾಮಿ ಗಾಡಿ ಬಂತು ನೋಡ್ರಿ ಅಂತ ಕರೆಯುತ್ತಿದ್ದರು. ನಮ್ಮಲ್ಲಿ 12 ಜನ ಹುಡುಗಿಯರಲ್ಲಿಒಬ್ಬರು ಕಾಲೇಜಿಗೆ ಬರದಿದ್ದರೂ ಯಾಕ್ ಬಾದಾಮಿ ಟ್ರೇನಿನ ಒಂದ ಡಬ್ಬಿ ಕಾಣವಲ್ಲದು ನೋಡ ಎಂದು ನಮ್ಮ ಕಿವಿಗೆ ಕಾಣುವ ಹಾಗೆ ರೇಗಿಸುತ್ತಿದ್ದರು ಎಂದು ಡಾ| ಮಲ್ಲಿಕಾ ಘಂಟಿ ಹೇಳಿದರು.