Advertisement
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸಂಜೆ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಕನ್ನಡ ಅತ್ಯಂತ ಅರ್ಥಪೂರ್ಣವಾದ ಭಾಷೆ. ಕನ್ನಡವೇ ಸಂಸ್ಕೃತಿ, ಸಾಹಿತ್ಯ, ಕನ್ನಡವೇ ನಾಡು, ಕನ್ನಡವೇ ನುಡಿ, ಕನ್ನಡವೇ ಸರ್ವಸ್ವ ಆಗಬೇಕು. ಕನ್ನಡ ಎಂಬುದುಮೂರಕ್ಷರಗಳ ಪದಪುಂಜವಯ್ಯ, ಕನ್ನಡ ಕನ್ನಡಾಂಬೆ ಕೀರ್ತಿ ಪ್ರತೀಕ. ಕನ್ನಡತನ ನಮ್ಮದಾಗಬೇಕು. ಕನ್ನಡ ಭಾಷೆ, ನಾಡುಕಟ್ಟುವ ಕೆಲಸಗಳು ಮತ್ತಷ್ಟು ಗಟ್ಟಿಯಾಗಬೇಕು ಎಂದರು.
Related Articles
Advertisement
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮನುಷ್ಯ ಮಾನಸಿಕವಾಗಿಸದೃಢರಾಗಿರುತ್ತಿದ್ದ. ಕೃಷಿ ಹಾಗೂ ಕಾಯಕ ಚಟುವಟಿಕೆಗಳ ದೈಹಿಕವಾಗಿ ಆರೋಗ್ಯವಂತರಾಗಿರುತ್ತಿದ್ದರು. ಆದರೆ, ಅಂತಹಆಹಾರ ಮತ್ತು ಚಟಿವಟಿಕೆಗಳಿಲ್ಲದೇ ನವ ಯುವಕರಲ್ಲಿ ಸಕ್ಕರೆಕಾಯಿಲೆ, ರಕ್ತದೊತ್ತಡ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಎಚ್ಚರಿಸಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾ ಧಿಪತಿ ಕಲ್ಲಯ್ಯಜ್ಜನವರು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ|ಶರಣು ಗೋಗೇರಿ, ಎ.ಓ. ಪಾಟೀಲ, ಪ್ರಕಾಶ ಮಂಗಳೂರು, ಅಶೋಕ ಹಾದಿ, ಡಾ| ಜಿ.ಎಸ್. ಯತ್ನಟ್ಟಿ, ಅಶೋಕ ನವಲಗುಂದ ಉಪಸ್ಥಿತರಿದ್ದರು.
ಸಮ್ಮೇಳನದ ನಿರ್ಣಯಗಳು :
- ಜಿಲ್ಲೆಯ ಎಲ್ಲ ಜನವಸತಿ ಇತರೆ ಪ್ರದೇಶಗಳಲ್ಲಿ ಅಂಗಡಿಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಬರೆಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
- ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
- ಜಿಲ್ಲೆಯ ಜೀವನಾಡಿಯಾದ ಮಹದಾಯಿ ನದಿ ನೀರಿನ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು.
- ಜಿಲ್ಲೆಯ ದಿಗ್ಗಜ ಸಾಹಿತಿಗಳಾದ ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ ಸ್ಮರಣಾರ್ಥ ಪ್ರತಿಷ್ಠಾನಗಳ ರಚನೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು.
- ಜಿಲ್ಲೆಯ ಹೆಸರಾಂತ ಶಿಲ್ಪಕಲೆಯುಳ್ಳ ದೇವಾಲಯಗಳು, ನಿಸರ್ಗ ತಾಣವಾದ ಕಪ್ಪತಗುಡ್ಡ, ಗಜೇಂದ್ರ ಗಡ ಕೋಟೆ, ನರಗುಂದ ಗುಡ್ಡ, ಶ್ರೀಮಂತಗಡಕೋಟೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.