ಸೂರ್ಯಪ್ರಕಾಶ್ ಬಿ.ವಿ
ರಾಮನಗರ: ರಾಮನಗರ ಜಿಲ್ಲೆ ಬೆಂಗಳೂರು ನಗರದ ಮಗ್ಗಲಲ್ಲಿರುವುದೇ ಶಾಪವಾಗಿ ಪರಿಣಮಿ ಸಿದೆ! ಬೆಂಗಳೂರುನಗರ ತ್ಯಾಜ್ಯದಿಂದ ಜಿಲ್ಲೆಯ ಗಡಿ ಭಾಗಗಳು ಕಲುಷಿತಗೊಂಡಿವೆ. ಇದೀಗ ಬೆಂಗ ಳೂರು ನಗರ ವಾಸಿಗಳಿಂದಾಗಿ ಜಿಲ್ಲೆಯ ಜನರು ಕೋವಿಡ್ ಲಸಿಕೆ ಮತ್ತು ಚಿಕಿತ್ಸೆ ಯಿಂದಲೂ ವಂಚಿತರಾಗಿದ್ದಾರೆ. ಜಿಲ್ಲಾ ಕೇಂದ್ರ ರಾಮನಗರದ ಜಿಲ್ಲಾಸ್ಪತ್ರೆ, ರಾಯರ ದೊಡ್ಡಿ ಮತ್ತು ಮಹೆ ಬೂಬನಗರ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳು ಸ್ಥಾಪನೆಯಾಗಿವೆ. ಆದರೆ ನಗರ, ಪಟ್ಟಣ ಕೇಂದ್ರಗಳಲ್ಲಿ ದಿನ ನಿತ್ಯ ಬೆಂಗಳೂರು ನಗರದವರ ಕಾರುಬಾರು ಅಧಿಕ!
ಕೋವಿಡ್ ಲಸಿಕೆಯನ್ನು ನಾಗರಿಕರು ಯಾವ ಊರಿನಲ್ಲಾದರು ಪಡೆಯಬಹುದು ಎಂಬ ನಿಯಮ ಸರ್ಕಾರ ಜಾರಿ ಮಾಡಿದೆ. ಈ ನಿಯಮವೇ ಈಗ ಜಿಲ್ಲೆಯ ಜನರಿಗೆ ಕುತ್ತಾಗಿ ಪರಿಣಮಿಸಿದೆ. ರಾಮ ನಗರ, ಬಿಡದಿ, ಮಾಗಡಿ, ಕನಕಪುರಗಳಲ್ಲಿ ಬೆಂಗಳೂರು ನಗರದವರೇ ಹೆಚ್ಚಾಗಿ ಕೋವಿಡ್ ಲಸಿಕೆ ಪಡೆ ಯುತ್ತಿದ್ದಾರೆ. 18 ರಿಂದ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಸರ್ಕಾರ ಅವಕಾಶ ಕೊಟ್ಟ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಲಸಿಕೆ ಪಡೆಯಲು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊ ಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಲಸಿಕೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅಲ್ಲಿನ ನಾಗರಿಕರು ಹತ್ತಿರದ ರಾಮನಗರ ಜಿಲ್ಲೆಯ ಲಸಿಕಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಬಹುತೇಕ ನಾಗರಿಕರಿಗೆ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳುವ ತಂತ್ರಜ್ಞಾನದ ಅರಿವಿಲ್ಲ. ಈ ಅರಿ ವಿನ ಕೊರತೆಯ ಲಾಭವನ್ನು ಸಾಫ್ಟ್ವೇರ್ ನಗರ ಬೆಂಗಳೂರು ನಗರದ ನಾಗರಿಕರೇ ಕಬಳಿಸಿಕೊ ಳ್ಳುತ್ತಿದ್ದಾರೆ. ಇರುವ ಎಲ್ಲಾ ಸ್ಲಾಟ್‌ಗಳು ತುಂಬಿ ಹೋಗಿವೆ. ಕೋವಿಡ್ ಕರ್ಫ್ಯೂ ಜಾರಿಯಲ್ಲಿದೆ, ಆದರೂ ವಾಹನ ಸಂಚಾರಕ್ಕೆ ಅವಕಾಶವಿರುವುದರಿಂದ ರಾಜ್ಯ ರಾಜಧಾನಿಯ ನಾಗರಿಕರು ಜಿಲ್ಲೆಯ ನಗರಗಳಿಗೆ ದಾಂಗುಡಿ ಇಡುತ್ತಿದ್ದಾರೆ.
ಸ್ಥಳೀಯರಿಗೆ ಗೇಟ್ ಪಾಸ್!: ಇತ್ತ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು ಎಂಬ ಅರಿ ವಿರದ ಸ್ಥಳೀಯ ನಾಗರಿಕರು ತಮ್ಮ ಆಧಾರ್ ಕಾರ್ಡು ಹಿಡಿದು ಜಿಲ್ಲಾಸ್ಪತ್ರೆಯ ಆವರಣದಲ್ಲಿ ರುವ ಲಸಿಕಾ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯ ವೇಳೆಗೆ ಆಗಮಿಸಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೀಗೆ ಸಾಲಿನಲ್ಲಿ ನಿಂತವರಿಗೆ ಇಲ್ಲಿನ ಸಿಬ್ಬಂದಿ ಟೋಕನ್ ಸಹ ಕೊಡುತಿದ್ದಾ ರೆ. ಗಂಟೆ ಗಟ್ಟಲೆ ಕಾದ ನಂತರ ಲಸಿಕಾ ಕೇಂದ್ರ ದೊಳಗೆ ಹೋದಾಗ, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಬನ್ನಿ ಎಂದು ಸಾಗಾಕುತ್ತಿರುವುದು ಸಾಮಾನ್ಯವಾಗಿದೆ. ಟೋಕನ್ ಕೊಡುವ ಮುನ್ನ ಹೆಸರು ನೋಂದಾ ಯಿಸಿಕೊಂಡಿದ್ದೀರ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಿಲ್ಲ. ಆನ್‌ಲೈನ್‌ನಲ್ಲಿ ನೋಂದಾಯಿಸಿ ಕೊಂಡಿದ್ದರೆ ಮಾತ್ರ ಲಸಿಕೆ ಎಂದು ಕನ್ನಡದಲ್ಲಿ ಇಲ್ಲೊಂದು ಬೋರ್ಡು ಇಲ್ಲ. ಇರುವ ಒಂದೆ ರೆಡು ಸೂಚನೆಗಳು ಇಂಗ್ಲಿಷಿನಲ್ಲಿವೆ.