Advertisement

ಸಂಸದರಿಂದ ಜಿಲ್ಲಾಸ್ಪತ್ರೆ ಪರಿಶೀಲನೆ

12:17 PM Oct 07, 2019 | Team Udayavani |

ಕಲಬುರಗಿ: ಡಯಾಲಿಸಿಸ್‌ ಘಟಕ ಬಂದ್‌ ಆಗಿ ಒಬ್ಬ ಯುವಕ ಮೃತಪಟ್ಟ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಎಲ್ಲೆಂದರಲ್ಲಿ ಅವ್ಯವಸ್ಥೆ, ಅಸ್ವತ್ಛತೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಡಾ| ಉಮೇಶ ಜಾಧವ, ಆಸ್ಪತ್ರೆ ವ್ಯವಸ್ಥೆ ಸುಧಾರಣೆ ಆಗುವ ವರೆಗೂ ಭೇಟಿ ನೀಡುತ್ತೇನೆ ಎಂದು ಹೇಳಿರುವಂತೆ ರವಿವಾರ ಮೂರನೇ ಬಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಾರ್ಡ್‌, ಮಹಿಳಾ ವಾರ್ಡ್‌ಗಳನ್ನು ಸುತ್ತಾಡಿದ ಸಂಸದರು, ವೈದ್ಯಕೀಯ ಸೇವೆ ಹಾಗೂ ಸ್ವತ್ಛತೆ ಅವಲೋಕಿಸಿದರು. ಈಗ ಆಸ್ಪತ್ರೆ ಸ್ವಲ್ಪ ಮಟ್ಟಿಗೆ ಸ್ವತ್ಛತೆಯಲ್ಲಿ ಸುಧಾರಣೆ ಕಂಡು ಬರುತ್ತಿದೆ. ಆದರೆ ವೈದ್ಯಕೀಯ ಸೇರಿದಂತೆ ಇತರ ಕಾರ್ಯಗಳಲ್ಲೂ ಸುಧಾರಣೆ ಆಗಬೇಕೆಂದು ಪುನರುಚ್ಚರಿಸಿದರು. ಜಿಲ್ಲಾಸ್ಪತ್ರೆ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲ ಎನ್ನುವ ಮಟ್ಟಿಗೆ ಆಗಬೇಕು ಎನ್ನುವುದು ತಮ್ಮ ಇಚ್ಛೆ. ಇದಕ್ಕೆ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿ ಸ್ಪಂದಿಸಬೇಕು ಎಂದು ಹೇಳಿದರು. ತದನಂತರ ಸಂಸದರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಗೂ ಭೇಟಿ ನೀಡಿ ಸ್ವತ್ಛತೆ ಕುರಿತು ಅವಲೋಕಿಸಿದರು.

ಆಯಷ್ಮಾನ್‌ ಭಾರತ: ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಹೀಗಾಗಿ ವೈದ್ಯಕೀಯ ಸೇವೆ ಬಲಗೊಳ್ಳಬೇಕು ಎನ್ನುವುದೇ ಪ್ರಧಾನಮಂತ್ರಿ ಮೋದಿ ಅವರ ಬಯಕೆಯಾಗಿದೆ. ಎಲ್ಲರಿಗೂ ಉತ್ಕೃಷ್ಟ ವೈದ್ಯಕೀಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಡಾ| ಉಮೇಶ ಜಾಧವ ಇದೇ ಸಂದರ್ಭದಲ್ಲಿ ಹೇಳಿದರು.

ಇಎಸ್‌ಐ ಆಸ್ಪತ್ರೆಯಲ್ಲಿ ಬಡವರಿಗೂ ವೈದ್ಯಕೀಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಆಯುಷ್ಮಾನ್‌ ಕಾರ್ಡ್‌ ಹೊಂದಿದವರಿಗೂ ವೈದ್ಯಕೀಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟು ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸದರು ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next