Advertisement

ಜಿಲ್ಲಾಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಕೇಂದ್ರಕ್ಕೆ ಚಾಲನೆ

02:26 PM Dec 30, 2021 | Team Udayavani |

ಚಿಕ್ಕಬಳ್ಳಾಪುರ: ಕ್ಷಯ ಮುಕ್ತ ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕ್ಷಯ ಪರೀಕ್ಷೆ ಮಾಡುವ ಇಗ್ರಾ (interferon Gamma Release Assay) ಪರೀಕ್ಷಾ ಕೇಂದ್ರವನ್ನು
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದಿರಾ ಆರ್‌.ಕಬಾಡೆ ಉದ್ಘಾಟಿಸಿದರು.

Advertisement

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್‌ ಬಾಬು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕ ಜಿಲ್ಲಾಸ್ಪತ್ರೆಯ
ಪ್ರಯೋಗ ಶಾಲೆಯಲ್ಲಿ (ಸುಮಾರು 4-5 ಸಾವಿರ ವೆಚ್ಚದ) ಪರೀಕ್ಷೆಯನ್ನು ಕ್ಷಯರೋಗಿಗೆ ಉಚಿತವಾಗಿ ಮಾಡಿ ಸೋಂಕು ಕಂಡು ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಎಂಡಿಆರ್‌ ರೋಗಿಗಳ ಸಂಪರ್ಕಿತರಿಗೂ ಪರೀಕ್ಷೆ ಮಾಡಿ 4 ರಿಂದ 6 ತಿಂಗಳು (ರಿಪಾಂಪಿಸಿನ್‌/ ಲಿವೋಪ್ಲಾಕ್ಸಸಿನ್‌) ಟಿಪಿಟಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಭಾರತದ ಸರ್ಕಾರದ ಆಶಯ ಮತ್ತು ಮಾರ್ಗಸೂಚಿ ಮೇರೆಗೆ ದೇಶವನ್ನು ಕ್ಷಯಮುಕ್ತಗೊಳಿಸಲು ಕ್ಷಯರೋಗ ಸೋಲಿಸಿ ದೇಶ ಗೆಲ್ಲಿಸಿ ಅಭಿಯಾನದಡಿ 2025ರ ವೇಳೆಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವ ಗುರಿ ಹೊಂದಿದೆ ಎಂದರು.

ಇನ್ನು ಮುಂದೆ ಹೊಸ ಮಾರ್ಗಸೂಚಿ (PMTPT-Programmatic Management of Tuberculosis Preventive Treatment ) ಅಡಿಯಲ್ಲಿ ಟಿ.ಬಿ.ಬ್ಯಾಕ್ಟೀರಿಯಾ ಸೋಂಕಿತ ಕ್ಷಯರೋಗಿಗಳ ಜತೆಯಲ್ಲಿ ವಾಸಿಸುವ ಮತ್ತು ನಿರಂತರ ಸಂಪರ್ಕದಲ್ಲಿರುವ 5 ವರ್ಷ ಮೇಲ್ಪಟ್ಟ ಎಲ್ಲರಿಗೂ ರಕ್ತ ಪರೀಕ್ಷೆ ಮಾಡುವ ಮೂಲಕ ರಕ್ತದಲ್ಲಿರುವ ಟಿ.ಬಿ.ರೋಗಾಣುವಿನ ಜೀವ ಕೋಶದ ಸೋಂಕನ್ನು ಪತ್ತೆಹಚ್ಚಿ ಅವರಿಗೂ 3-6 ತಿಂಗಳ ಟಿಪಿಟಿ (ಐಸೋನಿಯಾ ಜಡ್‌ ) ಯ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಜನವರಿ 2021 ರಿಂದ ಇಲ್ಲಿಯವರೆಗೆ ಒಟ್ಟು 1592 ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು 887 ಜನ ಬ್ಯಾಕ್ಟೀರಿಯಾ ಸೋಂಕಿನ ಶ್ವಾಸಕೋಶದ ರೋಗಿಗಳಾಗಿದ್ದು ಅವರೊಂದಿಗೆ
ಸಂಪರ್ಕದಲ್ಲಿರುವ ಒಟ್ಟು 2642 ಜನರಿಗೆ ಕ್ಷಯ ಪತ್ತೆ ಪರೀಕ್ಷೆ ಮಾಡುವ ಗುರಿ ಹೊಂದಿದೆ ಎಂದರು.

Advertisement

ಮೆಡಿಕಲ್‌ ಕಾಲೇಜಿನ ಡೀನ್‌ ಸಿದ್ಧಿಕಿ, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌, ಆರೋಗ್ಯ ಇಲಾಖೆಯ ವೈದ್ಯರು, ದಾದಿಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next