Advertisement

Indi ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ದಿಢೀರ್ ಭೇಟಿ: ಕೆಂಡಾಮಂಡಲ

11:57 PM Nov 02, 2023 | Vishnudas Patil |

ಇಂಡಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಬಸವರಾಜ್ ಹುಬ್ಬಳ್ಳಿ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಲ್ಲಿನ ವೈದ್ಯರು ಮತ್ತು ಸಿಬಂದಿಗಳ ವಿರುದ್ದ ಹರಿಹಾಯ್ದರು.

Advertisement

ಅವರು ಬರುವ ಪೂರ್ವದಲ್ಲಿಯೇ ಮುಖ್ಯ ವೈದ್ಯಾಧಿಕಾರಿಗಳಿಗೆ ತಾವು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸಹ ಹಲವು ಸಿಬಂದಿಗಳು, ವೈದ್ಯರು ಗೈರು ಹಾಜರಾಗಿದ್ದನ್ನು ಕಂಡು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲು ತಿಳಿಸಿದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡ ಅವರು ಅಲ್ಲಿನ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯರು, ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ನೀವೆಲ್ಲ ಬದಲಾಗಬೇಕು. ಸರಿಯಾಗಿ ನಿಮ್ಮ ನಿಮ್ಮ ಕರ‍್ಯ ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಕೊಟ್ಟರು.

ಇದನ್ನೂ ಓದಿ : Indi ಆಸ್ಪತ್ರೆಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷದ ದೂರು: ತನಿಖೆಗೆ ತಂಡ

ಜಿಲ್ಲಾ ಆರೋಗ್ಯಾಧಿಕಾರಿಗಳು ಬರುತ್ತಿದ್ದರೂ ಆಸ್ಪತ್ರೆಯಲ್ಲಿ ವಿದ್ಯುತ್ ಬಲ್ಬಗಳು ಉರಿಯದೇ ಕತ್ತಲು ಆವರಿಸಿದ್ದನ್ನು ಕಂಡು ಅಲ್ಲಿನ ಸಿಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ನಾಳೆ ಸಾಯಂಕಾಲದ ಒಳಗಾಗಿ ಇಲ್ಲಿ ವಿದ್ಯುತ್ ದೀಪ ಹಾಕಿಸಬೇಕು ಎಂದು ತಿಳಿಸಿದರು.

Advertisement

ಅಧಿಕಾರಿಗಳು ಬಂದಾಗಲೂ ಆಸ್ಪತ್ರೆಯಲ್ಲಿ ವಿದ್ಯುತ್ ದೀಪ ಇರಲಿಲ್ಲ, ಡಯಾಲಿಸಿಸ್ ಕೋಣೆಯನ್ನು ಮುಚ್ಚಲಾಗಿತ್ತು, ಡಯಾಲಿಸಿಸ್ ಕೋಣೆ ತೆರೆಯಲು ಸುಮಾರು ಅರ್ಧ ಗಂಟೆಗಳ ಕಾಲ ಡಿಹೆಚ್‌ಓ ಕಾದರು.

ಡಿಹೆಚ್‌ಓ ಮುಂದೆ ಆಸ್ಪತ್ರೆಯ ಸಮಸ್ಯೆಗಳನ್ನು ತೆರೆದಿಟ್ಟ ಸಾರ್ವಜನಿಕರು ಜಿಲ್ಲಾ ಆರೋಗ್ಯ ಅಧಿಕಾರಿಗಳ ಭೇಟಿ ಮಾಡಿ ಅಲ್ಲಿನ ಅವ್ಯವಸ್ಥೆಗಳಾದ ಸ್ವಚ್ಛತೆ , ವಿದ್ಯುತ್ ಇಲ್ಲದಿರುವುದು, ಬಾಣಂತಿಯರಿಗೆ ಬಿಸಿ ನೀರಿಲ್ಲ, ಬಾಣಂತನದ ನಂತರ ಅವರನ್ನು ಅಡ್ಮಿಟ್ ಮಾಡಿಕೊಳ್ಳಲ್ಲ, ಅವರಿಗೆ ಊಟ ನೀಡಲಾಗುತ್ತಿಲ್ಲ, usg machine ಪ್ರಾರಂಭವಾಗಿಲ್ಲ, ಆಸ್ಪತ್ರೆಗೆ ಕೆಲ ಸಿಬಂದಿಗಳು ಕುಡಿದ ನಶೆಯಲ್ಲಿ ಬಂದು ಕಾರ್ಯ ಮಾಡುತ್ತಾರೆ. ಸಿಬಂದಿಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬಿತ್ಯಾದಿ ಇತ್ಯಾದಿ ಆರೋಪಗಳನ್ನು ಮಾಡಿದರು.

ಆರೋಗ್ಯಧಿಕಾರಿಗಳು ಇನ್ನು 15 ದಿನಗಳ ಒಳಗಾಗಿ ಈ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿ ಎಲ್ಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಾಗಿ ಬರವಸೆ ನೀಡಿದರು.

ಬುಧವಾರ ಡಯಾಲಿಸಸ್ ಚಿಕಿತ್ಸೆಗೆ ಬಂದ ಮಹಿಳೆಗೆ ಸಿಬ್ಬಂದಿ ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ್ದು ಮಹಿಳೆ ಸಾವನ್ನಪ್ಪಿದ್ದು ಅದಕ್ಕೆ ಏನು ಕ್ರಮ ಕೈಗೊರ್ಳಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಈಗಾಗಲೆ ಈ ಕುರಿತು ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮುಂದೆ ಈ ರೀತಿಯಾಗದಂತೆ ನಿಗಾ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಜೆ.ಎಂ. ಬೀಳಗಿ, ವೈದ್ಯರಾದ ವಿಪುಲ್ ಕೋಳೆಕರ್, ಅಮಿತ್ ಕೊಳೇಕರ್, ಜಗದೀಶ ಬಿರಾದಾರ, ವಿಕಾಸ ಸಿಂದಗಿ, ಸಂತೋಶ ಪವಾರ, ಶ್ರೀಮಂತ ತೋಳನೂರ, ಶಾಂತೇಶ ಹಿಪ್ಪರಗಿ, ಗಜಾಕೋಶ, ಶಿವಾಜಿ ಮಾನೆ, ಪ್ರವೀಣ ಕೆ, ಶಾಂತು ಹೊಸಮನಿ, ಗುರುರಾಜ ಪಾಟೀಲ, ಬಸವರಾಜ ಡವಳಗಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next