Advertisement

ಅಪೌಷ್ಟಿಕತೆ ಸುಧಾರಣೆಯಲ್ಲಿ ಜಿಲ್ಲೆ ವಿಫ‌ಲ

04:54 PM Nov 23, 2019 | Team Udayavani |

ರಾಮನಗರ: ಅಪೌಷ್ಟಿಕತೆಗೆ ಚಿಕಿತ್ಸೆ ಪಡೆಯುತ್ತಿರುವ ಶೇ. 90ರಷ್ಟು ಮಕ್ಕಳಲ್ಲಿ ನಿರೀಕ್ಷಿತ ಫ‌ಲಿತಾಂಶ ದೊರೆಯುತ್ತಿಲ್ಲ. ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ತಿಳಿಸಿದರು.

Advertisement

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿರುವ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ನಾನು ಮತ್ತು ಆಯೋಗದ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು 270 ಅಪೌಷ್ಟಿಕ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ನಮ್ಮ ತಂಡ ಪ್ರವಾಸ ಮಾಡಿದ್ದು, ಅಪೌಷ್ಟಿಕ ಮಕ್ಕಳಲ್ಲಿ ಸುಧಾರಣೆಯ ವೈಪಲ್ಯ ಹೆಚ್ಚು ಕಂಡಿದ್ದು ರಾಮನಗರದಲ್ಲಿ ಎಂದರು. ಅಪೌಷ್ಟಿಕತೆಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಆಹಾರವನ್ನು ಸಲಹೆಯಂತೆ ಮಕ್ಕಳಿಗೆ ಕೊಡುತ್ತಿಲ್ಲ. ಎಂಬುದು ತಮ್ಮ ಪರಿಶೀಲನೆಯಿಂದ ವ್ಯಕ್ತವಾಗಿದೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರಿಂದಲೂ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಸಿಬ್ಬಂದಿ ವಜಾಕ್ಕೆ ಶಿಪಾರಸ್ಸು: ಎರಡು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನ 6 ಅಂಗನವಾಡಿಗಳಿಗೆ ಭೇಟಿ ನೀಡಲಾಗಿದೆ. ಕೆಲವು ಅಂಗನವಾಡಿಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ಸಮಸ್ಯೆಗಳು ಕಂಡುಬಂದಿದೆ. ಸಮಯಕ್ಕೆ ಸರಿಯಾಗಿ ಕೇಂದ್ರಗಳು ತೆರೆಯುತ್ತಿಲ್ಲ. ಹೀಗಾಗಿ ಅಲ್ಲಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ, ಹಾಲು ಇತ್ಯಾದಿ ಆಹಾರ ದೊರೆಯುತ್ತಿಲ್ಲ. ಅಲ್ಲದೆ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿನ ಸ್ಟಾಕ್‌ ರೆಜಿಸ್ಟರ್‌ಗೂ ವಾಸ್ತವದಲ್ಲಿರುವ ಸ್ಟಾಕ್‌ಗೂ ಅಜಗಜಾಂತರ ವ್ಯತ್ಯಾಸವಿತ್ತು. ಈ ಎಲ್ಲಾ ನ್ಯೂನತೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಹಾಸ್ಟೆಲ್‌ಗ‌ಳಲ್ಲಿ ಅವ್ಯವಸ್ಥೆ: ಜಿಲ್ಲೆಯ ನಾಲ್ಕೂ ತಾಲೂಕು ಗಳ ಪೈಕಿ ಕೆಲವೊಂದು ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು. ಕೆಲವು ಹಾಸ್ಟೆಲ್‌ಗ‌ಳಲ್ಲಿರುವ ಬಯೋಮೆಟ್ರಿಕ್‌ ಸಾಧನ ದಲ್ಲಿನ ಹಾಜರಾತಿಗೂ, ವಾಸ್ತವದಲ್ಲಿ ಅಲ್ಲಿದ್ದ ಮಕ್ಕಳ ಸಂಖ್ಯೆಗೂ ತಾಳೆಯಾಗಲಿಲ್ಲ. ಮಾಗಡಿ ತಾಲೂಕಿನ ಸೋಮೇಶ್ವರ ಬಡಾವಣೆಯಲ್ಲಿರುವ ಹಾಸ್ಟಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಕಾರ್ಯನಿರ್ವಹಣೆ ತೃಪ್ತಿಕರವಾಗಿರಲಿಲ್ಲ. 100 ವಿದ್ಯಾರ್ಥಿಗಳು ದಾಖಲಾಗಲು ಅವಕಾಶ ಇರುವ ಈ ಹಾಸ್ಟಲ್‌ನಲ್ಲಿ ಕೇವಲ 9 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪರಿಶೀಲನೆ ವೇಳೆ ಕೇವಲ 5 ಮಂದಿ ವಿದ್ಯಾರ್ಥಿಗಳು ಇದ್ದರು. ಇವರಿಗೆ 5 ಮಂದಿ ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ಧಾರೆ ಎಂದರು. ತಾವು ಭೇಟಿ ಮಾಡಿದ ಹಾಸ್ಟೆಲ್‌ಗ‌ಳ ಪೈಕಿ ಅತ್ಯಂತ ಕೊಳಕು ತುಂಬಿದ ಹಾಸ್ಟೆಲ್‌ ಇದಾಗಿತ್ತು.

ಕಂಸಾಗರ ಶಾಲೆಯ ಕಟ್ಟಡ ದುರಸ್ತಿಗೆ ಶಿಪಾರಸ್ಸು: ಚನ್ನಪಟ್ಟಣದ ಸಿಂಗರಾಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಬ್ಬಂದಿಯ ಕೊರತೆ ಕಂಡು ಬಂದಿದೆ. ಕನಕಪುರ ತಾಲೂಕಿನ ಕಂಸಾಗರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಹಾಜರಾತಿ ಇದೆ. ಆದರೆ ಕಟ್ಟಡ ಶಿಥಿಲವಾಗಿದೆ. ಸ್ಥಳದ ಕೊರತೆಯೂ ಇದೆ. 80 ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಬೇಕಾದಷ್ಟು ತಟ್ಟೆಗಳು ಇಲ್ಲ. ಮೊದಲು 50 ವಿದ್ಯಾರ್ಥಿಗಳು ಊಟ ಮಾಡಿದ ನಂತರ ಉಳಿದ ವಿದ್ಯಾರ್ಥಿಗಳು ಊಟ ಮಾಡಬೇಕಾಗಿದೆ. ಎರಡು ಪಾಳಿಗಳಲ್ಲಿ ಊಟ ಮಾಡುವ ಸ್ಥಿತಿ ಅಲ್ಲಿದೆ. ಈ ಕೊರತೆಯನ್ನು ನೀಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಅಲ್ಲದೆ ಕಟ್ಟಡ ದುರಸ್ತಿಗೆ ಶಿಪಾರಸ್ಸು ಮಾಡಲಾಗಿದೆ ಎಂದರು.

Advertisement

ಅಧಿಕಾರಿಗಳ ಸಭೆ: ಇದಕ್ಕೂ ಮುನ್ನ ಆಯೋಗದ ಸದಸ್ಯರು ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಡಿ.ಜಿ ಹಸಿ, ಶಿವಶಂಕರ್‌, ಮಂಜುಳಾ ಬಾಯಿ, ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಡೆಯ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ 9 ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಲಾಗಿದೆ. ನಿಗದಿಪಡಿಸಿದ ಅವದಿಗೆ ತೆರೆಯಬೇಕು ಎಂದ ಸಲಹೆ ನೀಡಲಾಗಿದೆ ಎಂದರು. ಈ ವೇಳೆ ಆಯೋಗದ ಸದಸ್ಯರಾದ   ಡಿ.ಜಿ.ಹಸಿº, ಶಿವಶಂಕರ್‌, ಮಂಜುಳಾ ಬಾಯಿ ಇದ್ದು ಅಗತ್ಯ ಮಾಹಿತಿ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next