Advertisement

ಜಿಲ್ಲೆ ಬರ ಪೀಡಿತ ಪ್ರದೇಶ: ಘೋಷಣೆಗೆ ಕಿಸಾನ್‌ ಸಂಘ ಒತ್ತಾಯ 

10:04 PM Apr 12, 2019 | mahesh |

ಕುಂಬಳೆ: ಭಾರತೀಯ ಕಿಸಾನ್‌ ಸಂಘದ ಕಾಸರಗೋಡು ಜಿಲ್ಲಾ ಮಟ್ಟದ ಸಮಾವೇಶವು ಕಾಸರಗೋಡು ಟೌನ್‌ ಬ್ಯಾಂಕಿನ ಸಭಾಭವನದಲ್ಲಿ ಜರಗಿತು. ಸಮಾವೇಶವನ್ನು ಉದ್ಘಾಟಿಸಿ ಸಂಘಟನೆಯ ರಾಜ್ಯ ಸಂಘಟನ ಕಾರ್ಯದರ್ಶಿ ರಮೇಶ್‌ ಐ. ಅವರು ಮಾತನಾಡಿ ದಿನದಿಂದ ದಿನಕ್ಕೆ ಬಿಸಿಲಿನ ಅತೀವ ತಾಪದಿಂದ ಜಲಮಟ್ಟ ಕುಸಿಯುತ್ತಿದ್ದು 12 ಜನ ಸಾವನ್ನಪ್ಪಿದ್ದಾರೆ.

Advertisement

ಸುಮಾರು 400 ಜನರಿಗೆ ಸೂರ್ಯತಾಪದಿಂದ ಶರೀರದಲ್ಲಿ ಗುಳ್ಳೆಗಳು ಬಿದ್ದಿದ್ದು ಜಿಲ್ಲೆಯಲ್ಲಿ ಈ ರೋಗ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುತ್ತದೆ.ಹೊಳೆ, ಬಾವಿ, ಕೆರೆಗಳು ಬರಡಾಗಿ ತೋಟ ಗದ್ದೆಗಳು ಒಣಗಿ ಕೃಷಿ ನಷ್ಟವಾಗಿರುತ್ತದೆ. ಅತಿವೃಷ್ಟಿಯಿಂದ ಕಂಗಾಲಾದ ರೈತರ ಕೃಷಿ ಉತ್ಪಾದನೆ ನಾಶವಾಗಿದೆ. ಕೃಷಿಕರಿಗೆ ಸರಕಾರದಿಂದ ಈ ತನಕ ಯಾವುದೇ ಪರಿಹಾರ ದೊರೆಯದೇ ಸಂಕಷ್ಟಕ್ಕೀಡಾಗಬೇಕಾಗಿದೆ. ಸರಕಾರದಿಂದ ಪರಿಹಾರಕ್ಕೆ ಕೃಷಿಕರು ಈ ಹಿಂದೆ ಮನವಿ ಸಲ್ಲಿಸಿದ್ದರೂ ಜಿಲ್ಲಾ ಕೃಷಿ ಅಧಿಕಾರಿಗಳಲ್ಲಿ ಕೇಳಿದರೆ ಸರಕಾರದ ಎಸ್‌.ಡಿ.ಆರ್‌.ಎಫ್‌ ಮತ್ತು  ಡಬ್ಲೂé.ಡಿ.ಆರ್‌.ಎಫ್‌. ನಲ್ಲಿ  ಫಂಡ್‌ ಇಲ್ಲವೆಂಬ ಸಬೂಬು ಇವರದು. ಆದುದರಿಂದ ರೈತರ ಸಾಲ ಮನ್ನಾ ಮಾಡಬೇಕು, ರೈತರಿಂದ ಬಲಾತ್ಕಾರವಾಗಿ ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ವಸೂಲಿ ಮಾಡಬಾರದು, ಉದ್ಯೋಗ ಖಾತರಿ ಯೋಜನೆಯ ಕೂಲಿಯಾಳುಗಳನ್ನು ಭತ್ತದ ಕೃಷಿಗೂ ವಿಸ್ತರಿಸಬೇಕು. ಹಾಲು ಉತ್ಪಾದಕರಿಗೆ ಮತ್ತು ರಬ್ಬರ್‌ ಉತ್ಪಾದಕರಿಗೆ ಬಾಕಿ ನೀಡಬೇಕಾದ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಬೇಕು. ಊರ ತಳಿಯ ದನ ಸಾಕಣೆಗೆ ಪ್ರೋತ್ಸಾಹ ನೀಡಬೇಕು.

ತೆಂಗಿನ ಕಾಯಿ ಕೃಷಿ ಆಭಿವೃದ್ಧಿ ನಿಗಮ ನೀಡುತ್ತಿರುವ ರಸಗೊಬ್ಬರ ಮುಂತಾದ ಸವಲತ್ತುಗಳನ್ನು ಪುನ:ಆರಂಭಿಸಬೇಕು. ನದಿ ನೀರು ಎತ್ತುವ ಮತ್ತು ಕೃಷಿ ಉಪಯೋಗಕ್ಕೆ ಕೊರೆಯುವ ಬೋರ್‌ವೆಲ್‌ಗ‌ಳಿಗೆ ಸರಕಾರ ಅಡೆತಡೆಯನ್ನು ನಿವಾರಿಸಬೇಕು. ರೈತರ ಸಮಸ್ಯೆಗಳಿಗೆ ಸರಕಾರ ಕೂಡಲೇ ಸ್ಪಂದಿಸಿ ಪರಿಹಾರವನ್ನು ನೀಡಬೇಕೆಂದು ಸರಕಾರಕ್ಕೆ  ಮನವಿಯನ್ನು ಸಲ್ಲಿಸಿದ್ದು ಇದನ್ನು ಸರಕಾರ ತಕ್ಷಣ ಪರಿಹರಿಸಬೇಕೆಂದರು.

ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಿಸಾನ್‌ ಸಂಘದ ಪಾತ್ರ ಮತ್ತು ಕಾರ್ಯದ ಬಗ್ಗೆ  ಚರ್ಚಿಸಿ ಈ ವರೆಗೆ ದೇಶದ ಆಡಳಿತ ನಡೆಸಿದ ಪ್ರಧಾನಿಗಳಲ್ಲಿ ನರೇಂದ್ರ  ಮೋದಿಯವರು ಉಪಲಬ್ಧಿ ಉತ್ತಮಮ್‌ ಎಂಬ ಸಂಸ್ಕಾರ‌ ಶ್ಲೋಕದಂತೆ ಉತ್ತಮರಾಗಿದ್ದು ದೇಶದ ಸುರಕ್ಷೆ ಭ್ರಷ್ಟಾಚಾರ ರಹಿತ ಆಡಳಿತ, ಸರ್ವರಿಗೂ ನ್ಯಾಯ, ಉತ್ತಮ
ಕನಿಷ್ಠ ಬೆಂಬಲ ಬೆಲೆ ನೀಡಿ
ವಿದೇಶದಲ್ಲಿರುವಂತೆ ಕೃಷಿಕರ ಎಲ್ಲ ಉತ್ಪನ್ನಗಳಿಗೂ ಕನಿಷ್ಠ ಬೆಂಬಲಬೆಲೆ ನೀಡುವ ಯೋಜನೆ ಅಡಿಕೆ ರಬ್ಬರ್‌ ಭತ್ತ, ಕರಿಮೆಣಸಿಗೂ ವಿಸ್ತರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕೊಮ್ಮಂಡ ಸದಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ
Advertisement

Udayavani is now on Telegram. Click here to join our channel and stay updated with the latest news.

Next