Advertisement

ಕಳ್ಳಿ ಲಿಂಗಸೂಗೂರಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ; ಸ್ಥಳದಲ್ಲೇ ಸಮಸ್ಯೆ ನಿವಾರಿಸಲು ಸೂಚನೆ

05:02 PM Feb 17, 2021 | Team Udayavani |

ರಾಯಚೂರು: ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಕುರಿತು ಕಂದಾಯ ಸಚಿವ ಆರ್‌.ಅಶೋಕ ಮಂಗಳವಾರ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ನಗರದ ಡಿಸಿ ಕಚೇರಿಯ ವಿಡಿಯೋ ಕಾನ್ಫರೆನ್ಸ್‌ ಸಭಾಂಗಣದಲ್ಲಿ ಅಪರ ಜಿಲ್ಲಾಧಿ ಕಾರಿ
ದುರಗೇಶ್‌ ಭಾಗವಹಿಸಿ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.

Advertisement

ಈ ವೇಳೆ ಮಾತನಾಡಿದ ಎಡಿಸಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಮನೆ ಬಾಗಿಲಿಗೆ ಮಾಸಾಶನ, ಕಂದಾಯ ಗ್ರಾಮಗಳ ರಚನೆ ಇತ್ಯಾದಿ ವಿಷಯಗಳ ಕುರಿತು ಜಿಲ್ಲಾ ಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವರು. ಫೆ.20ರಂದು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಳ್ಳಿ ಲಿಂಗಸೂಗೂರಿನಲ್ಲಿ ಡಿಸಿ ಗ್ರಾಮ ವಾಸ್ತವ್ಯ ಮಾಡುವರು. ಗ್ರಾಮ ವಾಸ್ತವ್ಯಕ್ಕೆ ಸಂಬಂಧಿ ಸಿದಂತೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿ ಕಾರಿಗಳಿಗೆ
ತಿಳಿಸಿದರು.

ಅಂದು ಪರಿಶಿಷ್ಟ ಜಾತಿ, ಪಂಗಡ ಕಾಲೋನಿಗೆ ಭೇಟಿ ನೀಡಲಾಗುವುದು. ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಲಾಗುವುದು,
ಕಂದಾಯ ಫಲಾನುಭವಿಗಳಿಗೆ ಪೌತಿ ಖಾತೆ, ಪಹಣಿ ವಿತರಿಸುವ ಕಾರ್ಯ ಮಾಡಲಾಗುವುದು, ಸಂಜೆ 4-5ರವರೆಗೆ ಚುನಾಯಿತ ಜನಪ್ರತಿನಿಧಿ ಗಳೊಂದಿಗೆ
ಫಲಾನುಭವಿಗಳಿಗೆ ಆದೇಶ ನೀಡಲಾಗುವುದು ಎಂದರು. ಸಾಮಾಜಿಕ ಭದ್ರತೆ ಯೋಜನೆಗಳು, ವಿಕಲಚೇತನರಿಗೆ ಕೃತಕ ಕಾಲು ಜೋಡಣೆ, ಕಂದಾಯ ಇಲಾಖೆಗೆ ಸಂಬಂಧಿ ಸಿದ ಸಮಸ್ಯೆಗಳನ್ನು ಬಗೆಹರಿಸುವುದು, ಗ್ರಾಮಗಳಲ್ಲಿ ರುದ್ರಭೂಮಿಗೆ ಸ್ಥಳ ಗುರುತಿಸಲಾಗುವುದು ಎಂದರು.

ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವರು. ಜಿಲ್ಲೆಯ ಸಿರವಾರ,
ಮಸ್ಕಿ ತಾಲೂಕಿಗೆ ತಹಶೀಲ್ದಾರರ ಹುದ್ದೆ ಖಾಲಿಯಿದ್ದು, ಶೀಘ್ರ ಭರ್ತಿ ಮಾಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಯಾವ ತಾಲೂಕಿಗೆ ಭೇಟಿ ನೀಡುತ್ತಾರೋ ಆ ತಾಲೂಕಿನ ತಹಶೀಲ್ದಾರರನ್ನು ಹೊರತುಪಡಿಸಿ ಉಳಿದ ತಾಲೂಕಿನ ತಹಶೀಲ್ದಾರರು
ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ತಿಂಗಳ ಮೂರನೇ ಶನಿವಾರ ವಾಸ್ತವ್ಯ ಮಾಡಬೇಕು ಎಂದರು.

Advertisement

ಕಂದಾಯ ಸಚಿವ ಆರ್‌.ಅಶೋಕ ಸಂವಾದದಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು ಕಡ್ಡಾಯವಾಗಿ ಗ್ರಾಮ ವ್ಯಾಸ್ತವ್ಯ ಮಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಬೇಕು. ಇದೇ ವೇಳೆ ವಿಕಲಚೇತನರಿಗೆ ಕೃತಕ ಕಾಲು, ಕೈ ಜೋಡಣೆಯಂತ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ತಹಶೀಲ್ದಾರ್‌ ಡಾ| ಹಂಪಣ್ಣ ಸಜ್ಜನ್‌, ಬಲರಾಮ ಕಟ್ಟಿಮನಿ, ಮಾಧುರಾಜ, ಮಂಜುನಾಥ, ಪ್ರಶಾಂತ ಕುಮಾರ್‌ ಇತರರಿದ್ದರು. ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರ, ಸಿರವಾರ ತಾಲೂಕಿನ ಜಂಬಲದಿನ್ನಿ, ದೇವದುರ್ಗ ತಾಲೂಕಿನ ಅರಕೇರಾ, ಸಿಂಧನೂರು ತಾಲೂಕಿನ ಸಾಸಲಮರಿ ಹಾಗೂ ಮಸ್ಕಿ ತಾಲೂಕಿನ ತಲೇಕಾನ್‌ ಗ್ರಾಮದಲ್ಲಿ ತಹಶೀಲ್ದಾರರು ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next