Advertisement

ಮತ ಎಣಿಕೆಗೆ ಕಲಬುರಗಿ ಜಿಲ್ಲಾಡಳಿತ ಸಜ್ಜು

11:15 AM May 15, 2018 | |

ಕಲಬುರಗಿ: ಜಿಲ್ಲೆಯ 9 ಕ್ಷೇತ್ರಗಳ ಮತ ಏಣಿಕೆ ಕಾರ್ಯ ಮೇ 15ರಂದು ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸೋಮವಾರ ಮತ ಏಣಿಕೆ ಕೇಂದ್ರಗಳಲ್ಲಿ ಸಿದ್ಧತೆ ಪರಿಶೀಲಿಸಿದ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಮತ ಎಣಿಕೆ ಕಾರ್ಯ ಮೇ 15ರಂದು ಬೆಳಗ್ಗೆ 8:00ಕ್ಕೆ ಪ್ರಾರಂಭವಾಗಿದೆ. ಇದಕ್ಕಾಗಿ ಸುಮಾರು 485 ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಮತ ಎಣಿಕೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಮತಕ್ಷೇತ್ರದಲ್ಲಿ ಮತ ಎಣಿಕೆಗಾಗಿ 14 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಓರ್ವ ಮತ ಎಣಿಕೆ ಸೂಪರವೈಸರ್‌, ಅಸಿಸ್ಟಂಟ್‌ ಹಾಗೂ ಮೈಕ್ರೋ ಅಬ್ಸರ್ವರ್‌ ಗಳನ್ನು ನೇಮಿಸಲಾಗಿದೆ. ಸರಿ ಸುಮಾರು 19ರಿಂದ 20 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಬೆಳಗ್ಗೆ 7:00ರಿಂದ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಅಂಚೆ ಮತಗಳನ್ನು ಸಹ ಎಣಿಕೆ ಮಾಡಲಾಗುವುದು.

ಮತ ಎಣಿಕಾ ಕೇಂದ್ರ ಹಾಗೂ ಸುತ್ತಮುತ್ತಲೂ ಸಂಪೂರ್ಣವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮತದಾನಕ್ಕೆ ಬಳಸಿರುವ ಇಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ಭದ್ರಕೋಣೆಯಲ್ಲಿ ಸಂಗ್ರಹಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆಗೆ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಭದ್ರತೆಗೆ ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಹಾಗೂ
ಸಿವಿಲ್‌ ಪೊಲೀಸ್‌ ಬಳಸಿಕೊಳ್ಳಲಾಗುತ್ತಿದೆ. ಮತ ಎಣಿಕೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾದ್ಯಂತ ಮೇ 13ರ ರಾತ್ರಿಯಿಂದ ಮೇ 16ರ ಬೆಳಗಿನವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುವ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಹಾಗೂ ನಿಷೇಧಿ ಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ಶೇ. 62.60ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಅಫಜಲಪುರ ಶೇ. 67.45, ಜೇವರ್ಗಿ ಶೇ. 68.58, ಚಿತ್ತಾಪುರ ಶೇ. 60.64, ಸೇಡಂ ಶೇ. 73.34, ಚಿಂಚೋಳಿ ಶೇ. 68.47, ಕಲಬುರಗಿ ಗ್ರಾಮೀಣ ಶೇ. 60.34, ಕಲಬುರಗಿ ದಕ್ಷಿಣ ಶೇ. 52.46, ಕಲಬುರಗಿ ಉತ್ತರ ಶೇ. 49.99 ಹಾಗೂ ಆಳಂದ ಶೇ. 68.20ರಷ್ಟು ಮತದಾನವಾಗಿದೆ.

Advertisement

ವಾಡಿಕೆಯಂತೆ ಕಲಬುರಗಿ ನಗರದಲ್ಲಿರುವ ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿದೆ. ಸೇಡಂ ಮತಕ್ಷೇತ್ರವು ಅತಿ ಹೆಚ್ಚು ಮತದಾನಕ್ಕೆ ಭಾಜನವಾಗಿದೆ. ಜಿಲ್ಲಾದ್ಯಂತ ಕಡಿಮೆ ಮತದಾನವಾಗಲು ಬಿಸಿಲು ಹಾಗೂ ಮತದಾನ ದಿನದಂದು ಅನಿರೀಕ್ಷಿತವಾಗಿ ಸಾಯಂಕಾಲ ಸುರಿದ ಮಳೆ ಕಾರಣವಾಗಿರಬಹುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದೇ ಪ್ರಕರಣಗಳು ನಡೆದಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಮೊದಲ ಹಂತವಾಗಿ ಭದ್ರತಾ ಕೋಣೆ ಹತ್ತಿರ ಪ್ಯಾರಾ ಮಿಲಿಟರಿ ತಂಡ, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್‌ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಸುಮಾರು 4000 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕೇಂದ್ರದ ಭದ್ರತೆಗೆ ನೇಮಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎನ್‌
ಐಸಿ ಅಧಿಕಾರಿ ಸುಧಿಧೀಂದ್ರ ಅವಧಾನಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌
ಅಜೀಜುದ್ದೀನ್‌ ಇದ್ದರು.

ವಿವಿ ಪ್ಯಾಟ್‌ ಚೀಟಿ ಎಣಿಕೆ ಇವಿಎಂ ಯಂತ್ರದಲ್ಲಿ ದಾಖಲಾದ ಮತಗಳು ವಿವಿ ಪ್ಯಾಟ್‌ದಲ್ಲಿನ ಚೀಟಿಗಳು ತಾಳೆಯಾಗುವುದನ್ನು ಖಾತ್ರಿ ಪಡಿಸಲು ಪ್ರತಿ ವಿಧಾನಸಭಾ ಕ್ಷೇತ್ರವೊಂದರೆ ಮತಗಟ್ಟೆಯೊಂದರ ಎಣಿಕೆ ಮಾಡಲಾಗುವುದು. ಲಾಟರಿ ಮೂಲಕ ಪ್ರತಿ ಮತಕ್ಷೇತ್ರದಿಂದ ಒಂದು ಮತಗಟ್ಟೆ ಆಯ್ಕೆ ಮಾಡಿ ಆ ಮತಗಟ್ಟೆಗೆ ಸಂಬಂ ಸಿಧಿದ ವಿವಿ ಪ್ಯಾಟ್‌ ಯಂತ್ರದಲ್ಲಿರುವ ಮತದಾನದ ಚೀಟಿ ಎಣಿಕೆ ಮಾಡಲಾಗುವುದು. ಒಟ್ಟಾರೆ ಇವಿಎಂ ಯಂತ್ರದ ಎಣಿಕೆಯೊಂದಿಗೆ ತಾಳೆ ನೋಡಲಾಗುವುದು.
ಆರ್‌. ವೆಂಕಟೇಶಕುಮಾರ, ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next