Advertisement

ಇಂದಿರಮ್ಮನ ಕೆರೆಗೆ ಜಿಲ್ಲಾಧಿಕಾರಿ ಭೇಟಿ

09:12 AM Aug 16, 2019 | Suhan S |

ಅಳ್ನಾವರ: ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಕೇರಿ ಇಂದಿರಮ್ಮನ ಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕೆರೆ ನಿರ್ಮಾಣದ ನಂತರ ಈ ವರ್ಷ ಅಧಿಕ ಮಳೆಯಾಗಿದ್ದು, ಅಪಾಯದ ಮಟ್ಟ ಮೀರಿ ನೀರು ಭರ್ತಿಯಾಗಿತ್ತು. ಕೆರೆಯ ಪಕ್ಕದಲ್ಲಿ ಕೊರೆತ ಉಂಟಾಗಿದ್ದಲ್ಲದೇ ಒಡ್ಡು ಒಡೆಯುವ ಭೀತಿ ಎದುರಾಗಿತ್ತು. ಅಳ್ನಾವರ ಪಟ್ಟಣದ ಅರ್ಧ ಭಾಗ ಮುಳುಗುವ ಭೀತಿ ಆವರಿಸಿ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಹಾಗಾಗಿ ಭವಿಷ್ಯತ್ತಿನಲ್ಲಿ ಇಂತಹ ಅಪಾಯ ಎದುರಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಾಳಾದ ಕೆರೆಯ ಭಾಗವನ್ನು ಪುನರ್‌ ನಿರ್ಮಾಣ ಮಾಡಲು ನುರಿತ ತಜ್ಞರ ಸಲಹೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಳೆಯಿಂದ ಹಾಳಾದ ಬೆಳೆ ಸಮೀಕ್ಷೆ ಮಾಡಲು ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ತಂಡವನ್ನು ರಚನೆ ಮಾಡಲಾಗುತ್ತದೆ. ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಹಾನಿಯ ಅಂದಾಜನ್ನು ಸಲ್ಲಿಸಲಾಗುತ್ತದೆ. ಪರಿಹಾರಕ್ಕೆ ಅನುದಾನದ ಕೊರತೆ ಇಲ್ಲ ಎಂದು ಡಿಸಿ ಹೇಳಿದರು.

ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ನೋಡಲ್ ಅಧಿಕಾರಿ ವಿನಾಯಕ ಪಾಲನಕರ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ತಹಶೀಲ್ದಾರ್‌ ಅಮರೇಶ ಪಮ್ಮಾರ, ಯಲ್ಲಪ್ಪ ಬೆಳಗಾವಿ, ಗುರುರಾಜ ನರಗುಂದ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next